ಬೆಂಗಳೂರಿಗರ ಬಿಯರ್ ಪ್ರೀತಿಯ ಕತೆ: ಇತಿಹಾಸ, ವರ್ತಮಾನ, ಭವಿಷ್ಯ

ಬೆಂಗಳೂರನ್ನು ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಸ್ಟಾರ್ಟಪ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೆಲ್ಲ ಕರೆಯಲಾಗುತ್ತದೆ. ಇದರ ಜೊತೆಗೆ ಇನ್ನೊಂದು ಗುಣವಿಶೇಷಣವೂ ಇದೆ. ಬೆಂಗಳೂರು ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ ಸಹ ಹೌದು. ಬೆಂಗಳೂರಿಗರಿಗೆ ಬಿಯರ್​ ಮೇಲೆ ಏಕಿಷ್ಟು ಪ್ರೀತಿ? ತಿಳಿಯೋಣ ಬನ್ನಿ.

ಬೆಂಗಳೂರಿಗರ ಬಿಯರ್ ಪ್ರೀತಿಯ ಕತೆ: ಇತಿಹಾಸ, ವರ್ತಮಾನ, ಭವಿಷ್ಯ

Updated on: Aug 21, 2024 | 6:16 PM

ಪ್ರಪಂಚದಲ್ಲಿ ಅತಿಯಾಗಿ ಕುಡಿಯಲಾಗುವ ದ್ರವ ಪದಾರ್ಥಗಳಲ್ಲಿ ಮೊದಲ ಸ್ಥಾನ ನೀರಿಗಿದೆ. ಅದರ ಬಳಿಕ ಕಾಫಿ ಮತ್ತು ಟೀ ಅದಾದ ಬಳಿಕ ಜನ ಅತಿ ಹೆಚ್ಚು ಕುಡಿಯುವುದು ಬಿಯರ್ ಅನ್ನೇ! ಇತಿಹಾಸಕಾರರು ಹೇಳುವ ಪ್ರಕಾರ, ಮನುಷ್ಯ ಕೃಷಿ ಮಾಡಲು ಕಲಿತ ಕೆಲವೇ ದಶಕಗಳಲ್ಲಿ ಬಿಯರ್ ಮಾಡುವುದನ್ನೂ ಕಲಿತನಂತೆ. ವಿಶ್ವದ ಅತ್ಯಂತ ಹಳೆಯ ಕಲೆಗಳಲ್ಲಿ ಬಿಯರ್ ಮಾಡುವ ಕಲೆಯೂ ಒಂದು. ಬಿಯರ್​ಗೆ 5000 ವರ್ಷಗಳ ಇತಿಹಾಸವಿದೆ. ವಿಶ್ವವನ್ನೇ ಗೆಲ್ಲಲು ಹೊರಟ ಅಲೆಕ್ಸಾಂಡರ್​, ಕೇಳಿದ್ದು ಮೂರು ವಸ್ತುಗಳನ್ನು ಮಾತ್ರವಂತೆ, ಒಂದು ಹರಿತವಾದ ಕತ್ತಿ, ಒಂದು ಬಲಶಾಲಿ ಕುದುರೆ ಮತ್ತು ಒಬ್ಬ ಒಳ್ಳೆಯ ಬಿಯರ್ ಮಾಡುವವ. ಬಿಯರ್ ಮೇಲೆ ಜನಗಳಿಗಿರುವ ಪ್ರೀತಿಯನ್ನು ಹೇಳಲು ಇಷ್ಟೆಲ್ಲ ಹೇಳಬೇಕಾಯ್ತು. ಬಿಯರ್ ಭಾರತದಲ್ಲಿಯೂ ಅತ್ಯಂತ ಜನಪ್ರಿಯ ಪೇಯ. ವಿಶೇಷವಾಗಿ ಬೆಂಗಳೂರಿಗರಿಗೆ ಬಿಯರ್ ಮೇಲೆ ತುಸು ಹೆಚ್ಚೇ ಪ್ರೀತಿ ಇದೆ. ಇದೇ ಕಾರಣಕ್ಕೆ ಬೆಂಗಳೂರನ್ನು ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಕರ್ನಾಟಕದ ಅಬಕಾರಿ ಇಲಾಖೆ ಪ್ರಕಾರ 2022 ಮತ್ತು 2023 ರ ಸಾಲಿನಲ್ಲಿ ಬೆಂಗಳೂರಿಗರು ಕುಡಿದು ಖಾಲಿ ಮಾಡಿರುವ ಬಿಯರ್ ಬಾಟಲಿಗಳ ಸಂಖ್ಯೆ 28.25 ಕೋಟಿ. ಈ ಬಾಟಲಿಗಳನ್ನು ಉದ್ದಕ್ಕೆ ಜೋಡಿಸಿದರೆ ಬಹುಷಃ ಎವರೆಸ್ಟ್​ ನಷ್ಟು ಎತ್ತರ ಆಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವುದು ಖಾತ್ರಿ. ಇನ್ನು ಈ ಲೆಕ್ಕದಲ್ಲಿ, ಬೆಂಗಳೂರಿಗರು ಸೇವಿಸುತ್ತಿರುವ ಲೀಟರ್​ಗಟ್ಟಲೆ ಮೈಕ್ರೊ ಬ್ರೂವರಿ ಬಿಯರ್ ಅಥವಾ ಕ್ರಾಫ್ಟ್ ಬಿಯರ್​ನ ಲೆಕ್ಕ ಸೇರಿಲ್ಲ ಒಂದೊಮ್ಮೆ ಅದೂ ಸೇರಿಕೊಂಡರೆ ಸಂಖ್ಯೆ 25% ಆದರೂ ಹೆಚ್ಚಾಗುತ್ತದೆ. ಅಷ್ಟಕ್ಕೂ ಬೆಂಗಳೂರಿಗೆ ಏಕೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ