ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಳ್ಳತನ; ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಬಹುಮಾನ

ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಾಣೆಯಾಗಿದೆ ಎಂದು ಮಿಸ್ಬಾ ಶರೀಫ್ ತಿಲಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದುಬಾರಿ ಬೆಲೆಯ ಬೆಕ್ಕು ಜನವರಿ 15 ರಂದು ನಾಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಳ್ಳತನ; ಬೆಂಗಳೂರಿನಲ್ಲಿ ಎಫ್ಐಆರ್ ದಾಖಲು, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಬಹುಮಾನ
ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಳ್ಳತನ
Edited By:

Updated on: Jan 23, 2022 | 1:56 PM

ಬೆಂಗಳೂರು: ಮೇಕೆ, ಕುರಿ ಕಳ್ಳತನ ಆದ್ರೆ ಮಾಲೀಕರು ದೂರು ದಾಖಲಿಸುವುದನ್ನು ನೋಡಿದ್ದೇವೆ. ಆದ್ರೆ ಬೆಂಗಳೂರಿನಲ್ಲಿ ಬೆಕ್ಕು ಕಳ್ಳತನ ಆಗಿದೆ ಎಂದು ಎಫ್ಐಆರ್ ದಾಖಲಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬ ಮಹಿಳೆ ಬೆಕ್ಕು ಕಳ್ಳತನ ಆಗಿದೆ ಎಂದು ದೂರು ದಾಖಲಿಸಿದ್ದಾರೆ.

ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಾಣೆಯಾಗಿದೆ ಎಂದು ಮಿಸ್ಬಾ ಶರೀಫ್ ತಿಲಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ದುಬಾರಿ ಬೆಲೆಯ ಬೆಕ್ಕು ಜನವರಿ 15 ರಂದು ನಾಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಕೊಡುವುದಾಗಿಯೂ ಮಿಸ್ಬಾರವರು ಬಹುಮಾನ ಘೋಷಣೆ ಮಾಡಿದ್ದಾರೆ. ಕಾಣೆಯಾಗಿರುವ ಬೆಕ್ಕು ಉಡುಗೊರೆಯಾಗಿ ಬಂದಿದ್ದರಿಂದ ಆ ಬೆಕ್ಕಿನ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿರುವ ಮಿಸ್ಬಾ ಶರೀಫ್, ಬೆಕ್ಕು ಇಲ್ಲದೇ ಬದುಕೋದೆ ಇಲ್ಲ ಎಂದು‌ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ. ಮಿಸ್ಬಾ ತಮ್ಮ ಮನೆಯಲ್ಲಿ‌ ಬೆಕ್ಕಿನ ಜೊತೆ ಮೊಲವನ್ನೂ ಸಹ ಸಾಕಿದ್ದಾರೆ. ಮೊಲದ ಜೊತೆ ಬೆಕ್ಕು ತುಂಬಾ ಆತ್ಮೀಯವಾಗಿತ್ತು. ಆದ್ರೆ ಈಗ ಬೆಕ್ಕು ನಾಪತ್ತೆಯಾಗಿದ್ದು ಮೊಲ ಏಕಾಂಗಿಯಾಗಿದೆ.

ಪರ್ಷಿಯನ್ ಬೆಕ್ಕು

ಶಿವಮೊಗ್ಗ ನಗರದಲ್ಲಿ ಒಂದೇ ದಿನ 5 ಸರಗಳ್ಳತನ
ಗೃಹ ಸಚಿವರ ಜಿಲ್ಲೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಒಂದೇ ದಿನ ಶಿವಮೊಗ್ಗ ನಗರದ ವಿವಿಧೆಡೆ ಐದು ಸರಗಳ್ಳತನ ನಡೆದಿದೆ. ದೊಡ್ಡಪೇಟೆ, ಕೋಟೆ, ಜಯನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ನಲ್ಲಿ ಬಂದು ದುಷ್ಕರ್ಮಿಗಳು ಸರಗಳ್ಳತನ ಮಾಡಿದ್ದಾರೆ. ಮಂಗಳಾ ಎಂಬ ಮಹಿಳೆಯ 55 ಗ್ರಾಂ ಮಾಂಗಲ್ಯ ಸರಗಳ್ಳ ದೋಚಿದ್ದು ಈ ಸರಗಳ್ಳತನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಆರೂವರೆ ತಿಂಗಳಿಗೆ ಜನಿಸಿತಾ ಪ್ರಿಯಾಂಕಾ ಚೋಪ್ರಾ ಮಗು? ಹಲವು ಸತ್ಯಗಳನ್ನು ಮುಚ್ಚಿಟ್ಟ ನಟಿ

ಮುಂಬೈ: ಕಮಲಾ ಬಿಲ್ಡಿಂಗ್ ಅಗ್ನಿ ದುರಂತದ ತನಿಖೆಗೆ 4 ಸದಸ್ಯರ ಸಮಿತಿ; 15 ದಿನಗಳಲ್ಲಿ ವರದಿ ಸಲ್ಲಿಸಲು ಸೂಚನೆ

Published On - 1:47 pm, Sun, 23 January 22