ಹಾಲು ಉತ್ಪಾದಕರ ಸಂಘ: ಶಾಸಕ ಭೀಮಾ ನಾಯ್ಕ್‌ ಸದಸ್ಯತ್ವ ರದ್ದು.. ಕಾರಣವೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Dec 24, 2020 | 11:09 AM

ಭೀಮಾ ನಾಯ್ಕ್ ಖಾಯಂ ನಿವಾಸಿಯಲ್ಲವೆಂಬುದು ದೃಢವಾಗಿದೆ. ಹೀಗಾಗಿ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಆದೇಶ ಹೊರಡಿಸಿದ್ದಾರೆ.

ಹಾಲು ಉತ್ಪಾದಕರ ಸಂಘ: ಶಾಸಕ ಭೀಮಾ ನಾಯ್ಕ್‌ ಸದಸ್ಯತ್ವ ರದ್ದು.. ಕಾರಣವೇನು ಗೊತ್ತಾ?
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್‌
Follow us on

ಬಳ್ಳಾರಿ: ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್‌ ಅವರ ಹಾಲು ಉತ್ಪಾದಕರ ಸಂಘದ ಸದಸ್ಯತ್ವ ರದ್ದಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಶಾಸಕ ಭೀಮಾ ನಾಯ್ಕ್ ಸದಸ್ಯರಾಗಿದ್ದರು. ಆದರೆ ಈಗ ಅವರ ಸದಸ್ಯತ್ವ ರದ್ದಾಗಿದೆ.

ಸದಸ್ಯರಾಗಲು ಅಡವಿ ಆನಂದದೇವನಹಳ್ಳಿ ನಿವಾಸಿಯಾಗಿರಬೇಕು. ಆದ್ರೆ ಭೀಮಾ ನಾಯ್ಕ್ ಖಾಯಂ ನಿವಾಸಿಯಲ್ಲವೆಂಬುದು ದೃಢವಾಗಿದೆ. ಹೀಗಾಗಿ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಆದೇಶ ಹೊರಡಿಸಿದ್ದಾರೆ. ಸದ್ಯ ಭೀಮಾ ನಾಯ್ಕ್ ಈಗ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ.

ಕೆಎಂಎಫ್​ ಗೆ ಇನ್ನು ಬಾಲಚಂದ್ರ ಸಾರಥ್ಯ! ಮುಗಿದ ರೇವಣ್ಣ ಅಧ್ಯಾಯ