Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಹತ್ಯೆ ಮಾಡಿ ಕದೊಯ್ದ ರುಂಡ ಪತ್ತೆ, ಮುಖದ ಚರ್ಮ ಸುಲಿದು ವಿಕೃತಿ ಮೆರೆದಿರುವ ಹಂತಕರು

ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ಬೆಳೆಯಲಾಗುತ್ತಿದ್ದ ಮೆಣಸಿನಕಾಯಿ ಕಾವಲು ಕಾಯುತ್ತಿದ್ದ ಸಣ್ಣಹನಮಪ್ಪ ರಾತ್ರಿ ಗುಡಿಸಲಲ್ಲಿ ಮಲಗಿದ್ದ ವೇಳೆ ಹಂತಕರು ಭೀಕರವಾಗಿ ಕೊಲೆ ಮಾಡಿ ರುಂಡ ಕತ್ತರಿಸಿ ಕದ್ದೊಯ್ದಿದ್ದರು. ಸದ್ಯ ಈಗ ಮೆಕ್ಕೆಜೋಳದ ಜಮೀನಿನಲ್ಲಿ ರುಂಡ ಪತ್ತೆಯಾಗಿದೆ. ಆದರೆ ಪತ್ತೆಯಾದ ರುಂಡ ನೋಡಿದವರು ಮತ್ತಷ್ಟು ಭಯಭೀತರಾಗಿದ್ದಾರೆ.

ಗದಗ: ಹತ್ಯೆ ಮಾಡಿ ಕದೊಯ್ದ ರುಂಡ ಪತ್ತೆ, ಮುಖದ ಚರ್ಮ ಸುಲಿದು ವಿಕೃತಿ ಮೆರೆದಿರುವ ಹಂತಕರು
ಹತ್ಯೆ ಮಾಡಿ ಕದೊಯ್ದ ರುಂಡ ಪತ್ತೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು

Updated on: Dec 10, 2023 | 2:28 PM

ಗದಗ, ಡಿ.10: ಮೆಣಸಿನಕಾಯಿ ಬೆಳೆಯನ್ನು ಕಾವಲು ಕಾಯುತ್ತಿದ್ದ, ರೈತ ಕಾರ್ಮಿಕನನ್ನು ಭೀಕರವಾಗಿ ಹತ್ಯೆ ಮಾಡಿ ರುಂಡವನ್ನೆ ಕತ್ತರಿಸಿ ದುಷ್ಕರ್ಮಿಗಳು ಕದ್ದೊಯ್ದಿದ್ದರು. ನಿನ್ನೆ ನಡೆದ ಈ ಘಟನೆ ಇಡೀ ಗದಗವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ವ್ಯಕ್ತಿಯ ಕತ್ತರಿಸಿದ ರುಂಡ ಪತ್ತೆಯಾಗಿದ್ದು ಮತ್ತಷ್ಟು ಭಯ ಹುಟ್ಟಿಸುವಂತೆ ಮಾಡಿದೆ. ಏಕೆಂದರೆ ತಲೆ ಬುರುಡೆ, ಮುಖದ ಚರ್ಮ ಸುಲಿದು ಹಂತಕರು ವಿಕೃತಿ ಮೆರೆದಿದ್ದಾರೆ.

ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ಬೆಳೆಯಲಾಗುತ್ತಿದ್ದ ಮೆಣಸಿನಕಾಯಿ ಕಾವಲು ಕಾಯುತ್ತಿದ್ದ ಸಣ್ಣಹನಮಪ್ಪ ರಾತ್ರಿ ಗುಡಿಸಲಲ್ಲಿ ಮಲಗಿದ್ದ ವೇಳೆ ಹಂತಕರು ಭೀಕರವಾಗಿ ಕೊಲೆ ಮಾಡಿ ರುಂಡ ಕತ್ತರಿಸಿ ಕದ್ದೊಯ್ದಿದ್ದರು. ಸದ್ಯ ಈಗ ಮೆಕ್ಕೆಜೋಳದ ಜಮೀನಿನಲ್ಲಿ ರುಂಡ ಪತ್ತೆಯಾಗಿದೆ. ಆದರೆ ಪತ್ತೆಯಾದ ರುಂಡ ನೋಡಿದವರು ಮತ್ತಷ್ಟು ಭಯಭೀತರಾಗಿದ್ದಾರೆ. ಹಂತರ ಮನಸ್ಥಿತಿ ಎಂತಹದ್ದು ಎಂಬ ಊಹೆಯಲ್ಲೇ ಬೆವರಿದ್ದಾರೆ. ಏಕೆಂದರೆ ತಲೆ ಬುರುಡೆ, ಮುಖದ ಚರ್ಮ ಸುಲಿದು ಹಂತಕರು ವಿಕೃತಿ ಮೆರೆದಿದ್ದಾರೆ. ವ್ಯಕ್ತಿ ಗುರುತು ಸಿಗದಂತೆ ತಲೆ, ಮುಖ, ಮೂಗು ಚರ್ಮ ಸುಲಿದಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ರುಂಡ ಪತ್ತೆ ಹಚ್ಚಿದ್ದಾರೆ.

ಹಂತಕರು ಭೀಕರವಾಗಿ ಕೊಲೆ ಮಾಡಿ ರುಂಡ ಗಯಾಬ್ ಮಾಡಿದ್ದರು. ಹೀಗಾಗಿ ರುಂಡಕ್ಕಾಗಿ ಪೊಲೀಸ್ ತಂಡಗಳು ಹುಡಕಾಟ ನಡೆಸಿದ್ದವು. ಇಂದು ಮೆಕ್ಕೆಜೋಳದ ಜಮೀನಿನಲ್ಲಿ ರುಂಡ ಪತ್ತೆಯಾಗಿದೆ. ಸದ್ಯ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಗದಗ: ಮೆಣಸಿನಕಾಯಿ ತೋಟ ಕಾವಲು ಕಾಯುತ್ತಿದ್ದ ರೈತ ಕಾರ್ಮಿಕನನ್ನು ಕೊಂದು ರುಂಡ ಕದ್ದೊಯ್ದ ಹಂತಕರು

ಭೀಕರವಾಗಿ ಕೊಲೆಯಾದ 65 ವರ್ಷದ ಸಣ್ಣ ಹನಮಪ್ಪ ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ನಿವಾಸಿ. ಎರಡು ಎಕರೆ ಜಮೀನು ಹೊಂದಿದ್ದು, ಜಮೀನಿನ ಕೆಲಸದ ಜೊತೆಗೆ ದೊಡ್ಡ ರೈತನ ಜಮೀನಿನಲ್ಲಿ ಕಾವಲು ಕಾಯುವ ಕೆಲಸವನ್ನು ಮಾಡ್ತಾಯಿದ್ದರು. ಕೊಲೆಯಾದ ಸಣ್ಣ ಹನಮಪ್ಪನಿಗೆ ಮೂವರು ಮಕ್ಕಳಿದ್ದು, ಅವರು ಕೂಡಾ ಮದುವೆಯಾಗಿ ಪ್ರತ್ಯೇಕವಾಗಿ ವಾಸ ಮಾಡ್ತಾಯಿದ್ದಾರೆ. ಸಣ್ಣ ಹನಮಪ್ಪ ಆತನ ಪತ್ನಿ ಇಬ್ಬರೆ ವಾಸ ಮಾಡ್ತಾಯಿದ್ದಾರೆ. ಗ್ರಾಮದಲ್ಲಿ ಯಾವುದೇ ಸಾಲ ಇಲ್ಲಾ, ಹಣಕಾಸಿನ ವ್ಯವಹಾರವೂ ಇಲ್ಲಾ, ಮಕ್ಕಳ‌ ಜೊತೆಗೆ ಕೂಡಾ ಯಾವುದೇ ವೈಷಮ್ಯ ಇಲ್ಲಾ, ಆದ್ರೂ ಯಾಕೆ ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲಾ ಎಂದು ಮೃತನ ಮಗ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ