ರಾಜ್ಯದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ಕಾನೂನು ಅಸ್ತ್ರ; ಬೆಂಗಳೂರಲ್ಲಿ ವೈಫೈ ಜೋನ್​: ಡಿಕೆ ಶಿವಕುಮಾರ್​​

| Updated By: ವಿವೇಕ ಬಿರಾದಾರ

Updated on: Aug 27, 2023 | 1:23 PM

ಸುಳ್ಳು ಸುದ್ದಿ ಹರಡಿಸುವವರಿಗೆ ಇನ್ಮುಂದೆ ಭಾರೀ ಕಂಟಕ ಎದುರಾಗಲಿದೆ. ಸುಖಾ ಸುಮ್ಮನೆ ಬೇಕಾ ಬಿಟ್ಟಿಯಾಗಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು, ಕಾನೂನು ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಾತನಾಡಿ ರಾಜ್ಯದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ಕಾನೂನು ತರುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ಕಾನೂನು ಅಸ್ತ್ರ; ಬೆಂಗಳೂರಲ್ಲಿ ವೈಫೈ ಜೋನ್​: ಡಿಕೆ ಶಿವಕುಮಾರ್​​
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​
Follow us on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು (Fake News) ಪೋಸ್ಟ್​ ಮಾಡುವವರ ವಿರುದ್ಧ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ (Congress Government) ಸಮರ ಸಾರಿದೆ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಈ ವಿಚಾರವಾಗಿ ಬೆಂಗಳೂರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ (DK Shivakumar) ಮಾತನಾಡಿ ರಾಜ್ಯದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ಕಾನೂನು ತರುತ್ತಿದ್ದೇವೆ. ಕೆಲವು ನಾಯಕರ ಬಗ್ಗೆ ತೇಜೋವಧೆ ಮಾಡಲಾಗುತ್ತಿದೆ. ನಕಲಿ ಸುದ್ದಿ ತಡೆಗಟ್ಟಲು ಗೃಹ ಇಲಾಖೆಯಿಂದ ‌ಕಾನೂನು ಜಾರಿ ಮಾಡಲಾಗುತ್ತದೆ ಎಂದರು.

ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಬೆಂಗಳೂರಿನ ಒಂದಷ್ಟು ಕಾರ್ಯಕ್ರಮಗಳ ಬಗ್ಗೆ ಚರ್ಚೆ ‌ಮಾಡಿದ್ದೇವೆ. ಬೆಂಗಳೂರಿನಲ್ಲಿ ವೈಫೈ ಜೋನ್ ಮಾಡುತ್ತೇವೆ. ಫೇಕ್ ನ್ಯೂಸ್ ತಡೆಯಲು ಶೀಘ್ರದಲ್ಲೇ ಕಾನೂನು ತರುತ್ತೇವೆ ಎಂದು ತಿಳಿಸಿದರು.

ಇನ್ನು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್, ಕೊರೊನಾ ಹಗರಣಗಳನ್ನು ತನಿಖೆಗೆ ವಹಿಸಿದ ವಿಚಾರವಾಗಿ ಮಾತನಾಡಿದ ಅವರು 40% ಕಮಿಷನ್, ಕೊರೊನಾ ಹಗರಣ ಬಗ್ಗೆ ತನಿಖೆಗೆ ವಹಿಸಿದ್ದೇವೆ. ಈ ಕುರಿತು ನಾನು ಮಾತನಾಡಲ್ಲ, ಬೇರೆಯವರು ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ: 40% ಕಮಿಷನ್ ಸೇರಿದಂತೆ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆಯಾಗುತ್ತೆ: ಸ್ಪಷ್ಟಡಿಸಿದ ಸಿದ್ದರಾಮಯ್ಯ

ರಾಜ್ಯ ಸರ್ಕಾರ ನಿನ್ನೆ (ಆ.26) ರಂದು “ಕಳೆದ ಸರ್ಕಾರದ ಅವಧಿಯಲ್ಲಿ ಕೊರೊನಾ ಸೋಂಕು ಅಬ್ಬರದ ವೇಳೆ ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್​​ ನಿವೃತ್ತ ನ್ಯಾಯಮೂರ್ತಿ ಜಾನ್​ ಮೈಕಲ್​ ಕುನ್ಹಾ ನೇತೃತ್ವದ ತನಿಖಾ ಆಯೋಗ ರಚಿಸಿ ಆದೇಶ ಹೊರಡಿಸಿತ್ತು. ಕೊರೊನಾ ಔಷಧ, ಉಪಕರಣ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಹಿಂದೆ ನೀಡಿದ್ದ ವರದಿಯಲ್ಲಿನ ಗಂಭೀರವಾದ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ತನಿಖೆಗೆ ಆದೇಶಿಸಿತ್ತು”

ಇನ್ನು ಸುಳ್ಳು ಸುದ್ದಿ ಹರಡುವ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ ನಗರದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಎಕ್ಸ್ ಪರ್ಟ್​ಗಳ ನೇಮಕ ಮಾಡಲಾಗಿದೆ. ತಾಂತ್ರಿಕ ಪರಿಣಿತಿ ಇರುವಂತವರನ್ನು ನೇಮಕ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಇಬ್ಬರು ಸಿಬ್ಬಂದಿಯನ್ನ ಗುರುತಿಸಿ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ