AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದ್ಮ ಪ್ರಶಸ್ತಿ ಪ್ರಕಟ: ರಾಜ್ಯದ ಶತಾವಧಾನಿ ಆರ್​​. ಗಣೇಶ್​​ಗೆ​​ ಪದ್ಮ ಭೂಷಣ, 7 ಮಂದಿಗೆ ಪದ್ಮಶ್ರೀ ಅವಾರ್ಡ್​​

2026ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಪೈಕಿ ಕರ್ನಾಟಕದ ಶತಾವಧಾನಿ ಆರ್​​. ಗಣೇಶ್​​ಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಉಳಿದಂತೆ 7 ಮಂದಿ ಪದ್ಮಶ್ರೀಗೆ ಭಾಜನರಾಗಿದ್ದಾರೆ.

ಪದ್ಮ ಪ್ರಶಸ್ತಿ ಪ್ರಕಟ: ರಾಜ್ಯದ ಶತಾವಧಾನಿ ಆರ್​​. ಗಣೇಶ್​​ಗೆ​​ ಪದ್ಮ ಭೂಷಣ, 7 ಮಂದಿಗೆ ಪದ್ಮಶ್ರೀ ಅವಾರ್ಡ್​​
ಪ್ರಶಸ್ತಿ ಪುರಸ್ಕೃತರು
ಪ್ರಸನ್ನ ಹೆಗಡೆ
|

Updated on:Jan 25, 2026 | 7:10 PM

Share

ನವದೆಹಲಿ, ಜನವರಿ 25: ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಇಂಜಿನಿಯರಿಂಗ್, ವ್ಯಾಪಾರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರದಿಂದ ನೀಡಲ್ಪಡುವ ಪದ್ಮ ಪ್ರಶಸ್ತಿಗಳ 2026ನೇ ಸಾಲಿನ ಪಟ್ಟಿ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಕರ್ನಾಟಕದ ಶತಾವಧಾನಿ ಆರ್​​. ಗಣೇಶ್​​ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು

ಹೆಸರು ಕ್ಷೇತ್ರ ರಾಜ್ಯ
ಧರ್ಮೇಂದ್ರ ಸಿಂಗ್​​ ಕಲೆ ಮಹಾರಾಷ್ಟ್ರ
ಕೆ.ಟಿ. ಧಾಮಸ್​​ ಸಾರ್ವಜನಿಕ ಆಡಳಿತ ಕೇರಳ
ಎನ್​​, ರಾಜಮ್ ಕಲೆ ಉತ್ತರ ಪ್ರದೇಶ
ಪಿ. ನಾರಾಯಣನ್ ಸಾಹಿತ್ಯ ಮತ್ತು ಶಿಕ್ಷಣ ಕೇರಳ
ವಿ.ಎಸ್​​. ಅಚ್ಯುತಾನಂದನ್​​ ಸಾರ್ವಜನಿಕ ಆಡಳಿತ ಕೇರಳ

ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು

ಹೆಸರು ಕ್ಷೇತ್ರ ರಾಜ್ಯ
ಅಲ್ಕಾ ಯಗ್ನಿಕ್​​ ಕಲೆ ಮಹಾರಾಷ್ಟ್ರ
ಭಗತ್​​ ಸಿಂಗ್​​ ಕೋಶ್ಯಾರಿ ಸಾರ್ವಜನಿಕ ಆಡಳಿತ ಉತ್ತರಾಖಂಡ
ಕಲ್ಲಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ ವೈದ್ಯಕೀಯ ತಮಿಳುನಾಡು
ಮಮ್ಮುಟ್ಟಿ ಕಲೆ ಕೇರಳ
ಡಾ. ದತ್ತಾತ್ರೇಯುಡು ನೋರಿ ವೈದ್ಯಕೀಯ ಅಮೆರಿಕಾ
ಪಿಯೂಷ್​​ ಪಾಂಡೆ ಕಲೆ ಮಹಾರಾಷ್ಟ್ರ
ಎಸ್‌ಕೆಎಂ ಮೈಲಾನಂದನ್ ಸಾಮಾಜಿಕ ಸೇವೆ ತಮಿಳುನಾಡು
ಶತಾವಧಾನಿ ಆರ್​. ಗಣೇಶ್​ ಕಲೆ ಕರ್ನಾಟಕ
ಶಿಬು ಸೊರೆನ್ ಸಾರ್ವಜನಿಕ ಆಡಳಿತ ಜಾರ್ಖಂಡ್​​
ಉದಯ್ ಕೋಟಕ್ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
ವಿ.ಕೆ. ಮಲ್ಹೋತ್ರಾ ಸಾರ್ವಜನಿಕ ಆಡಳಿತ ದೆಹಲಿ
ವೆಳ್ಳಾಪ್ಪಳ್ಳಿ ನಟೇಶನ್ ಸಾರ್ವಜನಿಕ ಆಡಳಿತ ಕೇರಳ
ವಿಜಯ್​​ ಅಮೃತ್​​ರಾಜ್​​ ಕ್ರೀಡೆ ಅಮೆರಿಕಾ

ರಾಜ್ಯದ ಪದ್ಮಶ್ರೀ ಪುರಸ್ಕೃತರು

ಹೆಸರು ಕ್ಷೇತ್ರ
ಅಂಕೇಗೌಡ ಎಂ. ಸಾಮಾಜಿಕ ಸೇವೆ
ಎಸ್​​.ಜಿ. ಸುಶೀಲಮ್ಮ ಸಾಮಾಜಿಕ ಸೇವೆ
ಶಶಿಶೇಖರ್​​ ವೆಂಪತಿ ಸಾಹಿತ್ಯ ಮತ್ತು ಶಿಕ್ಷಣ
ಶುಭಾ ವೇಂಕಟೇಶ್​​ ಐಯ್ಯಂಗಾರ್​ ವಿಜ್ಞಾನ ಮತ್ತು ಎಂಜಿನಿಯರಿಂಗ್
ಡಾ.ಸುರೇಶ್ ಹನಗವಾಡಿ ವೈದ್ಯಕೀಯ
ಟಿ.ಟಿ. ಜಗನ್ನಾಥನ್​​ ವ್ಯಾಪಾರ ಮತ್ತು ಕೈಗಾರಿಕೆ
ಪ್ರಭಾಕರ್​​ ಕೋರೆ ಸಾಹಿತ್ಯ ಮತ್ತು ಶಿಕ್ಷಣ

ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ಮೋದಿ ಅಭಿನಂದನೆ

ನಮ್ಮ ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಎಲ್ಲಾ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಹಾರ್ದಿಕ ಅಭಿನಂದನೆಗಳು. ವಿವಿಧ ಕ್ಷೇತ್ರಗಳಲ್ಲಿ ಅವರ ಪ್ರತಿಭೆ, ನಿಷ್ಠೆ ಮತ್ತು ಸೇವೆ ನಮ್ಮ ಸಮಾಜದ ನೆಲೆಯನ್ನು ಸಮೃದ್ಧಗೊಳಿಸುತ್ತಿದೆ. ಈ ಗೌರವವು ಮುಂದಿನ ತಲೆಮಾರಿಗೆ ಪ್ರೇರಣೆಯಾಗುವ ಬದ್ಧತೆ ಮತ್ತು ಉತ್ತಮತೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್​​ ಪೋಸ್ಟ್​​ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:20 pm, Sun, 25 January 26