ಮೆಟ್ರೋದಲ್ಲಿ ಫ್ರೀ ಪ್ರಯಾಣ ಹೇಗೆಂದು ತೋರಿಸಿಕೊಟ್ಟ ವಿದೇಶಿ ಯೂಟ್ಯೂಬರ್ ವಿಡಿಯೋ ವೈರಲ್, ಕೇಸ್ ದಾಖಲಿಸಲು ಮುಂದಾದ BMRCL

|

Updated on: Sep 24, 2023 | 3:06 PM

ಮೆಟ್ರೋದಲ್ಲಿ ಪ್ರಯಾಣಿಸಲು ಟೋಕನ್​ ಅಥವಾ ಮೆಟ್ರೋ ಕಾರ್ಡ್‌ ​ಕಡ್ಡಾಯವಾಗಿದೆ. ಆದರೆ ಇಲ್ಲೊಬ್ಬ ವಿದೇಶಿ ಯೂಟ್ಯೂಬರ್ ಉಚಿತವಾಗಿ ಮೆಟ್ರೋ ಪ್ರಯಾಣ ಮಾಡುವ ಬಗ್ಗೆ ವಿಡಿಯೋ ಮಾಡಿ ವೈರಲ್ ಆಗಿದ್ದಾನೆ. ಹಾಗೂ ಬಿಎಂಆರ್​ಸಿಎಲ್ ಆಕ್ರೋಶಕ್ಕೆ ಕಾರಣನಾಗಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್‌, ಯೂಟ್ಯೂಬರ್ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವುದಾಗಿ ಹೇಳಿದೆ.

ಮೆಟ್ರೋದಲ್ಲಿ ಫ್ರೀ ಪ್ರಯಾಣ ಹೇಗೆಂದು ತೋರಿಸಿಕೊಟ್ಟ ವಿದೇಶಿ ಯೂಟ್ಯೂಬರ್ ವಿಡಿಯೋ ವೈರಲ್, ಕೇಸ್ ದಾಖಲಿಸಲು ಮುಂದಾದ BMRCL
ಫಿಡಿಯಾಸ್ ಪನಾಯೊಟೌ
Follow us on

ಬೆಂಗಳೂರು, ಸೆ.24: ಬಿಲಿಯನೇರ್ ಎಲೋನ್ ಮಸ್ಕ್ ಅವರನ್ನು ಅಪ್ಪಿಕೊಂಡ ನಂತರ ಫೇಮರ್​ ಆಗಿದ್ದ ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಕಾಮಿಡಿ ಸ್ಟಾರ್ ಫಿಡಿಯಾಸ್ ಪನಾಯೊಟೌ (Fidias Panayiotou) ಅವರು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹಾಗೂ ಬಿಎಂಆರ್​ಸಿಎಲ್ (BMRCL) ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಟ್ರಾಫಿಕ್​​ ಕಿರಿಕಿರಿ ಇಲ್ಲದೆ ಬಹುಬೇಗ ಪ್ರಯಾಣಿಸುವ ಉದ್ದೇಶದಿಂದ ಸಾವಿರಾರು ಜನರು ಮೆಟ್ರೋ (Namma Metro) ಮೊರೆ ಹೋಗುತ್ತಾರೆ. ಮೆಟ್ರೋದಲ್ಲಿ ಪ್ರಯಾಣಿಸಲು ಟೋಕನ್​ ಅಥವಾ ಮೆಟ್ರೋ ಕಾರ್ಡ್‌ ​ಕಡ್ಡಾಯವಾಗಿದೆ. ಆದರೆ ಇಲ್ಲೊಬ್ಬ ವಿದೇಶಿ ಯೂಟ್ಯೂಬರ್ ಉಚಿತವಾಗಿ ಮೆಟ್ರೋ ಪ್ರಯಾಣ ಮಾಡುವ ಬಗ್ಗೆ ವಿಡಿಯೋ ಮಾಡಿ ವೈರಲ್ ಆಗಿದ್ದಾನೆ.

ಯೂಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮದ ಕಾಮಿಡಿ ಸ್ಟಾರ್ ಫಿಡಿಯಾಸ್ ಪನಾಯೊಟೌ ಅವರು ಇತ್ತೀಚೆಗೆ ಯಾವುದೇ ಟಿಕೆಟ್‌ ಅಥವಾ ಮೆಟ್ರೋ ಕಾರ್ಡ್‌ ಇಲ್ಲದೆ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಹಾಗೂ ಉಚಿತ ಮೆಟ್ರೋ ಪ್ರಯಾಣ ಮಾಡುವುದು ಹೇಗೆ ಎಂಬ ಬಗ್ಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್‌, ಯೂಟ್ಯೂಬರ್ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕುವುದಾಗಿ ಹೇಳಿದೆ.

ಇದನ್ನೂ ಓದಿ: ಬೈಯ್ಯಪ್ಪನಹಳ್ಳಿಯಿಂದ ಕೆಆರ್​ ಪುರಂ ನಡುವೆ ಮೆಟ್ರೋ ಮಾರ್ಗ ಸುರಕ್ಷತಾ ತಪಾಸಣೆ ಯಶಸ್ವಿ: ಬಿಎಂಆರ್​ಸಿಎಲ್

2.26 ಮಿಲಿಯನ್ ಚಂದಾದಾರರನ್ನು ಹೊಂದಿರುವ ಫಿಡಿಯಾಸ್ ಪನಾಯೊಟೌ ಅವರು, ಭಾರತದಲ್ಲಿ ಮೆಟ್ರೋವನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ನಾನು ನಿಮಗೆ ಕಲಿಸುತ್ತೇನೆಂದು ವಿಡಿಯೋ ಮಾಡಿದ್ದಾರೆ. ಮೆಟ್ರೋ ಎಂಟ್ರಿ ಗೇಟ್​ ಓಪನ್ ಆಗಲು ಯಾವುದೇ ಕಾರ್ಡ್ ಬಳಸದೆ ಅಥವಾ ಕಾಯಿನ್ ಇಲ್ಲದೆ ಗೇಟ್ ಅನ್ನು ಜಿಗಿದು ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಮಾಡಿದ್ದಾರೆ. ಇದೆಲ್ಲವನ್ನು ವಿಡಿಯೋ ಮಾಡಿ ‘ಭಾರತೀಯ ಮೆಟ್ರೋಲ್ಲಿ ಹೇಗೆ ನುಸುಳುವುದು’ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಮತ್ತೊಂದೆಡೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಪ್ರತಿಕ್ರಿಯೆ ನೀಡಿದ್ದು, ಒಬ್ಬ ವ್ಯಕ್ತಿಯು ಟಿಕೆಟ್ ಇಲ್ಲದೆ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿ ಮೆಟ್ರೋದಲ್ಲಿ ಪ್ರಯಾಣಿಸುವ ವಿಡಿಯೋವನ್ನು ನಾನು ನೋಡಿದ್ದೇನೆ. ಅಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ. ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನಾನು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ವಿಡಿಯೋ ಕ್ಲಿಪ್‌ನಲ್ಲಿ ಫಿಡಿಯಾಸ್ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಪಡೆಯುವ ಮೊದಲು ಮತ್ತು ನಿಲ್ದಾಣದಿಂದ ನಿರ್ಗಮಿಸುವ ಮೊದಲು ತೆರವುಗೊಳಿಸಬೇಕಾದ ಗೇಟ್ ಅನ್ನು ಜಿಗಿಯುವುದನ್ನು ಕಾಣಬಹುದು. ಸ್ಮಾರ್ಟ್‌ಕಾರ್ಡ್ ಅಥವಾ ಟೋಕನ್ ಅನ್ನು ಟ್ಯಾಪ್ ಮಾಡದೆ ಪ್ರಯಾಣಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ