ಕಾರ್ಮಿಕನಿಗೆ ಮೆಟ್ರೋದಲ್ಲಿ ಬಿಡದೆ ಅವಮಾನ ಆರೋಪ: ನಡೆದಿದ್ದೇನು? ಇಲ್ಲಿದೆ ಸತ್ಯಾಸತ್ಯತೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 10, 2024 | 7:34 PM

ಇತ್ತೀಚಿಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ರೈತನನ್ನ ಒಳಗಡೆ ಬಿಡದೆ ಅವಮಾನಿಸಿದ್ದರು. ಇದರ ಬೆನ್ನಲೇ ಏ.07 ರಂದು ‘ಬಟ್ಟೆ ಸರಿಯಿಲ್ಲ ಎಂದು ಮೊಟ್ರೋ(Namma Metro) ಸಿಬ್ಬಂದಿ ಕಾರ್ಮಿಕನನ್ನು ತಡೆದು ನಿಲ್ಲಿಸಿ ಅಪಮಾನಿಸಲಾಗಿದೆ ಎಂಬ ಆರೋಪ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ (Doddakallasandra metro Station) ಕೇಳಿಬಂದಿತ್ತು. ಇದಕ್ಕೆ ಬಿಎಂಆರ್​ಸಿಎಲ್​ ಇದೀಗ ಸ್ಪಷ್ಟನೆ ನೀಡಿದೆ.

ಕಾರ್ಮಿಕನಿಗೆ ಮೆಟ್ರೋದಲ್ಲಿ ಬಿಡದೆ ಅವಮಾನ ಆರೋಪ: ನಡೆದಿದ್ದೇನು? ಇಲ್ಲಿದೆ ಸತ್ಯಾಸತ್ಯತೆ
ಕಾರ್ಮಿಕನಿಗೆ ಮೆಟ್ರೋದಲ್ಲಿ ಬಿಡದೆ ಅವಮಾನ ಆರೋಪ
Follow us on

ಬೆಂಗಳೂರು, ಏ.10: ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ (Doddakallasandra metro Station) ಬಟ್ಟೆ ಸರಿಯಿಲ್ಲ ಎಂಬ ಕಾರಣಕ್ಕೆ ಮೊಟ್ರೋ(Namma Metro) ಸಿಬ್ಬಂದಿ ಕಾರ್ಮಿಕನನ್ನು ತಡೆದು ನಿಲ್ಲಿಸಿ ಅಪಮಾನಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಶರ್ಟ್​​ನ​​ ಗುಂಡಿಯನ್ನ ಹಾಕಿಕೊಂಡು ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲ ಎಂದು ಮೆಟ್ರೋ ಸಿಬ್ಬಂದಿ ಕಾರ್ಮಿಕನಿಗೆ ಹೇಳಿದ್ದರು ಎನ್ನಲಾಗಿತ್ತು. ಇದಕ್ಕೆ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದೀಗ ಬಿಎಂಆರ್​​ಸಿಎಲ್​​ ದೊಡ್ಡಕಲ್ಲಸಂದ್ರ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡಿದೆ.

ಏ.7ರಂದು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಮದ್ಯಸೇವಿಸಿ ಮೆಟ್ರೋದಲ್ಲಿ ಪ್ರಯಾಣಿಸಲು ವ್ಯಕ್ತಿಯೊಬ್ಬ ಮುಂದಾಗಿದ್ದ. ಈ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿ ಆತನನ್ನು ತಪಾಸಣೆ ಮಾಡಿದ್ದಾರೆ. ಬಳಿಕ ಆತನಿಂದ ಮದ್ಯದ ವಾಸನೆ ಗಮನಿಸಿ ಪ್ರಯಾಣಿಸದಂತೆ ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಕುರಿತು ವ್ಯಕ್ತಿಯ ಬಟ್ಟೆ ಕೊಳಕಾಗಿತ್ತು ಅಥವಾ ಶರ್ಟ್ ಬಟನ್ ಹರಿದಿತ್ತು ಎಂಬ ಕಾರಣಕ್ಕಾಗಿ ಆತನಿಗೆ ಪ್ರಯಾಣ ನಿರಾಕರಿಸಿದೆ ಎನ್ನಲಾಗಿತ್ತು. ಆದರೆ, ಆ ವ್ಯಕ್ತಿ ಮದ್ಯಸೇವಿಸಿದ ಹಿನ್ನೆಲೆ ಪ್ರಯಾಣಿಸಲು ನಿರಾಕರಿಸಿದ್ದಾಗಿ ಮೆಟ್ರೋ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ಬೆಂಗಳೂರು: ಕಾರ್ಮಿಕನನ್ನು ಮೆಟ್ರೋದೊಳಗೆ ಬಿಡದೆ ಅವಮಾನಿಸಿದ ಸಿಬ್ಬಂದಿ

ಇತ್ತೀಚಿಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ರೈತನನ್ನ ಒಳಗಡೆ ಬಿಡದೆ ಅವಮಾನಿಸಿದ್ದರು. ಬಟ್ಟೆ ಸ್ವಚ್ಛವಾಗಿಲ್ಲ ಎಂಬ ಕಾರಣಕ್ಕೆ ರೈತನನ್ನು ಮೆಟ್ರೋ ಒಳಗೆ ಬಿಡದೆ ಸಿಬ್ಬಂದಿ ಅವಮಾನಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಆ ಸಿಬ್ಬಂದಿಯ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಬಿಎಂಆರ್​ಸಿಎಲ್​ ಹೇಳಿತ್ತು. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದೆ ಎಂಬ ಊಹಾಪೋಹಗಳಿಗೆ ಬಿಎಂಆರ್​ಸಿಎಲ್​ ಸ್ಪಷ್ಟನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Wed, 10 April 24