ನಾವು ಕಾಂಗ್ರೆಸ್‌ನಲ್ಲಿಯೇ ಇದ್ದಿದ್ದರೆ ಸಮಾಧಿ ಆಗುತ್ತಿದ್ದೆವು- S.T.ಸೋಮಶೇಖರ್

|

Updated on: Dec 08, 2019 | 6:06 PM

ಬೆಂಗಳೂರು: ಸೋತವರಿಗೆ ಸಚಿವಸ್ಥಾನವಿಲ್ಲವೆಂದು ಈಶ್ವರಪ್ಪ ಹೇಳಿಕೆ ವಿಚಾರ ಸಂಬಂಧಿಸಿ ‘ಸುಪ್ರೀಂ’ ಆದೇಶದಂತೆ ಸೋತವರಿಗೆ ಸಚಿವಸ್ಥಾನ ನೀಡಲಾಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ವಿಧಾನಪರಿಷತ್​ಗೆ ಆಯ್ಕೆ ಮಾಡುವಂತೆ ನಾವ್ಯಾರೂ ಕೇಳಿಲ್ಲ. ಹೆಚ್.ವಿಶ್ವನಾಥ್‌ರನ್ನು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ರು. ಆದ್ರೆ ಹೆಚ್.ವಿಶ್ವನಾಥ್‌ರವರೇ ಉಪಚುನಾವಣೆಗೆ ಸ್ಪರ್ಧಿಸಿದ್ದರು. ಡಿಸೆಂಬರ್ 10ರಂದು 17 ಅನರ್ಹ ಶಾಸಕರು ಒಟ್ಟಿಗೆ ಸೇರಿ ಚರ್ಚಿಸ್ತೇವೆ. ಬಿಜೆಪಿ ಯಾವುದೇ ಅನರ್ಹ ಶಾಸಕರಿಗೂ ಮೋಸ ಮಾಡಿಲ್ಲ. ನಾವು ಕಾಂಗ್ರೆಸ್‌ನಲ್ಲಿಯೇ ಇದ್ದಿದ್ದರೆ ಸಮಾಧಿ ಆಗುತ್ತಿದ್ದೆವು. ಹೊರಗೆ ಬಂದು ಸಮಾಧಿ ಆಗುವುದನ್ನು […]

ನಾವು ಕಾಂಗ್ರೆಸ್‌ನಲ್ಲಿಯೇ ಇದ್ದಿದ್ದರೆ ಸಮಾಧಿ ಆಗುತ್ತಿದ್ದೆವು- S.T.ಸೋಮಶೇಖರ್
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್
Follow us on

ಬೆಂಗಳೂರು: ಸೋತವರಿಗೆ ಸಚಿವಸ್ಥಾನವಿಲ್ಲವೆಂದು ಈಶ್ವರಪ್ಪ ಹೇಳಿಕೆ ವಿಚಾರ ಸಂಬಂಧಿಸಿ ‘ಸುಪ್ರೀಂ’ ಆದೇಶದಂತೆ ಸೋತವರಿಗೆ ಸಚಿವಸ್ಥಾನ ನೀಡಲಾಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ವಿಧಾನಪರಿಷತ್​ಗೆ ಆಯ್ಕೆ ಮಾಡುವಂತೆ ನಾವ್ಯಾರೂ ಕೇಳಿಲ್ಲ. ಹೆಚ್.ವಿಶ್ವನಾಥ್‌ರನ್ನು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ರು. ಆದ್ರೆ ಹೆಚ್.ವಿಶ್ವನಾಥ್‌ರವರೇ ಉಪಚುನಾವಣೆಗೆ ಸ್ಪರ್ಧಿಸಿದ್ದರು. ಡಿಸೆಂಬರ್ 10ರಂದು 17 ಅನರ್ಹ ಶಾಸಕರು ಒಟ್ಟಿಗೆ ಸೇರಿ ಚರ್ಚಿಸ್ತೇವೆ. ಬಿಜೆಪಿ ಯಾವುದೇ ಅನರ್ಹ ಶಾಸಕರಿಗೂ ಮೋಸ ಮಾಡಿಲ್ಲ. ನಾವು ಕಾಂಗ್ರೆಸ್‌ನಲ್ಲಿಯೇ ಇದ್ದಿದ್ದರೆ ಸಮಾಧಿ ಆಗುತ್ತಿದ್ದೆವು. ಹೊರಗೆ ಬಂದು ಸಮಾಧಿ ಆಗುವುದನ್ನು ತಪ್ಪಿಸಿಕೊಂಡಿದ್ದೇವೆ.

ಕಾಂಗ್ರೆಸ್ ನಾಯಕರಿಗೆ ಪಕ್ಷ ಬೆಳೆಸುವ ಉದ್ದೇಶವೇ ಇರಲಿಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳುಮಾಡಿದರು. ನಾನು ಕಾಂಗ್ರೆಸ್‌ನಲ್ಲಿದ್ದಾಗ ನಾಯಕತ್ವಕ್ಕೆ ಸ್ಪರ್ಧೆ ಮಾಡಲಿಲ್ಲ.
ನನ್ನ ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನ ಗಮ‌ನದಲ್ಲಿ ಇರುವುದು. ನಾವು ಮಂತ್ರಿಯಾಗಬೇಕೆಂಬ ಆಸೆಯಿಂದ ಬಿಜೆಪಿ ಸೇರಲಿಲ್ಲ. ನನ್ನನ್ನು ಮಂತ್ರಿ ಮಾಡದಿದ್ರೂ ಕ್ಷೇತ್ರ ಅಭಿವೃದ್ಧಿ ಮಾಡ್ತೇನೆ. ಸಚಿವಸ್ಥಾನ ಕೊಡಿ ಎಂದು ನಾನು ಸಿಎಂ ಬಳಿ ಕೇಳಲೂ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.