AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ, ಕಾಮಗಾರಿಗಾಗಿ ಪತ್ನಿಯ ಚಿನ್ನ ಮಾರಿದ್ದೆ ಎಂದು ವ್ಯಕ್ತಿ ಅಳಲು

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ವಾಹನ ಅಡ್ಡಗಟ್ಟಿ ಬರೋಬ್ಬರಿ 50 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಕೇರಳದ ಮಲಪ್ಪುರಂ ಮೂಲಕ ಗುತ್ತಿಗೆದಾರ ಶಂಜಾದ್ ಎಂಬುವರು ದರೋಡೆಯಾಗಿದೆ ಅಂತಾ ದೂರು ಕೊಟ್ಟಿದ್ದಾರೆ.

ಮಡಿಕೇರಿ: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ, ಕಾಮಗಾರಿಗಾಗಿ ಪತ್ನಿಯ ಚಿನ್ನ ಮಾರಿದ್ದೆ ಎಂದು ವ್ಯಕ್ತಿ ಅಳಲು
ಕಾರು ತಪಾಸಣೆ ನಡೆಸುತ್ತಿರುವ ಪೊಲೀಸರು
TV9 Web
| Updated By: ಆಯೇಷಾ ಬಾನು|

Updated on: Dec 10, 2023 | 2:53 PM

Share

ಮಡಿಕೇರಿ, ಡಿ.10: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ (Robbery) ನಡೆಸಿದ ಆರೋಪ ಕೇಳಿ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ಕೇರಳದ ಮಲಪ್ಪುರಂ ಮೂಲದ ಗುತ್ತಿಗೆದಾರ ಶಂಜಾದ್​​ ಅವರು ಮೈಸೂರಿನಲ್ಲಿ ಚಿನ್ನಾಭರಣ ಮಾರಾಟ‌ ಮಾಡಿ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಕಾರು ನಿಲ್ಲಿಸಿ ದರೋಡೆ ಮಾಡಿದ್ದಾರೆ. ಹಣ ಕಳೆದುಕೊಂಡ ಶಂಜಾದ್ ಕಂಗಾಲಾಗಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ವಾಹನ ಅಡ್ಡಗಟ್ಟಿ ಬರೋಬ್ಬರಿ 50 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಕೇರಳದ ಮಲಪ್ಪುರಂ ಮೂಲಕ ಗುತ್ತಿಗೆದಾರ ಶಂಜಾದ್ ಎಂಬುವರು ದರೋಡೆಯಾಗಿದೆ ಅಂತಾ ದೂರು ಕೊಟ್ಟಿದ್ದಾರೆ. ಕಾಮಗಾರಿಗಾಗಿ ಪತ್ನಿಯ 750 ಗ್ರಾಂ ಚಿನ್ನ ಮಾರಿದ್ದೇನೆ ಎಂದಿರೋ ಶಂಜಾದ್ ಸ್ನೇಹಿತ ಆಘ್ನು ಜೊತೆ ಕೇರಳಕ್ಕೆ ಹಿಂದಿರುಗುತ್ತಿದ್ದಾಗ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ ಅಂತಾ ಶಂಜಾದ್ ದೂರು ದಾಖಲಿಸಿದ್ದಾರೆ. ದರೋಡೆ ಬಳಿಕ ಕಾರನ್ನೂ ಕಿತ್ತುಕೊಂಡು ಹೋಗಿದ್ದ ದುಷ್ಕರ್ಮಿಗಳು ವಿರಾಜಪೇಟೆಯ ಕೊಳತ್ತೋಡು ಬಳಿ ಬಿಟ್ಟುಹೋಗಿದ್ದಾರೆ. ಸದ್ಯ ಕಾರು ಪತ್ತೆಯಾಗಿದ್ದು, ಏನಾದ್ರೂ ಸುಳಿವು ಸಿಗಬಹುದಾ ಅಂತಾ ಗೋಣಿಕೊಪ್ಪ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಗದಗ: ಹತ್ಯೆ ಮಾಡಿ ಕದೊಯ್ದ ರುಂಡ ಪತ್ತೆ, ಮುಖದ ಚರ್ಮ ಸುಲಿದು ವಿಕೃತಿ ಮೆರೆದಿರುವ ಹಂತಕರು

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

ವಿಜಯಪುರ ನಗರದ ಝಂಡಾಕಟ್ಟಾ ಹಳಕೇರಿಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಸಾಹಿಲ್ ಭಾಂಗಿ(21) ಕೊಲೆಯಾದ ಯುವಕ. ಹಳೇ ದ್ವೇಷದ ಹಿನ್ನೆಲೆ ಸಾಹಿಲ್ ಭಾಂಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗೋಲಗುಂಬಜ್​ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ ಅವರು ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಕೊಲೆಯಾದ ಯುವಕ‌ ಕೆಲ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಬಗ್ಗೆ ತಿಳಿದು ಬಂದಿದ್ದು ಯಾವ ಕಾರಣಕ್ಕಾಗಿ ಹಾಗೂ ಯಾರು ಕೊಲೆ ಮಾಡಿದ್ದಾರೆಂದು ತನಿಖೆ ಬಳಿಕ ತಿಳಿದು ಬರಲಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಋಷಿಕೇಶ ತಿಳಿಸಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ