ಬೆಂಗಳೂರು, ಮಾರ್ಚ್.21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಹಿಳೆಯರಿಗೆ (Woman) ಸ್ವಲ್ಪವೂ ಸೇಫ್ಟಿ ಇಲ್ಲದಂತಾಗಿದೆ. ಇತ್ತೀಚೆಗೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಎದುರು ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದೀಗ ಮಹಿಳೆಯೊಬ್ಬರು ತಮ್ಮ ಮನೆಗೆ ತೆರಳಲು ಗೇಟ್ ಓಪನ್ ಮಾಡುವಾಗ ಹಿಂದೆಯಿಂದ ಬಂದ ವ್ಯಕ್ತಿ ಅವರನ್ನು ತಬ್ಬಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಘಟನೆಯ ಮಾಹಿತಿ ಹಂಚಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ತನ್ನ ಮನೆಯ ಬಳಿ ವ್ಯಕ್ತಿಯೊಬ್ಬರು ತನ್ನನ್ನು ಅಪ್ಪಿಕೊಂಡು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಮಹಿಳೆ ತನ್ನ ಮನೆಯ ಗೇಟ್ ಓಪನ್ ಮಾಡುವಾಗ ತನಗೆ ಕಿರುಕುಳ ನೀಡಿದ ವ್ಯಕ್ತಿಯ ವೀಡಿಯೊವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
Last night in #NammaBengaluru a friend of mine dropped me near my house and as I was about to open the gate, this man came and groped me from behind and started running. I called my friend and asked him to stop him before he rode away. *continued pic.twitter.com/Oj0kzU6gGv
— stew (@stuutiiiiiiiiii) March 19, 2024
ಕಳೆದ ರಾತ್ರಿ ನನ್ನ ಸ್ನೇಹಿತನೊಬ್ಬ ನನ್ನನ್ನು ನನ್ನ ಮನೆಯ ಹತ್ತಿರ ಡ್ರಾಪ್ ಮಾಡಿ ಹೋದ. ನಾನು ಗೇಟ್ ತೆರೆಯಲು ಮುಂದಾದಾಗ, ಈ ವ್ಯಕ್ತಿ ಬಂದು ನನ್ನನ್ನು ಹಿಂದಿನಿಂದ ಹಿಡಿದಪ್ಪಿ ಓಡಿ ಹೋದ. ನಾನು ನನ್ನ ಸ್ನೇಹಿತನಿಗೆ ಕರೆ ಮಾಡಿ ಅವನು ಓಡಿ ತಪ್ಪಿಸಿಕೊಳ್ಳುವ ಮೊದಲು ಅವನನ್ನು ಹಿಡಿಯಲು ಹೇಳಿದೆ ಎಂದು ಮಹಿಳೆ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕುಡಿಯಲು ನೀರು ಕೇಳಿ ಯುವತಿ ಜೊತೆ ಫುಡ್ ಡೆಲಿವರಿ ಬಾಯ್ ದುರ್ವರ್ತನೆ, FIR ದಾಖಲು
It is unfortunate that he is being set free. He wasn’t drunk and he is not a child. He knew what he was doing and he was waiting for a chance to get me. My deepest condolences to his #family because this is the kind of napunsak who is “The Man” of the family.
— stew (@stuutiiiiiiiiii) March 19, 2024
ಆ ವ್ಯಕ್ತಿಯನ್ನು ಏಕೆ ಬಿಟ್ಟು ಕಳಿಸಿದ್ದೀರಿ ಎಂದು ಕೇಳುವ ಎಲ್ಲರಿಗೂ ನಾನು ಹೇಳೋದು ಎಷ್ಟೇ. ನಾನು ಆತನನ್ನು ಬಿಟ್ಟುಕಳಿಸಿಲ್ಲ, ನಾನು ಅವನ ವಿರುದ್ಧ ದೂರು ನೀಡಿದ್ದೇನೆ ಮತ್ತು ಅವನು ಪೊಲೀಸರ ಮುಂದೆ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಪೋಸ್ಟ್ ಮಾಡುವ ಕಾರಣವೆಂದರೆ ಜಾಗೃತಿ ಮತ್ತು ಲೋಪದೋಷ. ಎಲ್ಲರೂ ಜಾಗೃತರಾಗಬೇಕು.
ಮಹಿಳೆ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ವ್ಯಕ್ತಿ ತನ್ನ ಮುಖವನ್ನು ಕ್ಯಾಮೆರಾದಿಂದ ಮುಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ. ಮಹಿಳೆ ಜೊತೆ ದುರ್ವರ್ತನೆ ತೋರಿದ್ದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ.
To everyone asking why did I leave him? I did not, I have filed a complaint against him and he has accepted what he did in front of cops. The reason behind posting this is spreading awareness and how there are loopholes in the Constitution that would anyway get him out.
— stew (@stuutiiiiiiiiii) March 20, 2024
ಆಕೆಯ ಸ್ನೇಹಿತ ಆತನನ್ನು ಹಿಡಿದಾಗ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೆ, ವ್ಯಕ್ತಿಯ ವಿರುದ್ಧ ಕೇವಲ ಆರೋಪಗಳಿರುವ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ಮಹಿಳೆ ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ