ಬೆಂಗಳೂರು: ‘ಒಂದು ದೇಶ ಒಂದು ಕಾರ್ಡ್’ ಯೋಜನೆಯ ಭಾಗವಾಗಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ( Namma Metro) ಇದೇ ವರ್ಷದ ಮಾರ್ಚ್ ಅಂತ್ಯದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್ಗೆ (National Common Mobility Card- NCMC) ನಿರೀಕ್ಷಿತ ರೀತಿಯಲ್ಲಿ ಉತ್ತಮ ಪ್ರತಿಕ್ರಿಯೆಗಳು ಸಿಗುತ್ತಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ಖರೀದಿಸಲು BMRCL ಸ್ಮಾರ್ಟ್ ವಿಧಾನ ಪರಿಚಯಿಸಿ ಯಾವುದೋ ಕಾಲವಾಗಿದೆ. ಬಿಎಂಆರ್‌ಸಿಎಲ್ ವತಿಯಿಂದ ಇದುವರೆಗೆ ಮಾರಾಟವಾಗಿರುವ 8 ಲಕ್ಷ ಕಾರ್ಡ್ಗಳ ಪೈಕಿ ಕೇವಲ 4,500 ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್‌ಗಳನ್ನು ಬೆಂಗಳೂರಿನಲ್ಲಿ ವಿತರಿಸಿದೆ. ವೈಟ್ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಕಳೆದ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ NCMC ಕಾರ್ಡ್ಗಳಿಗೆ ಚಾಲನೆ ಕೊಟ್ಟಿದ್ದರು.
BMRCL ಅಧಿಕಾರಿಗಳು ಹೇಳುವಂತೆ ಮುಂಬೈ ಹೊರತುಪಡಿಸಿ, ಇತರೆ ಎಲ್ಲಾ ಮೆಟ್ರೋ ನಗರಗಳಲ್ಲಿ NCMC ಕಾರ್ಡ್ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ. ಬಹುಶಃ ಮುಂಬೈನ ಸಾರಿಗೆ ಏಜೆನ್ಸಿಗಳು NCMC ಕಾರ್ಡ್‌ಗಳನ್ನು ಪ್ರಾರಂಭಿಸುವವರೆಗೆ ತಮ್ಮದೇ ಆದ (ಸ್ಮಾರ್ಟ್) ಕಾರ್ಡ್‌ಗಳನ್ನು ಹೊಂದಿರಲಿಲ್ಲ. ಆದ್ದರಿಂದ NCMC ಕಾರ್ಡ್ಗಳ ಬಳಕೆಯು ಮುಂಬೈನಲ್ಲಿ ವ್ಯಾಪಕವಾಗಿದೆ. ಆದರೆ ಕೋಲ್ಕತ್ತಾ, ಕೊಚ್ಚಿ, ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರಯಾಣಿಕರು ತಮ್ಮದೇ ಆದ ಮೆಟ್ರೋ ಕಾರ್ಡ್‌ಗಳನ್ನು ಹೊಂದಿರುವುದರಿಂದ ಯಾರು ಕೂಡ ಕಾಮನ್ ಮೊಬಿಲಿಟಿ ಕಾರ್ಡ್‌ಗಳನ್ನು ಪಡೆಯುತ್ತಿಲ್ಲ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದರು.
ಇದನ್ನೂ ಓದಿ: Namma Yatri: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಮಿಂಚಿನ ಸಂಚಾರ; ಇದು ವಿಶ್ವದ ಮೊದಲ ಪರಿಪೂರ್ಣ ಓಪನ್ ಮೊಬಿಲಿಟಿ ಆ್ಯಪ್
BMRCL ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಪ್ರಕಾರ, ಇತ್ತೀಚೆಗೆ ಸಂಸ್ಥೆಯು ದಿನಕ್ಕೆ 30-35 NCMC ಗಳನ್ನು ಮಾರಾಟ ಮಾಡುತ್ತಿದೆ. ಆದರೆ ತಡೆರಹಿತ ಪ್ರಯಾಣ ಮತ್ತು ಪಾವತಿಯನ್ನು ಸಕ್ರಿಯಗೊಳಿಸಲು ಉದ್ದೇಶಿಸಲಾದ ಕಾರ್ಡ್ಗೆ ಹೆಚ್ಚಿನ ಆಧ್ಯತೆ ಅಥವಾ ಜನಪ್ರಿಯತೆ ಸಿಗುತ್ತಿಲ್ಲ.
ರುಪೇ ಪೇಮೆಂಟ್ ವ್ಯವಸ್ಥೆಯ ಆಧಾರದಲ್ಲಿ ಸಾಮಾನ್ಯ ಮೊಬಿಲಿಟಿ ಕಾರ್ಡ್ ಕೆಲಸ ಮಾಡುತ್ತದೆ. ಬಸ್, ಪಾರ್ಕಿಂಗ್ಗಾಗಿ ಸೇರಿದಂತೆ ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್ ಶಾಪಿಂಗ್‌ಗಳಲ್ಲಿ ಒಂದೇ ಕಾರ್ಡ್ ಮೂಲಕ ವ್ಯವಹರಿಸಬಹುದು. ಬ್ಯಾಂಕ್‌ನಿಂದ ನೀಡಲಾಗುವ ರೂಪೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಂತೆಯೇ ಸಾಮಾನ್ಯ ಮೊಬಿಲಿಟಿ ಕಾರ್ಡ್ ಕೂಡ ಇರುತ್ತದೆ. ಈ ರೂಪೇ ಕಾರ್ಡ್ ಅನ್ನು ಪಾಲುದಾರ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ರೂಪದಲ್ಲಿ ನೀಡಬಹುದು. ‘ಒಂದು ದೇಶ, ಒಂದು ಕಾರ್ಡ್’ ಎಂಬ ಪರಿಕಲ್ಪನೆಯಡಿ ಕಾರ್ಡ್ ರೂಪಿಸಿದ್ದು, ಇಡೀ ದೇಶದ ಮೆಟ್ರೋದಲ್ಲಿ ಇದನ್ನು ಬಳಸಬಹುದು. ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಈ ಕಾರ್ಡ್ ಹೊಂದಿದ್ದರೆ ದೇಶದ ಯಾವುದೇ ಮೆಟ್ರೋದ್ಲಲೂ ಪ್ರಯಾಣಿಸಬಹುದು, ಹಾಗೂ ತಮ್ಮ ಎಲ್ಲಾ ಪೇಮೆಂಟ್ಗೂ ಡೆಬಿಟ್, ಕ್ರೆಡಿಟ್ ಕಾರ್ಡ್ನಂತೆ ಬಳಸಬಹುದು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ