AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಐಸಿಸ್​​ ಶಂಕಿತ ಉಗ್ರನ ಮನೆ ಮೇಲೆ ಮತ್ತೆ ಎನ್​ಐಎ ದಾಳಿ: ಯಾರು ಈ ಅಬ್ಬಾಸ್ ಅಲಿ?

ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ ಎಂಬಾತನ ಮನೆಯ ಮೇಲೆ ನಿನ್ನೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿ ತೀವ್ರ ಶೋಧ ನಡೆಸಿದ್ದರು. ಇಂದು ಮತ್ತೆ ಅಬ್ಬಾಸ್ ಮನೆಯ ಮೇಲೆ ದಾಳಿ ಮಾಡಿ ಮೊಬೈಲ್​, ಲ್ಯಾಪ್​ಟಾಪ್​​​ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಐಸಿಸ್​​ ಶಂಕಿತ ಉಗ್ರನ ಮನೆ ಮೇಲೆ ಮತ್ತೆ ಎನ್​ಐಎ ದಾಳಿ: ಯಾರು ಈ  ಅಬ್ಬಾಸ್ ಅಲಿ?
ಬೆಂಗಳೂರಿನಲ್ಲಿ ಐಸಿಸ್​​ ಶಂಕಿತ ಉಗ್ರನ ಮನೆ ಮೇಲೆ ಮತ್ತೆ ಎನ್​ಐಎ ದಾಳಿ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Dec 10, 2023 | 10:51 AM

ಬೆಂಗಳೂರು, ಡಿ.10: ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಅಲರ್ಟ್ ಆದ ಎನ್ಐಎ ಅಧಿಕಾರಿಗಳು (NIA Raid) ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಶಂಕಿತರನ್ನು ಬಂಧಿಸುತ್ತಿದ್ದಾರೆ. ನಿನ್ನೆ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಐಸಿಸ್ ನೊಂದಿಗೆ ಸಂಪರ್ಕದಲ್ಲಿದ್ದ 15 ಶಂಕಿತರನ್ನ ಬಂಧಿಸಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದರು. ಅದರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಐಸಿಸ್​​ ಶಂಕಿತ ಉಗ್ರ ಅಬ್ಬಾಸ್ ಅಲಿ ಮನೆ ಮೇಲೆ ದಾಳಿ ಮಾಡಲಾಗಿತ್ತು. ಇಂದು ಮತ್ತೆ NIA ಅಧಿಕಾರಿಗಳು ಅಬ್ಬಾಸ್ ಮನೆ ಮೇಲೆ ದಾಳಿ ಮಾಡಿದ್ದಾರೆ.

ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ ಎಂಬಾತನ ಮನೆಯ ಮೇಲೆ ನಿನ್ನೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿ ತೀವ್ರ ಶೋಧ ನಡೆಸಿದ್ದರು. ಇಂದು ಮತ್ತೆ ಅಬ್ಬಾಸ್ ಮನೆಯ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರಿನ ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ನಲ್ಲಿ NIA ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೊಬೈಲ್​, ಲ್ಯಾಪ್​ಟಾಪ್​​​ ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ದಾಳಿ ವೇಳೆ ಫ್ಲ್ಯಾಟ್​ನಲ್ಲಿ 16,42,000 ಹಣ ಪತ್ತೆಯಾಗಿತ್ತು. ನಿನ್ನೆಯೇ ಐಸಿಸ್​​ ಶಂಕಿತ ಉಗ್ರ ಅಬ್ಬಾಸ್​ನನ್ನ ವಶಕ್ಕೆ ಪಡೆಯಲಾಗಿತ್ತು. ಇಂದು ಮತ್ತೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.

ಇನ್ನು ಮೂಲತಃ ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ, ಸಾಪ್ಟ್ ವೇರ್ ಉದ್ಯೋಗಿಯಾಗಿದ್ದು‌, ಐಸಿಸ್ ನೊಂದಿಗೆ ಸಂಪರ್ಕ್ ಹೊಂದಿದ್ದ ಎಂದು ತಿಳಿದುಬಂದಿದೆ. ಜೊತೆಗೆ ಈತ ಟ್ಯಾನರಿ ರೋಡ್ ನಲ್ಲಿ ಉರ್ದು ಶಾಲೆ ನಡೆಸ್ತಿದ್ದ. ಹೆಂಡ್ತಿ ಡಯಾಟಿಕ್ ಹಾಸ್ಪಿಟಲ್ ನಡೆಸ್ತಿದ್ದಾರೆ. ಇವರು ಶಾಮಾಜ್ ಎಂಬುವರಿಂದ 2018ರಲ್ಲಿ 62 ಲಕ್ಷಕ್ಕೆ ಫ್ಲ್ಯಾಟ್ ಖರೀದಿ ಮಾಡಿದ್ದರು. ಹೆಂಡ್ತಿ, ಮೂವರು ಮಕ್ಕಳು ಹಾಗು ತಂದೆ ಜೊತೆ ಅಬ್ಬಾಸ್ ವಾಸವಾಗಿದ್ದ.

ಇದನ್ನೂ ಓದಿ: ಐಸಿಸ್​ ನಂಟು: ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರನನ್ನು ಬಂಧಿಸಿದ ಎನ್​ಐಎ

ನಿನ್ನೆ ಎನ್​ಐಎ ಅಧಿಕಾರಿಗಳು ಬೆಂಗಳೂರಿನ ಪುಲಿಕೇಶಿನಗರ ಸೇರಿದಂತೆ ಮಹಾರಾಷ್ಟ್ರದ ಬೊರಿವಿಲಿ, ಪಡ್ಗಾ, ಮೀರಾ ರಸ್ತೆ, ಪುಣೆ ಸೇರಿದಂತೆ 44 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ರು. ದಾಳಿ ಮಾಡಿದ ಅಧಿಕಾರಿ ಶಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಶೋಧ ಕಾರ್ಯಾಚರಣೆ ಬಳಿಕ ಶಂಕಿತರು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ್ ಹೊಂದಿದ್ದು, ಮಹಾರಾಷ್ಟ್ರ ಸಂಘಟನೆಗೆ ಹೊಸದಾಗಿ ನೇಮಕಾತಿ ಹಾಗೂ ಭಯೋತ್ಪಾದನ ಚಟುವಟಿಕೆಗೆ ಪ್ರೇರೇಪಿಸುತ್ತಿದ್ದ 15 ಶಂಕಿತರನ್ನ ಬಂಧಿಸಲಾಗಿತ್ತು.

ದಾಳಿ ವೇಳೆ ಅಪಾರ ಪ್ರಮಾಣದ ನಗದು, ಬಂದೂಕು, ಮಾರಕಾಸ್ತ್ರಗಳು, ಸ್ಮಾರ್ಟ್ ಫೋನ್ ಗಳು, ಡಿಜಿಟಲ್ ಡಿವೈಸಸ್ ಸೀಜ್‌‌ ಮಾಡಿದ್ದು, ಆರೋಪಿಗಳು ವಿದೇಶಿ ಹ್ಯಾಂಡ್ಲರ್ ಗಳ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ರು. ಐಇಡಿ ತಯಾರಿ, ಶಾಂತಿ ಕದಡುವುದು ಸೇರಿದಂತೆ ಐಸಿಸ್ ಮಾದರಿಯ ಚಟುವಟಿಕೆಗಳನ್ನ ಭಾರತದಲ್ಲಿ ವಿಸ್ತರಣೆ ಮಾಡುವಲ್ಲಿ ನಿರತರಾಗಿದ್ದರು ಎಂದು ಎನ್ಐಎ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?