ಹವಾಮಾನ ವೈಪರೀತ್ಯ: ಮಕ್ಕಳಲ್ಲಿ ಕಂಡು ಬರುತ್ತಿದೆ ಅಡೆನೊ ವೈರಸ್, ಆರೈಕೆ ಹೇಗೆ?

| Updated By: ಆಯೇಷಾ ಬಾನು

Updated on: Sep 04, 2023 | 10:42 AM

ಮಕ್ಕಳಲ್ಲಿ ಅಡೆನೊ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಒಂದರಲ್ಲೇ ಶೇ.20-30 ಕ್ಕಿಂತ ಹೆಚ್ಚು ಮಕ್ಕಳು ಅಡೆನೋ ವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾನಾ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ದಾಖಲಾಗಿರುವ ಬಹುತೇಕ ಮಕ್ಕಳಲ್ಲಿ ಅಡೆನೊ ವೈರಸ್ ಪತ್ತೆಯಾಗಿದೆ.

ಹವಾಮಾನ ವೈಪರೀತ್ಯ: ಮಕ್ಕಳಲ್ಲಿ ಕಂಡು ಬರುತ್ತಿದೆ ಅಡೆನೊ ವೈರಸ್, ಆರೈಕೆ ಹೇಗೆ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆ.04: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ತುಂತುರು ಮಳೆ ಆರಂಭವಾಗಿದೆ(Bengaluru Rain). ಹೀಗಾಗಿ ಇಡೀ ಬೆಂಗಳೂರು ಕೂಲ್ ಕೂಲ್ ಆಗಿದೆ. ಆದರೆ ಈ ಹವಾಮಾನ ವೈಪರೀತ್ಯದ ಎಫೆಕ್ಟ್​ನಿಂದಾಗಿ ಆರೋಗ್ಯ ಸಮಸ್ಯೆಗಳು ಕೂಡ ಕಂಡುಬರುತ್ತಿವೆ. ಅದರಲ್ಲೂ ಮಕ್ಕಳಲ್ಲಿ(Children) ಅಡೆನೊ ವೈರಸ್(Adenovirus) ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಒಂದರಲ್ಲೇ ಶೇ.20-30 ಕ್ಕಿಂತ ಹೆಚ್ಚು ಮಕ್ಕಳು ಅಡೆನೋ ವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾನಾ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ದಾಖಲಾಗಿರುವ ಬಹುತೇಕ ಮಕ್ಕಳಲ್ಲಿ ಅಡೆನೊ ವೈರಸ್ ಪತ್ತೆಯಾಗಿದೆ. ಹೀಗಾಗಿ ಮಕ್ಕಳ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಅಸ್ತಮಾ ಸೇರಿ ಉಸಿರಾಟದ ಸಮಸ್ಯೆ ಇರುವವರು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಅಡೆನೊ ವೈರಸ್​ ಸೋಂಕಿಗೆ ಒಳಗಾದಲ್ಲಿ ಅಂತಹರಲ್ಲಿ ಕಾಯಿಲೆ ಹೆಚ್ಚು ಗಂಭೀರವಾಗಬಹುದು.

ಅಡೆನೊ ವೈರಸ್ ಹೇಗೆ ಹರಡುತ್ತದೆ?

ಈ ವೈರಸ್ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಡೇ ಕೇರ್ ಸೆಂಟರ್​ಗಳು, ಶಾಲೆಗಳಲ್ಲಿ ಮಕ್ಕಳು ಗುಂಪಾಗಿ ಸೇರುವ ಕಡೆ ಈ ವೈರಸ್ ಸಾಮಾನ್ಯವಾಗಿ ಹರಡುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಹನಿಗಳು ಗಾಳಿಯಲ್ಲಿ ಹಾರಿ ಇತರರಿಗೆ ಹರಡುತ್ತವೆ. ಇಲ್ಲವೆ ಆ ಹನಿ ಯಾವುದೇ ವಸ್ತುವಿನ ಮೇಲೆ ಬಿದ್ದಿದ್ದು, ಅದನ್ನು ಮುಟ್ಟಿದವರು ಅದೇ ಕೈಗಳಿಂದ ಮುಖ, ಕಣ್ಣು, ಮೂಗು, ಬಾಯಿ ಮುಟ್ಟಿಕೊಂಡಾಗ ವೈರಸ್ ಸುಲುಭವಾಗಿ ಹರಡುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ರೋಗ ಪ್ರಕರಣ ಸಂಖ್ಯೆಯಲ್ಲಿ ಏರಿಕೆ; ಬೆಂಗಳೂರಿನಲ್ಲಿ ಅಧಿಕ ಬಾಧಿತರು

ಸೋಂಕಿತ ಆರೈಕೆ ಹೇಗೆ?

ಅಡೆನೋ ವೈರಸ್ ಸೋಂಕಿಗೆ ಒಳಗಾದವರಲ್ಲಿ ಜ್ವರದ ಜೊತೆಗೆ ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುವುದರಿಂದ ದೇಹ ರ್ನಿಜಲೀಕರಣಗೊಳ್ಳಲಿದೆ. ಹೀಗಾಗಿ ಸಾಕಷ್ಟು ನೀರು, ಹಣ್ಣಿನ ರಸ ನೀಡಬೇಕು. ಶೀತ ಕಾಣಿಸಿಕೊಳ್ಳುವುದರಿಂದ ವೈದ್ಯರ ಸಲಹೆಯಂತೆ ಮೂಗಿಗೆ ಸಲೈನ್ ಸೆ ಹನಿಗಳನ್ನು ಹಾಕಬಹುದು. ಇದರಿಂದ ಉಸಿರಾಟ ಸುಗಮವಾಗಲಿದೆ. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಿಸಿ ಹಾಗೂ ತಾಜಾ ಆಹಾರ ನೀಡಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ನೀಡಬಾರದು.

ಸೋಂಕಿನ ಲಕ್ಷಣಗಳು

ಶೀತ ಅಥವಾ ಜ್ವರ ಸಾಮಾನ್ಯ ಆರಂಭಿಕ ಲಕ್ಷಣ. ಗಂಟಲು ಕೆರತ ಮತ್ತು ನೋವು, ಬ್ರಾಂಕೈಟಿಸ್ ಅಂದ್ರೆ ಶ್ವಾಸಕೋಶದಲ್ಲಿನ ಶ್ವಾಸನಾಳದ ಉರಿಯೂತ, ನ್ಯುಮೋನಿಯಾ ಅಂದ್ರೆ ಶ್ವಾಸಕೋಶದ ಸೋಂಕು, ಗುಲಾಬಿ ಕಣ್ಣು, ತೀವ್ರವಾದ ಗ್ಯಾಸ್ಟ್ರೊ ಎಂಟರೈಟಿಸ್ ಕಂಡುಬರಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:41 am, Mon, 4 September 23