ಬೆಂಗಳೂರು: ಜುಲೈ 1ರಿಂದ 7ರವರೆಗೆ ವನಮಹೋತ್ಸವ (Van mahotsav) ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಈ ವರ್ಷ 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ (Forest Department) ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡಲಾಗುವುದು. ಪರಿಸರ ಸಂರಕ್ಷಣೆ, ಅರಣ್ಯವನ್ನು ಸಂಪತನ್ನು ಹೆಚ್ಚಿಸುವುದು ನಮ್ಮ ಗುರಿ. ರೈತರಿಗೆ (Farmers) ಕಡಿಮೆ ದರದಲ್ಲಿ ಸಸಿ ನೀಡುವ ಕೆಲಸ ಇಲಾಖೆ ಮಾಡುತ್ತಿದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದರು.
ವಿಕಾಸಸೌಧದಲ್ಲಿ ಸದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಸರ್ಕಾರಕ್ಕೆ ಸಾಮಾಜಿಕ ಬದ್ದತೆ ಇದೆ. ಪರಸರ-ಪ್ರಕೃತಿ ಉಳಿಸೋದು ನಮ್ಮ ಧ್ಯೇಯ. ಅರಣ್ಯ ಸಂಪತ್ತನ್ನು ಹೆಚ್ಚು ಮಾಡುವುದು ನಮ್ಮ ಉದ್ದೇಶ ಆಗಿದೆ. ಭೌಗೋಳಿ ಪ್ರದೇಶದಲ್ಲಿ ಶೇ 33 ರಷ್ಟು ಅರಣ್ಯ ಇರಬೇಕು. ರಾಜ್ಯದಲ್ಲಿ ಈಗ ಶೇ 22 ರಷ್ಟು ಮಾತ್ರ ಅರಣ್ಯ ಕ್ಷೇತ್ರ ಇದೆ. ಹೀಗಾಗಿ ಈ ವರ್ಷ 5 ಕೋಟಿ ಸಸಿ ನಡೆಬೇಕು ಅಂತ ನಿರ್ಧರಿಸಲಾಗಿದೆ. ರೈತರಿಗೆ ನೀಡುವ ಸಸಿಗಳಿಗೆ ದರ ಫಿಕ್ಸ್ ಮಾಡಲಾಗಿದೆ. ಅವರಿಗೂ ಕಡಿಮೆ ದರದಲ್ಲಿ ಸಸಿ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೇಳಿದ ಪ್ರಶ್ನೆಗೆ ತಪ್ಪು ಉತ್ತರಿಸಿದ ಶಿಕ್ಷಕರು ಮತ್ತು ಮಕ್ಕಳು; ಮುಜುಗರಕ್ಕೀಡಾ ಸಚಿವ ಈಶ್ವರ್ ಖಂಡ್ರೆ
ಅರಣ್ಯ ಸಂರಕ್ಷಣೆ ವಿಚಾರವಾಗಿ ಸಚಿವರು ಮಾತನಾಡಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದರೇ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು ಬಗರ್ಹುಕುಂ ಸಾಗುವಳಿದಾರರ ಹಿತ ಕಾಪಾಡಲು ಚಿಂತನೆ ನಡೆದಿದೆ. ಕಂದಾಯ, ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ವರದಿ ಸುಪ್ರೀಂಕೋರ್ಟ್ ಮುಂದೆ ಇಟ್ಟು ಹಿತ ಕಾಪಾಡುತ್ತೇವೆ. ಅನುಮತಿ ಇಲ್ಲದೆ ವಿಂಡ್ ಮಿಲ್ ಫ್ಯಾನ್ ಹಾಕೀದರೇ ಕ್ರಮವಹಿಸಲಾಗುವುದು ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ