4ನೇ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ

ಬೆಂಗಳೂರು: ಅಪಾರ್ಟ್​​ಮೆಂಟ್​ನ 4ನೇ ಮಹಡಿಯಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ತಡರಾತ್ರಿ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ಸಮೀಪದ ಅಪಾರ್ಟ್​​ಮೆಂಟ್​ ಬಳಿ ಘಟನೆ ನಡೆದಿದೆ. ಉತ್ತಮ ಹೆಗಡೆ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಉತ್ತಮ ಹೆಗಡೆ, ತಂದೆ-ತಾಯಿಯೊಂದಿಗೆ ಖಾಸಗಿ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ವಾಸ ಮಾಡುತ್ತಿದ್ದ. ಇತ್ತೀಚೆಗೆ ಮದುವೆಗೆ ನಿರಾಕರಿಸಿದ ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತ ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಎಂದಿನಂತೆ ಎಲ್ಲರದೊಂದಿಗೆ ಕುಳಿತು ಊಟ […]

4ನೇ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ

Updated on: May 21, 2020 | 5:54 PM

ಬೆಂಗಳೂರು: ಅಪಾರ್ಟ್​​ಮೆಂಟ್​ನ 4ನೇ ಮಹಡಿಯಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ತಡರಾತ್ರಿ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ಸಮೀಪದ ಅಪಾರ್ಟ್​​ಮೆಂಟ್​ ಬಳಿ ಘಟನೆ ನಡೆದಿದೆ. ಉತ್ತಮ ಹೆಗಡೆ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಉತ್ತಮ ಹೆಗಡೆ, ತಂದೆ-ತಾಯಿಯೊಂದಿಗೆ ಖಾಸಗಿ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಲ್ಲಿ ವಾಸ ಮಾಡುತ್ತಿದ್ದ.

ಇತ್ತೀಚೆಗೆ ಮದುವೆಗೆ ನಿರಾಕರಿಸಿದ ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈತ ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಎಂದಿನಂತೆ ಎಲ್ಲರದೊಂದಿಗೆ ಕುಳಿತು ಊಟ ಮಾಡಿ ಮಲಗಿದ್ದ. ಇಂದು ನಸುಕಿವ ಜಾವ 3 ಗಂಟೆ ವೇಳೆ ಅಪಾರ್ಟ್ ಮೆಂಟ್ ನಿಂದ ಹಾರಿ ಪ್ರಾಣಬಿಟ್ಟಿದ್ದಾನೆ. ರಾಮಮೂರ್ತಿನಗರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Published On - 5:53 pm, Thu, 21 May 20