ಓರ್ವ ಶಂಕಿತ ಉಗ್ರನ ಬಂಧನ ಬೆನ್ನಲ್ಲೇ ಬೆಂಗಳೂರಿನ 12ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ
ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಇತ್ತೀಚಿಗೆ ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರನನ್ನು ಬಂಧಿಸಿದ್ದರು. ಇದಾದ ಬೆನ್ನಲ್ಲೇ ಬುಧವಾರ ಎನ್ಐಎ ಅಧಿಕಾರಿಗಳು ನಗರದ 12 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ.
ಬೆಂಗಳೂರು, ಡಿಸೆಂಬರ್ 13: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇತ್ತೀಚಿಗೆ ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರನನ್ನು (Suspected Terrorists) ಬಂಧಿಸಿದ್ದರು. ಇದಾದ ಬೆನ್ನಲ್ಲೇ ಇಂದು (ಡಿ.13) ಎನ್ಐಎ ಅಧಿಕಾರಿಗಳು ನಗರದ 12 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಎನ್ಐಎ ಅಧಿಕಾರಿಗಳು ಡಿಸೆಂಬರ್ 9 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಶಂಕಿತ ಉಗ್ರ ಅಲಿ ಅಬ್ಬಾಸ್ನನ್ನು ಬಂಧಿಸಿದ್ದರು.
ಅಲಿ ಅಬ್ಬಾಸ್ ಮೂಲತಃ ಮುಂಬೈ ನಿವಾಸಿಯಾಗಿದ್ದು, ನಾಲ್ಕು ವರ್ಷದ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದನು. ದಂಪತಿ ಹಾಗೂ ಮೂವರು ಮಕ್ಕಳು ಸಮೇತ ಬೆಂಗಳೂರಿನ ಪುಲಿಕೇಶಿನಗರದ ಮೋರ್ ರಸ್ತೆಯ ಬಿಲ್ಡಿಂಗ್ವೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದನು. ಅಲಿ ಅಬ್ಬಾಸ್ ಡಾಟಾ ಕನ್ಸಲ್‌ಟೆಂಟ್ ಆಗಿ ಒಂದು ವರ್ಷದಿಂದ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಕೊರೊನಾ ಸಂದರ್ಭದಲ್ಲಿ ಅಲಿ ಅಬ್ಬಾಸ್ ಕೆಲಸ ಬಿಟ್ಟಿದ್ದನು. ಪತ್ನಿ ನ್ಯೂಟ್ರಿ ಕೇರ್ ಆಸ್ಪತ್ರೆ ನಡೆಸುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಸ್ ಶಂಕಿತ ಉಗ್ರನ ಮನೆ ಮೇಲೆ ಮತ್ತೆ ಎನ್ಐಎ ದಾಳಿ: ಯಾರು ಈ ಅಬ್ಬಾಸ್ ಅಲಿ?
NIA raids over half dozen locations in Bengaluru in terror conspiracy case
Read @ANI Story | https://t.co/hL1iyIW2Hj#NIA #Bengaluru pic.twitter.com/gSy58RjEbz
— ANI Digital (@ani_digital) December 13, 2023
ಶಂಕಿತ ಉಗ್ರ ಅಲಿ ಅಬ್ಬಾಸ್ ಐಸಿಸ್ ಜೊತೆ ನಂಟು ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಡಿಸೆಂಬರ್ 9ರ ನಸುಕಿನ ಜಾವ 5:30 ಸುಮಾರಿಗೆ ಶಂಕಿತ ಉಗ್ರನ ಮನೆ ಮೇಲೆ ದಾಳಿದ್ದರು. ಶಂಕಿತ ಉಗ್ರ ಅಲಿ ಅಬ್ಬಾಸ್ ನಗರದಲ್ಲಿ ಉರ್ದು ಶಾಲೆ ನಡೆಸುತ್ತಿದ್ದನು. ಶಂಕಿತ ಉಗ್ರನಿಂದ ಅಧಿಕಾರಿಗಳು 16 ಲಕ್ಷ 42 ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದರು.
ಮಹಾರಾಷ್ಟ್ರದಲ್ಲೂ ದಾಳಿ
ಎನ್ಐಎ ಕಳೆದ ಶನಿವಾರ ಬೆಳ್ಳಂ ಬೆಳಿಗ್ಗೆ ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಎನ್ಐಎ ಅಧಿಕಾರಿಗಳು ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1 ಸ್ಥಳಗಳಲ್ಲಿ ಶೋಧ ನಡೆಸಿ, 13 ಜನ ಶಂಕಿತ ಉಗ್ರರನ್ನು ಬಂಧಿಸಿದ್ದರು. ಶಂಕಿತ ಉಗ್ರರು ವಿದೇಶಿ ಐಸಿಸ್ ಹ್ಯಾಂಡ್ಲರ್‌ಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Wed, 13 December 23