ಬೆಂಗಳೂರಿನಿಂದ ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ 8 ಸ್ನೇಹಿತರು: ಗೋಕರ್ಣ ಕಡಲ ತೀರದಲ್ಲಿ ಯುವಕ ನೀರುಪಾಲು

| Updated By: ಸಾಧು ಶ್ರೀನಾಥ್​

Updated on: Aug 09, 2021 | 10:16 AM

ಗೋಕರ್ಣದ ಕಡಲ ತೀರದಲ್ಲಿ ಈಜಲು ಹೋದ ಯುವಕ, ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಸ್ಥಳೀಯ ಜನರ ಎಚ್ಚರಿಕೆಯ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು.

ಬೆಂಗಳೂರಿನಿಂದ ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ 8 ಸ್ನೇಹಿತರು: ಗೋಕರ್ಣ ಕಡಲ ತೀರದಲ್ಲಿ ಯುವಕ ನೀರುಪಾಲು
ಬೆಂಗಳೂರಿನಿಂದ ವಾರಾತ್ಯ ಪ್ರವಾಸಕ್ಕೆ ಬಂದಿದ್ದ 8 ಸ್ನೇಹಿತರು: ಗೋಕರ್ಣ ಕಡಲ ತೀರದಲ್ಲಿ ಯುವಕ ನೀರುಪಾಲು
Follow us on

ಕಾರವಾರ: ಕಳೆದ ವಾರಾಂತ್ಯ ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆಗೆ ಬೆಂಗಳೂರಿನಿಂದ 8 ಮಂದಿ ಸ್ನೇಹಿತರು ಬಂದಿದ್ದರು. ಆದರೆ ಸಮುದ್ರದಲ್ಲಿ ಈಜಲು ಇಳಿದಿದ್ದ ಯುವಕರ ಪೈಕಿ ಒಬ್ಬ ನೀರುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಗೋಕರ್ಣ ಕಡಲತೀರದಲ್ಲಿ ಈ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ ಅರುಣ ಲಕ್ಕಪ್ಪ ಸಮುದ್ರಪಾಲಾದ ಯುವಕ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕರ್ಣದ ಕಡಲ ತೀರದಲ್ಲಿ ಈಜಲು ಹೋದ ಯುವಕ, ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಸ್ಥಳೀಯ ಜನರ ಎಚ್ಚರಿಕೆಯ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಅಲೆಯ ಅಬ್ಬರಕ್ಕೆ ಯುವಕ ಕೊಚ್ಚಿಹೋಗಿದ್ದಾನೆ. ಸಮುದ್ರಕ್ಕೆ ಇಳಿದಿದ್ದ ಉಳಿದವರು ಈಜಿ ದಡ ಸೇರಿದ್ದಾರೆ. ಸಮುದ್ರ ಪಾಲಾದ ಯುವಕನ ಪತ್ತೆಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಗೋಕರ್ಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Mangaluru: ನಿಶ್ಚಿತಾರ್ಥ ಆಗಬೇಕಿದ್ದ ಯುವಕನ ಕೊಲೆ ಪ್ರಕರಣ; 6 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

(youth aruna lakkappa from btm layout bangalore died while swimming in sea at gokarna)

Published On - 10:16 am, Mon, 9 August 21