ಬೆಂಗಳೂರು, ನ.21: ವರ್ಡ್ ಕಪ್ ಫೈನಲ್ ಮ್ಯಾಚ್ ನಲ್ಲಿ ಬೆಟ್ಟಿಂಗ್ (World Cup Match Betting) ಆಡುತ್ತಿದ್ದ ಹಿನ್ನೆಲೆ ಸಿಸಿಬಿ ಪೊಲೀಸರು (CCB Police) ಆರ್.ಆರ್. ನಗರದಲ್ಲಿ ಫ್ಲಾಟ್ ಒಂದರ ಮೇಲೆ ದಾಳಿ ನಡೆಸಿದ್ದು ಒಂದು ಕೆಜಿ ಚಿನ್ನ, ಲ್ಯಾಪ್ ಟಾಪ್ ಹಾಗು ಮೊಬೈಲ್ ಪತ್ತೆಯಾಗಿದೆ. ಆನ್ಲೈನ್ ನಲ್ಲಿ ಕೆಲ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರ್.ಆರ್. ನಗರದ ಫ್ಲಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು ನೂರು ಗ್ರಾಂನ ಹತ್ತು ಚಿನ್ನದ ಬಿಸ್ಕೆಟ್ಗಳು (Gold Biscuits) ಸೇರಿದಂತೆ ಬರೋಬ್ಬರಿ ಒಂದು ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಹೀಗಾಗಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ರವಿ ಅಲಿಯಾಸ್ ಟ್ಯಾಂಗೋ ರವಿ ಎಂಬ ರೌಡಿಯೋರ್ವನ ಕೊಲೆಗೆ ಸಂತು ಗ್ಯಾಂಗ್ ಸ್ಕೆಚ್ ಹಾಕಿತ್ತು. ಸದ್ಯ ಕೊಲೆ ಮಾಡುವ ಮೊದಲೇ ಸಿಸಿಬಿ ಪೊಲೀಸರು ಗ್ಯಾಂಗ್ ಅರೆಸ್ಟ್ ಮಾಡಿದ್ದಾರೆ. ಸಂತೋಷ್ ಅಲಿಯಾಸ್ ಸಂತು, ಕಿರಣ್ ಹರೀಶ್, ರಘು ಮತ್ತು ಕುಮಾರ್ ಬಂಧಿತ ಅರೋಪಿಗಳು. ಆನಂದ್ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಇರುವ ಉಮೇಶ್ ಅಲಿಯಾಸ್ ಮಿಕಾನ ಸಹಕರ ಸಂತೋಷ್ ಗ್ಯಾಂಗ್ ಕೊಲೆಗೆ ಸಂಚು ರೂಪಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಸತ್ತು ಹೋಗಿದ್ದೇನೆ ಎಂದು ನಂಬಿಸಿ 2 ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಅರೆಸ್ಟ್!
ಕೆಲ ದಿನಗಳ ಹಿಂದೆ ನೆಲಮಂಗಲ ಬಳಿ ಇಸ್ವೀಟ್ ಅಡ್ಡೆಯಲ್ಲಿ ಭೇಟಿಯಾಗಿದ್ದ ರೌಡಿ ರವಿ ಮತ್ತು ಸಂತೋಷ್ಗೆ ಫೈನಾನ್ಸ್ ಮಾಡುವಾಗ ಗಲಾಟೆ ನಡೆದಿತ್ತು. ಈ ವೇಳೆ ಟ್ಯಾಂಗೋ ರವಿ ಸಂತೂ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆ ವಿಚಾರ ಉಮೇಶ್ ಬಳಿ ಹೇಳಿಕೊಂಡಿದ್ದ. ನಂತರ ಟ್ಯಾಂಗೋ ರವಿಯನ್ನು ಕೊಲೆ ಮಾಡಲು ಪ್ಲಾನ್ ಹಾಕಿದ್ದ. ಸುಮಾರು ಏಂಟರಿಂದ ಹತ್ತು ಕಾರಿನಲ್ಲಿ ಗ್ಯಾಂಗ್ ಮಾಡಿಕೊಂಡು ಟ್ಯಾಂಗೋ ಊರಾದ ಅಮೃತೂರಿಗೆ ಸಂತೂ ಗ್ಯಾಂಗ್ ಹೋಗಿತ್ತು. ಸಿಕ್ಕ ಸಿಕ್ಕಲ್ಲಿ ಹೊಡೆದು ಬಿಡಬೇಕು ಎಂದು ಪ್ಲಾನ್ ಮಾಡಿದ್ರು. ಆದರೆ ಈ ವೇಳೆ ಟ್ಯಾಂಗೋ ಮನೆಯಲ್ಲಿ ಇಲ್ಲದೆ ಎಸ್ಕೇಪ್ ಆಗಿದ್ರು. ಈ ವಿಚಾರ ತಿಳಿದಿದ್ರು ಸಹ ಅಮೃತೂರು ಪೊಲೀಸರು ಕೇಸ್ ಹಾಕದೆ ಹಾಗೆಯೇ ವಾರ್ನ್ ಮಾಡಿ ಕಳಿಸಿದ್ದರು. ಬಳಿಕ ಪೀಣ್ಯ ಬಳಿ ಟ್ಯಾಂಗೋ ರವಿ ಕೊಲೆಗೆ ಸಂತೂ ಮತ್ತೊಂದು ಪ್ಲಾನ್ ಮಾಡಿದ್ದ. ಈ ಮಾಹಿತಿ ಪಡೆದಿದ್ದ ಸಿಸಿಬಿಯ OCW ವಿಭಾಗ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿ ರೌಡಿಗಳನ್ನು ಅರೆಸ್ಟ್ ಮಾಡಿದೆ. ಆರೋಪಿಗಳಿಂದ ಮಚ್ಚು ಲಾಂಗ್ ಪೆಪ್ಪರ್ ಸ್ಪ್ರೇ ವಶಕ್ಕೆ ಪಡೆಯಲಾಗಿದೆ. ಪೀಣ್ಯ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ