ಬೆಂಗಳೂರು: ಕರ್ನಟಕ ರಾಜಧಾನಿ ಬೆಂಗಳೂರಿನಲ್ಲಿ ರೇಬಿಸ್ ರೋಗವನ್ನು ನಿರ್ನಾಮ ಮಾಡಲು ರೋಟರಿ ಕ್ಲಬ್ ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಹಾಕಿಕೊಂಡಿದೆ. ಈ ಹಿಂದೆಯೂ ರೋಟರಿ ಕ್ಲಬ್ ಇದೇ ರೀತಿ ಪೋಲಿಯೋ ಸೋಂಕನ್ನು ಜಗತ್ತಿನಿಂದ ನಾಶಪಡಿಸಲು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅದರಂತೆ ಭಾರತ ಸರ್ಕಾರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಾರಿಗೆ ತಂದಿತ್ತು.
ಈ ಬಾರಿಯೂ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿ (CSR funding) ಕರ್ನಾಟಕ ಸರ್ಕಾರವು ಬಿವಿಎಂಪಿ, ಪಶು ಸಂಗೋಪನೆ ಇಲಾಖೆ, ಬೆಂಗಳೂರು ರೋಟರಿ ಕ್ಲಬ್ (Rotary Club of Bangalore) ಸಹಯೋಗದಲ್ಲಿ ಈ ಬಾರಿ ರೇಬಿಸ್ ರೋಗ ನಿರ್ನಾಮ ಯೋಜನೆ ಅಂಗವಾಗಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಬೆಂಗಳೂರು ರೋಟರಿ ಕ್ಲಬ್ ಲ್ಯಾವೆಲೆ ರಸ್ತೆಯಲ್ಲಿರುವ ರೋಟರಿ ಹೌಸ್ ಆಫ್ ಫ್ರೆಂಡ್ಶಿಪ್ನಲ್ಲಿ ನಾಳೆ ಮಂಗಳವಾರ (ಸೆಪ್ಟೆಂಬರ್ 28) ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲರೂ ಭಾಗವಹಿಸಿ, ಕಾರ್ಯಕ್ರಮ ಯಶ್ವಸ್ವಿಯಾಗಿಸಬೇಕು ಎಂದು ಬೆಂಗಳೂರು ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ನಿರ್ದೇಶಕರು ಮನವಿ ಮಾಡಿದ್ದಾರೆ.
Also Read:
Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್ ಮಹಾಮಾರಿ ಕಾಟ
Also Read:
ಅಟ್ಲಾಂಟಾ ಸಂಸ್ಥೆಯಿಂದ ಬೆಂಗಳೂರು ನಗರ ಕೇಂದ್ರ ಗ್ರಂಥಾಲಯಕ್ಕೆ 15 ಸಾವಿರ ಪುಸ್ತಕಗಳ ಕೊಡುಗೆ: ಸುರೇಶ್ ಕುಮಾರ್
(World Rabies Day 2021: Rotary Club of Bangalore massive project on wipe out Rabies from Bengaluru city on september 28 2021)