Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Crime: ಸೈಬರ್​ ವಂಚಕರ ಜಾಲಕ್ಕೆ ಸಿಲುಕಿ 1.98 ಕೋಟಿ ರೂ. ಕಳೆದುಕೊಂಡ ಉದ್ಯಮಿ

ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಸೈಬರ್​ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ. ಇದೆ ರೀತಿಯಾಗಿ ಬೆಂಗಳೂರಿನ 52 ವರ್ಷದ ಉದ್ಯಮಿಯೊಬ್ಬರು ಜಾಲಕ್ಕೆ ಸಿಲುಕಿ 1.98 ಕೋಟಿ ರೂ. ಕಳೆದುಕೊಂಡಿದ್ದಾರೆ.

Cyber Crime: ಸೈಬರ್​ ವಂಚಕರ ಜಾಲಕ್ಕೆ ಸಿಲುಕಿ 1.98 ಕೋಟಿ ರೂ. ಕಳೆದುಕೊಂಡ ಉದ್ಯಮಿ
ಸೈಬರ್​ ಕ್ರೈಂ
Follow us
ವಿವೇಕ ಬಿರಾದಾರ
|

Updated on: Dec 10, 2023 | 12:29 PM

ಬೆಂಗಳೂರು, ಡಿಸೆಂಬರ್​​ 10: ನಗರದ 52 ವರ್ಷದ ಉದ್ಯಮಿಯೊಬ್ಬರು (Businessman) ಸೈಬರ್​ ವಂಚಕರ (Cyber Crime) ಜಾಲದಲ್ಲಿ ಸಿಲುಕಿ 1.98 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಉದ್ಯಮಿ ಚೇತನ್ ಶರ್ಮಾ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಡಿಸೆಂಬರ್ 2 ರಂದು ಫೆಡ್ಎಕ್ಸ್ ಕೊರಿಯರ್ ಬಾಯ್​ ಕರೆ ಮಾಡುತ್ತಾನೆ. ನಿಮಗೆ (ಚೇತನ್​ ಶರ್ಮಾ) ತೈವಾನ್​ನಿಂದ ಒಂದು ಪ್ಯಾಕೇಟ್​​​​ನಲ್ಲಿ ಸಿಂಥೆಟಿಕ್ ಡ್ರಗ್ ಮೆಥಿಲೆನೆಡಿಯೋಕ್ಸಿಮೆಥಾಂಫೆಟಮೈನ್ (MDMA) ಪಾರ್ಸಲ್​​ ಬಂದಿದೆ ಎಂದು ಹೇಳಿದನು.

ನಂತರ ಕೋರಿಯರ್​​ ಬಾಯ್​ ಕರೆಯನ್ನು ಮುಂಬೈ ಸೈಬರ್ ಕ್ರೈಮ್ ಬ್ರ್ಯಾಂಚ್​ಗೆ ವರ್ಗಾಯಿಸಿದನು. ಬಳಿಕ ಓರ್ವ ಅಧಿಕಾರಿ ಮಾತನಾಡಿ “ಸ್ಕೈಪ್ ವೀಡಿಯೊ ಕರೆಯಲ್ಲಿ ನಿಮ್ಮ ಹೆಸರು ಕೇಳಿಬಂದಿದೆ” ಎಂದು ಹೇಳಿದನು. ಇದರಿಂದ ಚೇತನ್​​ ಶರ್ಮಾ ಗಾಭರಿಗೊಂಡಿದ್ದಾರೆ. ನಂತರ ಅಧಿಕಾರಿ ಈ ಬಗ್ಗೆ ತನಿಖೆ ನಡೆಸಲು ನನ್ನ ಬ್ಯಾಂಕ್​​ ಖಾತೆ ಹಣ ವರ್ಗಾಯಿಸುವಂತೆ ಚೇತನ್​ ಶರ್ಮಾ ಅವರಿಗೆ ಹೇಳಿದ್ದಾನೆ.

ಈ ನಡುವೆ ಶರ್ಮಾ ಸಂಜೆಯಾದರೂ ಮನೆಗೆ ಬಾರದೇ ಇದ್ದುದರಿಂದ ಆತಂಕಗೊಂಡು ಅವರ ಪತ್ನಿ ಕಚೇರಿಗೆ ಬಂದರು. ವಂಚಕರು ಚೇತನ್​ ಶರ್ಮಾ ಅವರನ್ನು ಮಹಿಳೆ ಯಾರು ಎಂದು ಕೇಳಿದರು. ಆಗ ಚೇತನ್​ ಶರ್ಮಾ, ಅವರು ನನ್ನ ಪತ್ನಿ ಎಂದು ಹೇಳಿದರು. ಆಗ ವಂಚಕರು ಇಬ್ಬರನ್ನೂ ವಿಚಾರಣೆ ಮಾಡಬೇಕಾಗಿದೆ ಖಾಸಗಿ ಹೋಟೆಲ್‌ವೊಂದಕ್ಕೆ ಹೋಗಲು ಹೇಳಿದ್ದಾರೆ. ಅದರಂತೆ ದಂಪತಿಗಳು ಹೋಟೇಲ್​ಗೆ ಹೋಗಿ, ಪ್ರತ್ಯೇಕ ಕೊಠಡಿಯಲ್ಲಿದ್ದರು.

ಇದನ್ನೂ ಓದಿ: Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್​ಲೈನ್ ವಂಚನೆ: ಈ ಸ್ಕ್ಯಾಮ್​ಗಳ ಬಗ್ಗೆ ಎಚ್ಚರದಿಂದಿರಿ

ನಂತರ ವಂಚಕರು ಆನ್​ಲೈನ್​​ಲ್ಲಿ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಉದ್ಯಮಿ ಚೇತನ್​ ಶರ್ಮಾ ಅವರಿಂದ 1.98 ಕೋಟಿ ರೂ.ವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಐಟಿ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಡಿಸೆಂಬರ್ 7 ರಂದು ಆಗ್ನೇಯ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ಸಿಕೆ ಬಾಬಾ ಮಾತನಾಡಿ, ಇಂತಹ ಫೇಕ್​ ಕರೆಗಳು ಬಂದರೆ ಜನರು ತಕ್ಷಣ ಕರೆಗಳನ್ನು ಕಟ್​ ಮಾಡಬೇಕು. ಮತ್ತು ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ನಿಜವಾದ ಸೈಬರ್ ಕ್ರೈಮ್ ಪೋಲೀಸರು ಸ್ಕೈಪ್ ಅಥವಾ ಫೋನ್‌ನಲ್ಲಿ ವಿಚಾರಣೆ ನಡೆಸುವುದಿಲ್ಲ. ಆರೋಪಗಳಿದ್ದರೆ, ನೋಟಿಸ್ ನೀಡಲಾಗುವುದು. ಮತ್ತು ನಿಮ್ಮನ್ನು ಠಾಣೆಗೆ ಕರೆಸಲಾಗುತ್ತದೆ ಅಥವಾ ಕರೆದೊಯ್ಯಲಾಗುತ್ತದೆ. ಸ್ಕೈಪ್ ಅಥವಾ ವೀಡಿಯೊ ಕರೆಯಲ್ಲಿ ವಿಚಾರಣೆಯನ್ನು ಎಂದಿಗೂ ನಡೆಸಲಾಗುವುದಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!