ಬೆಂಗಳೂರು, ಡಿ.13: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೆ ವೈಫ್ ಸ್ವಾಪಿಂಗ್ (Wife Swapping) ಪ್ರಕರಣ ದಾಖಲಾಗಿದೆ. ಕೇರಳದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಈ ಕೆಟ್ಟ ಸಂಸ್ಕೃತಿ ಬೆಂಗಳೂರಿನಲ್ಲೂ ಕೇಳಿ ಬಂದಿದೆ. ವೈಫ್ ಸ್ವಾಪಿಂಗ್ಗೆ ಪೀಡಿಸುತ್ತಿದ್ದ ಪತಿ ವಿರುದ್ಧ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ (Basavanagudi Women Police Station) ದೂರು ದಾಖಲಿಸಿದ್ದಾರೆ. ಸ್ನೇಹಿತನ ಜೊತೆ ರಾತ್ರಿ ಕಳೆಯುವಂತೆ ಪತ್ನಿಯನ್ನ ಪೀಡಿಸುತ್ತಿದ್ದ ಪತಿ ವಿರುದ್ಧ ದೂರು ದಾಖಲಾಗಿದೆ.
ಬಸವನಗುಡಿ ನಿವಾಸಿ ಪೂರ್ಣಚಂದ್ರ ಎಂಬುವವರು ತನ್ನ ಪತ್ನಿಯನ್ನು ತನ್ನ ಸ್ನೇಹಿತನ ಜೊತೆ ಕಾಲಕಳೆಯುವಂತೆ ಪೀಡಿಸುತ್ತಿದ್ದರು. ಇದಕ್ಕೆ ಒಪ್ಪದಿದ್ದಕ್ಕೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ ಎಂದು ಪತಿ ವಿರುದ್ಧ ಕಿರುಕುಳ, ಹಲ್ಲೆ ಆರೋಪ ಮಾಡಿ ಪತ್ನಿ ದೂರು ನೀಡಿದ್ದಾರೆ. ಸದ್ಯ ಗಂಡ ಪೂರ್ಣಚಂದ್ರ ಹಾಗೂ ಕುಟುಂಬದ ವಿರುದ್ಧ FIR ದಾಖಲಾಗಿದೆ.
ವರ್ಷದ ಹಿಂದಷ್ಟೇ ಬೆಂಗಳೂರು ಕಾಮಕ್ಷಿಪಾಳ್ಯದ ಸ್ವಯಂ ಪ್ರಭಾ ಕಲ್ಯಾಣ ಮಂಟಪದಲ್ಲಿ ಪೂರ್ಣಚಂದ್ರರ ಮದುವೆಯಾಗಿತ್ತು. ಅಂದಿನಿಂದಲೂ ವರದಕ್ಷಿಣೆ ವಿಚಾರವಾಗಿ ಕಿರುಕುಳ ಇತ್ತು. ಮದುವೆಗೆ ಮಾಡಿದ್ದ ಗಂಡನ ಸಾಲ ತೀರಿಸಲು ತವರು ಮನೆಯಿಂದ 10 ಲಕ್ಷ ಹಣ ತರುವಂತೆ ಪೀಡಿಸಲಾಗುತ್ತಿತ್ತು. ಹಣ ತರಲು ಒಪ್ಪದಿದ್ದಾಗ ಬೆಲ್ಟ್ನಿಂದ ಹೊಡೆದು ಹಿಂಸೆ ಮಾಡುತ್ತಿದ್ದರು. ಇದರಿಂದ ನೊಂದು ಮಹಿಳೆಯ ಅಣ್ಣ 2 ಲಕ್ಷ ಹಣ ನೀಡಿದ್ದ. ಆದರೂ 8 ಲಕ್ಷ ಹಣ ನೀಡುವಂತೆ ಹಾಗಾಗ ಗಲಾಟೆಗಳು ನಡೆಯುತ್ತಿದ್ದವು, ಇದರ ನಡುವೆ ಇತ್ತೀಚೆಗೆ ಪತಿ ಪೂರ್ಣಚಂದ್ರ ತನ್ನ ಹೆಂಡತಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ತನ್ನ ಸ್ನೇಹಿತರೊಂದಿಗೆ ಬೆರೆಯಲು ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ: 55 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಕೊಡಗಿನ ಯುವಕ ಅರೆಸ್ಟ್
ವೈಫ್ ಸ್ವಾಪಿಂಗ್ ಅನ್ನೋದು ಪಾಶ್ಚಿಮಾತ್ಯ ದೇಶಗಳಲ್ಲಿನ ಕೆಟ್ಟ ಸಂಸ್ಕೃತಿ. ಸ್ನೇಹಿತರು ಸೇರುವ ಪಾರ್ಟಿಗಳಲ್ಲಿ ಪತಿ-ಪತ್ನಿ ಬದಲಾಯಿಸಿಕೊಳ್ಳುವುದು. ತನ್ನ ಹೆಂಡತಿಯನ್ನ ಸ್ನೇಹಿತರ ಜೊತೆಯು ಹೆಂಡತಿಯಂತೆ ಇರುವಂತೆ ಮಾಡುವುದು. ಅಥವಾ ಸ್ನೇಹಿತರ ಹೆಂಡತಿಗೆ ಗಂಡನಂತೆ ಇರುವುದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಕೆಟ್ಟ ಸಂಸ್ಕೃತಿ ರೂಢಿಯಲ್ಲಿದೆ. ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಇದು ದೊಡ್ಡ ಸದ್ದು ಮಾಡಿತ್ತು. ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿವೆ. ಇದೀಗ ಮಹಿಳೆಯೊಬ್ಬರು ತನ್ನ ಗಂಡನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:11 am, Wed, 13 December 23