ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ತಡೆಗೆ ಶ್ವಾನಗಳ ಕೊರಳಿಗೆ ಕ್ಯೂಆರ್​ಕೋಡ್​ ಟ್ಯಾಗ್​

ಬೆಂಗಳೂರಲ್ಲಿನ ಬೀದಿನಾಯಿಗಳ ಹಾವಳಿ ತಡೆಗಟ್ಟಲು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಪಶುವೈದ್ಯರು ಒಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಅದೇನು ? ಇಲ್ಲಿದೆ ಮಾಹಿತಿ

ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ತಡೆಗೆ ಶ್ವಾನಗಳ ಕೊರಳಿಗೆ ಕ್ಯೂಆರ್​ಕೋಡ್​ ಟ್ಯಾಗ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 24, 2023 | 3:11 PM

ಬೆಂಗಳೂರು ಸೆ.23: ಇತ್ತೀಚಿಗೆ ನಗರದಲ್ಲಿ ಬೀದಿನಾಯಿಗಳ (Stray Dog) ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಪಶುವೈದ್ಯರು ಮಾರ್ಗ ಕಂಡು ಹಿಡಿದಿದ್ದಾರೆ. ಅದು ನಗರದಲ್ಲಿನ ಬೀದಿನಾಯಿಗಳ ಮೊದಲ ಬಾರಿಗೆ ಕ್ಯೂಆರ್ ಕೋಡ್ (Qr Code Tag)​​ ಹೊಂದಿರುವ ಜಿಯೋಟ್ಯಾಗ್​​​ಗಳನ್ನು ಹಾಕಲಾಗಿದೆ. ಬೀದಿನಾಯಿಗಳ ಸಂಖ್ಯೆ ಮೇಲೆ ನಿಗಾ ಇಡಲು ಸಾರ್ವಜನಿಕರಿಗೆ, ಪಶುವೈದ್ಯರು ಮತ್ತು ನೋಂದಾಯಿತ ಸ್ವಯಂಸೇವಕರಿಗೆ ಇದರಿಂದ ಅನುಕೂಲವಾಗಲಿದೆ. ಈ ಕ್ಯೂಆರ್​ ಕೋಡ್​​ ಅನ್ನು ಸ್ಯ್ಕಾನ್​​​​​​ ಮಾಡುವ ಮೂಲಕ ಯಾವ ತಳಿ ನಾಯಿ, ಅದಕ್ಕೆ ವ್ಯಾಕ್ಸಿನೇಷನ್ ಆಗಿದೆಯಾ? ಅದರ ಆರೋಗ್ಯ ಸ್ಥಿತಿ ಮತ್ತು ಆ ಶ್ವಾನವನ್ನು ಆರೈಕೆ ಮಾಡುತ್ತಿದ್ದವರ ಸಂಪರ್ಕಸಂಖ್ಯೆಯೂ ತಿಳಿದುಕೊಳ್ಳಬಹುದಾಗಿದೆ.

ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯ ಪಶುಸಂಗೋಪನೆ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯವನ್ನು ಆರಂಭವಾಗಿದೆ. ಪಶುವೈದ್ಯಕೀಯ ಕಾಲೇಜಿನ ಪಶುವೈದ್ಯರು ಪ್ರಾಯೋಗಿಕವಾಗಿ ಶನಿವಾರ ಜಾಕಿ ಮತ್ತು ಪಿಂಕಿ ಎಂಬ ಹೆಸರಿನ ಎರಡು ಬೀದಿನಾಯಿಗಳಿಗೆ QR ಕೋಡ್ ಸ್ಕ್ಯಾನರ್​ಗಳನ್ನು ಅಳವಡಿಸಿದ್ದಾರೆ. ಜಿಯೋಟ್ಯಾಗ್ QR ಕೋಡ್ ಸ್ಕ್ಯಾನರ್​ಅನ್ನು ದೂರದಿಂದ ಮೊಬೈಲ್ ಅಥವಾ ವಿಶೇಷ ಸ್ಕ್ಯಾನಿಂಗ್ ಕ್ಯಾಮೆರಾಗಳ ಮೂಲಕ ಸ್ಕ್ಯಾನ್ ಮಾಡಬಹುದಾಗಿದೆ.

ಇದನ್ನೂ ಓದಿ: BBMP survey for castration: ಬೀದಿನಾಯಿಗಳ ಉಪಟಳಕ್ಕೆ ಬೆಂಗಳೂರಿಗರು ಗಢಗಢ ನಡುಗುತ್ತಿದ್ದಾರೆ, ಬಿಬಿಎಂಪಿ ನಾಯಿಗಳ ಲೆಕ್ಕ ಹಾಕುತ್ತಿದೆ!

ಮುಂಬೈನಲ್ಲಿ 1,500 ಕ್ಕೂ ಹೆಚ್ಚು ಬೀದಿಬದಿಗಳಿಗೆ ಜಿಯೋಟ್ಯಾಗ್ ಹಾಕಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೇ ಮಾದರಿಯನ್ನು ಬೆಂಗಳೂರಿನ ಬೀದಿ ನಾಯಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಮನುಷ್ಯರಂತೆ ಬೀದಿನಾಯಿಗಳು ಸಹ ತಮ್ಮ ವಿಶಿಷ್ಟ ಗುರುತಿನ ಚೀಟಿಗಳನ್ನು ಹೊಂದಿದ್ದು, ನಾಯಿಯ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ 24×7 ಪಡೆದುಕೊಳ್ಳಬಹುದಾಗಿದೆ. ಎರಡು ತಿಂಗಳ ಹಿಂದೆ ‘pawfriend.in’ ಎಂಬ ಕಾರ್ಯಕ್ರಮದ ಮೂಲಕ ಮುಂಬೈ ಮಹಾನಗರ ಪಾಲಿಕೆ (BMC)ಗೆ ಟೆಕ್ಕಿ ಅಕ್ಷಯ್ ರಿಡ್ಲಾನ್ ಅವರು ಟ್ಯಾಗ್‌ ತಯಾರು ಮಾಡಿಕೊಟ್ಟಿದ್ದಾರೆ ಎಂದು ಹೆಬ್ಬಾಳದ ಪಶುಸಂಗೋಪನಾ ಇಲಾಖೆಯ ಮೊಬೈಲ್ ಮತ್ತು ವಿಸ್ತರಣಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪ್ರಯಾಗ್ ಎಚ್‌ಎಸ್ ಹೇಳಿದರು.

ಕ್ಯೂಆರ್​ ಕೂಡ್​ ಮೂಲಕ ಬೀದಿನಾಯಿಗಳ ದಾಳಿಯಿಂದ ಒಳಗಾದವರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳಿಗೆ ಸಾಧ್ಯವಾಗುತ್ತದೆ. ಅಲ್ಲದೆ ಪ್ರಾಣಿಗಳ ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಫೀಡರ್ ವಿವರಗಳ ಬಗ್ಗೆ ನಮಗೆ ಪ್ರಮುಖ ಮಾಹಿತಿಯನ್ನು ನೀಡುತ್ತದೆ. ಇವೆಲ್ಲವನ್ನೂ ಸುರಕ್ಷಿತವಾದ ಡೇಟಾಬೇಸ್‌ನಲ್ಲಿ ಸಂರಕ್ಷಿಸಲಾಗುವುದು. ಪ್ರಸ್ತುತ, ಪಶುವೈದ್ಯರು ಯೋಜನೆಗೆ ಪ್ರಾಣಿ ಪ್ರಿಯರಿಂದ ಹಣ ಸಂಗ್ರಹಿಸಿದ್ದಾರೆ. ಇದರ ಫಲಿತಾಂಶದ ಆಧಾರದ ಮೇಲೆ ನಗರದಾದ್ಯಂತ ಅಭಿಯಾನ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:10 pm, Sun, 24 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್