ಬೆಂಗಳೂರು: ಜ.8 ರಂದು ಶರತ್(24) ಎಂಬಾತನು ಕುಡಿದು ಬಿದ್ದಾಗ ಗಾಜು ತಗುಲಿ ಕೈಗೆ ಗಾಯವಾಗಿದೆ. ತೀವ್ರ ರಕ್ತ ಸುರಿಯುತ್ತಿದ್ದರಿಂದ ದಾಸರಹಳ್ಳಿಯ ಮಧು ಆಸ್ಪತ್ರೆಗೆ ಸೇರಿಸಿದ್ದು, ಸರ್ಜರಿ ಮಾಡಲಾಗಿತ್ತು. ಚೆನ್ನಾಗಿ ಇದ್ದ ಶರತ್ ನಿನ್ನೆ(ಜ.10) ಸಾವನ್ನಪ್ಪಿದ್ದಾನೆ. ವೈದ್ಯರ ನಿರ್ಲಕ್ಷದಿಂದ ಯುವಕ ಬಲಿಯಾಗಿದ್ದಾನೆ ಎಂದು ಮೃತ ಯುವಕನ ಸಂಬಂಧಿಕರು ಆರೋಪಿಸಿ ಕೆಪಿ ಅಗ್ರಹಾರ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಭಾನುವಾರ(ಜ.8) ದಂದು ಕುಡಿದು ನೆಲಕ್ಕೆ ಬಿದ್ದಿದ್ದ ಸತೀಶ್ ಕೈಗೆ ಗಾಜು ಚುಚ್ಚಿ ನರ ಕಟ್ ಆಗಿತ್ತು. ರಕ್ತಸ್ರಾವ ಆಗಿ ಹೆಚ್ಚಿನ ರಕ್ತ ಹೋಗಿತ್ತು. ಹೀಗಾಗಿ ಕುಟುಂಬಸ್ಥರು ಸತೀಶ್ನನ್ನು ಭಾನುವಾರ ರಾತ್ರಿ ಮಾಗಡಿ ರಸ್ತೆ ದಾಸರಹಳ್ಳಿಯ ಮಧು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಸರ್ಜರಿ ಮಾಡಬೇಕು ಎಂದಿದ್ದು ಸೋಮವಾರ(ಜ.9) ಸರ್ಜರಿ ಕೂಡ ಮಾಡಿದ್ದಾರೆ. ಸತೀಶ್ ಸರ್ಜರಿಯಾದ ಬಳಿಕ ಕುಟುಂಬಸ್ಥರೊಂದಿಗೆ ಚೆನ್ನಾಗಿ ಮಾತನಾಡಿದ್ದು, ಇದ್ದಕ್ಕಿದ್ದಂತೆ ನಿನ್ನೆ(ಜ.10) ಮಧ್ಯಾಹ್ನ ಆಸ್ಪತ್ರೆಯಲ್ಲಿ ಸತೀಶ್ ಸಾವನ್ನಪ್ಪಿದ್ದಾನೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ; 15ಕುರಿಗಳು ಬೆಂಕಿಗಾಹುತಿ
ಬೆಂಗಳೂರು: ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ಬಳಿ ಇಂದು(ಜ.11) ಬೆಳಗಿನ ಜಾವ 4.50 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ನಿಂದ ಕುರಿಗಳಿರುವ ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಕರೆ ಮಾಡಿದ್ದಾರೆ. ಅಷ್ಟೋತ್ತಿಗಾಗಲೇ ಬೆಂಕಿ ಆವರಿಸಿದ್ದು, ಬೆಂಕಿ ನಂದಿಸುವಷ್ಟರಲ್ಲಿ 15 ಕುರಿಗಳು ಸಾವನ್ನಪ್ಪಿದ್ದಾವೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ
Published On - 6:52 am, Wed, 11 January 23