ರೈತರ ಪ್ರತಿಭಟನೆ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಬಿಡದಿಯ ಬೈರಮಂಗಲದಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ, ಒಬ್ಬ ರೈತ ಮಹಿಳೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಭಾವನಾತ್ಮಕವಾಗಿ ಮನವಿ ಮಾಡಿದರು. 2006ರ ಭೂಸ್ವಾಧೀನ ನೀತಿಯಿಂದಾದ ತೊಂದರೆಗಳು ಮತ್ತು ರಾಜಕೀಯ ನಾಯಕರ ನಿರ್ಲಕ್ಷ್ಯವನ್ನು ಎತ್ತಿಹಿಡಿದರು. "ನಮ್ಮನ್ನು ಉಳಿಸಲು ನೀವೇ ನಮ್ಮ ಕೊನೆಯ ಭರವಸೆ" ಎಂದು ಸೆರಗೊಡ್ಡಿ ಬೇಡಿಕೊಂಡರು.
ರಾಮನಗರ, ಜನವರಿ 25: ಜಿಬಿಐಟಿ ಯೋಜನೆ ವಿರುದ್ಧ ಸ್ಥಳೀಯ ರೈತರಿಂದ ಬಿಡದಿಯ ಬೈರಮಂಗಲದಲ್ಲಿ ನಡೆಯುತ್ತಿರುವ ಬೃಹತ್ ಹೋರಾಟದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮುಂದೆ ರೈತ ಮಹಿಳೆಯೋರ್ವರು ಭಾವನಾತ್ಮಕವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 2006ರ ಭೂಸ್ವಾಧೀನ ನೀತಿಯಿಂದಾದ ಪರಿಣಾಮಗಳು ಮತ್ತು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಲ್ಲೇಖಿಸುತ್ತ, ರಾಜಕೀಯ ನಾಯಕರು ರೈತರ 322 ದಿನಗಳ ಧರಣಿಯ ಬಗ್ಗೆ ಬೆಳಗಾವಿ ಸದನದಲ್ಲಿ ಚರ್ಚಿಸದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ವಿನ್ನರ್‌ಗಳಿಗೆ ಸಿಗುವ ಗೌರವ, ರೈತರಿಗೆ ಸಿಗುತ್ತಿಲ್ಲ. ನಮ್ಮನ್ನು ಉಳಿಸಲು ನೀವೇ ನಮ್ಮ ಕೊನೆಯ ಭರವಸೆ. ದಯವಿಟ್ಟು ನಮ್ಮನ್ನು ಉಳಿಸಿ ಅಣ್ಣ ಎಂದು ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಅವರು ಮನವಿ ಮಾಡಿದ ಪ್ರಸಂಗ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
