ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವನ್ನು 40 ದಿನದೊಳಗೆ ಬಗೆಹರಿಸಲಾಗುವುದು: ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌
ಚಾಮರಾಜಪೇಟೆಯ ಈದ್ಗಾ ಮೈದಾನ (ಸಂಗ್ರಹ ಚಿತ್ರ)

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವನ್ನು 40 ದಿನದೊಳಗೆ ಬಗೆಹರಿಸಲಾಗುವುದು: ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌

| Updated By: ವಿವೇಕ ಬಿರಾದಾರ

Updated on: Jun 28, 2022 | 6:59 PM

ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಹಿನ್ನಲೆ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ವಕ್ಫ್‌ ಬೋರ್ಡ್‌ಗೆ ಬಿಬಿಎಂಪಿಯಿಂದ ಖಾತೆ ಮಾಡಿಕೊಟ್ಟಿಲ್ಲ. ವಕ್ಫ್‌ ಬೋರ್ಡ್‌ ನೀಡಿರುವ ದಾಖಲೆ ಪರಿಶೀಲಿಸಲಾಗುತ್ತಿದೆ. 40 ದಿನಗಳೊಳಗೆ ಈದ್ಗಾ ಮೈದಾನದ ವಿವಾದ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು: ಚಾಮರಾಜಪೇಟೆಯ (Chamrajpet) ಈದ್ಗಾ (Idgah) ಮೈದಾನ ವಿವಾದ ಹಿನ್ನಲೆ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಕ್ಫ್‌ ಬೋರ್ಡ್‌ಗೆ (Waqf Board) ಬಿಬಿಎಂಪಿಯಿಂದ (BBMP) ಖಾತೆ ಮಾಡಿಕೊಟ್ಟಿಲ್ಲ. ವಕ್ಫ್‌ ಬೋರ್ಡ್‌ ನೀಡಿರುವ ದಾಖಲೆ ಪರಿಶೀಲಿಸಲಾಗುತ್ತಿದೆ. 1965ರ ಅಧಿಸೂಚನೆಯಂತೆ ಖಾತೆ ಮಾಡಿಕೊಡಲು ವಕ್ಫ್‌ ಬೋರ್ಡ್‌ ಮನವಿ ಮಾಡಿಕೊಂಡಿದೆ. ಆದರೆ ಖಾತೆ ಮಾಡಿಕೊಟ್ಟಿಲ್ಲ. 2 ಎಕರೆ 5 ಗುಂಟೆ ಅಧಿಸೂಚನೆ ಆಗಿರುವ ಬಗ್ಗೆ ದಾಖಲೆ ನೀಡಿದೆ. ಪೂರಕ ದಾಖಲೆ ನೀಡುವಂತೆ ವಕ್ಫ್‌ ಬೋರ್ಡ್‌ಗೆ ಸೂಚಿಸಿದ್ದೇವೆ. 40 ದಿನಗಳೊಳಗೆ ಈದ್ಗಾ ಮೈದಾನದ ವಿವಾದ ಬಗೆಹರಿಸುತ್ತೇವೆ. ಈದ್ಗಾ ಮೈದಾನದ ಜಾಗ ಅಧಿಕೃತವಾಗಿ ಯಾರಿಗೂ ಸೇರಿದ್ದಲ್ಲ ಎಂದು ಹೇಳಿದ್ದಾರೆ.

ಜಾಗದ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದೇವೆ.  ಪೊಸಿಶನ್ ಬಿಬಿಎಂಪಿ ಹೆಸರಲ್ಲಿದೆ. ಓನರ್ ಶಿಪ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಇದೆಲ್ಲಾ ವಿವಾದಗಳಿಗೆ ಅಂತ್ಯ ಹಾಡಲು 45 ದಿನಗಳ ಕಾಲಾವಕಾಶ ಬೇಕು. ಆರಂಭದಿಂದ ಈ ಜಾಗ ರೆವಿನ್ಯೂ ಅಂತಿದೆ. ಯಾರ ಪ್ರಭಾವವೂ ಇಲ್ಲ. ನಮ್ಮ ಅಧಿಕಾರಿಗಳ ಮೇಲೆ ಒತ್ತಡ ಇಲ್ಲ. 1935ರಿಂದ ಮೈದಾನದ ಕುರಿತು ದಾಖಲೆ‌ಗಳನ್ನು ಎನ್ ಆರ್ ರಮೇಶ್ ಸಲ್ಲಿಸಿದ್ದಾರೆ. 1974ರಿಂದ ಮೈದಾನದಲ್ಲಿ ಜರುಗಿದ ಕಾರ್ಯಕ್ರಮಗಳ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಂಟಿ ಆಯುಕ್ತ ಹೇಳಿದ್ದಾರೆ.