ಬೀದರ್​: ನೀರಿಲ್ಲದ ತಾಲೂಕಿನಲ್ಲಿ 75 ರೈತ ಕುಟುಂಬ 100 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ; ವರ್ಷಕ್ಕೆ ಎಕರೆಗೆ 5 ರಿಂದ 8 ಲಕ್ಷ ರೂಪಾಯಿ ಆದಾಯ

|

Updated on: Jun 04, 2023 | 7:04 AM

ರೇಷ್ಮೆ ಕೃಷಿ ಎಂದರೆ ಅದು ದಕ್ಷಿಣದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂಬ ಕಾಲವೊಂದಿತ್ತು. ಆದರೆ, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಭಂಡಾರಕುಮಟಾ ಗ್ರಾಮದ ಹಲವು ಕೃಷಿಕರು ರೇಷ್ಮೆ ಕೃಷಿ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ರೇಷ್ಮೆ ಕೃಷಿಯಿಂದ ಉತ್ತಮ ಆದಾಯ ಗಳಿಸಿ ಸುಂದರ ಜೀವನ ಸಾಗಿಸುತ್ತಿದ್ದಾರೆ.

ಬೀದರ್​: ನೀರಿಲ್ಲದ ತಾಲೂಕಿನಲ್ಲಿ 75 ರೈತ ಕುಟುಂಬ 100 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ; ವರ್ಷಕ್ಕೆ ಎಕರೆಗೆ 5 ರಿಂದ 8 ಲಕ್ಷ ರೂಪಾಯಿ ಆದಾಯ
ರೇಷ್ಮೆ ಕೃಷಿ ಮಾಡಿದ ರೈತ
Follow us on

ಬೀದರ್​: ಬರದ ತಾಲೂಕು ಬಿಸಿಲನಗರಿ ಗಡಿ ಗ್ರಾಮಸ್ಥರ ಕೈ ಹಿಡಿದ ರೇಷ್ಮೆ ಕೃಷಿ(Silk Farming). ನೀರಿಲ್ಲದ ತಾಲೂಕಿನಲ್ಲಿ 75 ರೈತ ಕುಟುಂಬ 100 ಎಕರೆಗಳಷ್ಟು ಪ್ರದೇಶದಲ್ಲಿ ರೇಷ್ಮೆ ಕೃಷಿಯಲ್ಲಿ ಕ್ರಾಂತಿ ಮಾಡಿದ ರೈತರು. ಹೌದು ಸಾಂಪ್ರದಾಯಿಕ ಕೃಷಿಯಿಂದ ಸದಾ ನಷ್ಟ ಅನುಭವಿಸುತ್ತಿರುವ ಬೀದರ್ (Bidar) ಜಿಲ್ಲೆಯ ಗಡಿ ಗ್ರಾಮಸ್ಥರಿಗೆ ರೇಷ್ಮೆ ಕೃಷಿ ನೆರೆವಿಗೆ ಬಂದಿದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಔರಾದ್ ತಾಲೂಕಿನ ಭಂಡಾರಕುಮಟಾದ ಹಲವು ರೈತ ಕುಟುಂಬಗಳು ರೇಷ್ಮೆ ಕೃಷಿಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ಒಂದೆ ಊರಲ್ಲಿ ಕೊಟ್ಯಾಂತರ ರೂಪಾಯಿ ಮೌಲ್ಯದ ರೇಷ್ಮೆ ಉತ್ಪಾಧಿಸಿ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾರೆ.

ಆರಂಭದಲ್ಲಿ ಈ ಗ್ರಾಮದಲ್ಲಿ ಇಬ್ಬರು ಮಾತ್ರ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡರು. ಆರಂಭದಲ್ಲಿ ಅವರಿಗೆ ಲಾಭವಾಗಲಿಲ್ಲ. ಆದರೂ ಪಟ್ಟು ಬಿಡದೆ ರೇಷ್ಮೆ ಕೃಷಿಯನ್ನ ಮುಂದುವರೆಸಿದರು. ಬಳಿಕ ರೇಷ್ಮೆ ಕೃಷಿಯಿಂದ ಲಾಭ ಬರತೊಡಗಿತ್ತು, ಈಗ ಇಬ್ಬರಿಂದ ಆರಂಭವಾದ ರೇಷ್ಮೆ ಕೃಷಿ ಈಗ ಊರಲ್ಲಿ 75 ಕ್ಕೂ ಹೆಚ್ಚು ರೈತರು ನೂರು ಎಕರೆಯಷ್ಟು ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಒಬ್ಬ ರೈತ ವರ್ಷಕ್ಕೆ ಎಕರೆಗೆ 5 ರಿಂದ 8 ಲಕ್ಷ ರೂಪಾಯಿ ಆದಾಯ ಘಳಿಸುತ್ತಿದ್ದಾರೆಂದು ರೈತ ಜಾಕೀರ್ ಪಟೇಲ್ ಹೇಳುತ್ತಿದ್ದಾರೆ.

ಇದನ್ನೂ ಓದಿ:ಮೆಣಸಿನಕಾಯಿ ಕೃಷಿಯಲ್ಲಿ 8 ಲಕ್ಷ ರೂ. ಗಳಿಸಿದ ಬೆಳಗಾವಿಯ ವಾಣಿಜ್ಯ ಪದವೀಧರ ಯುವತಿ ನಿಖಿತಾ

90ರ ದಶಕದ ಮೊದಲು ಈ ಗ್ರಾಮದ ರೈತರು ಬಹಳ ಕಷ್ಟದಲ್ಲಿದ್ದರು. ಹತ್ತಾರು ಬೆಳೆಗಳನ್ನ ಬೆಳೆದರೂ ಕೂಡ ಲಾಭ ಬರುತ್ತಿರಲಿಲ್ಲ. ಆದರೆ, ಈಗ ರೇಷ್ಮೆ ಬೆಳೆಯ ಕಡೆಗೆ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರಿಂದ ರೇಷ್ಮೇ ಕೃಷಿಯಿಂದ ಈ ಗ್ರಾಮದ ರೈತರು ಲಾಭದಲ್ಲಿದ್ದಾರೆ. ಇನ್ನೂ ಇವರು ಸಿಎಸ್​ಆರ್ ತಳಿಯ ರೇಷ್ಮೆಯನ್ನ ಬೆಳೆಸುತ್ತಿದ್ದಾರೆ. ಇದು ಮಾರುಕಟ್ಟೆಯಲ್ಲಿ ಕೆಜಿಗೆ 1 ಸಾವಿರ ರೂಪಾಯಿ ಇದೆ. ಹೀಗಾಗಿ ನಾವು ರೇಷ್ಮೆ ಬೆಳೆಯುತ್ತಾ ಬಂದಾಗಿನಿಂದಲೂ ನಮಗೆ ಹಣದ ತೊಂದರೆಯಾಗಿಲ್ಲ. ಇದರ ಮೇಲೆ ಮನೆ ಕಟ್ಟಿಕೊಂಡಿದ್ದೇವೆ, ಮಕ್ಕಳಿಗೆ ಉತ್ತಮ ಗುಣಮಟ್ಟದ ಹೈಟೇಕ್ ಶಾಲೆಯಲ್ಲಿ ಶಿಕ್ಷಣ ಕೊಡಿಸಿದ್ದೇವೆ ಎನುತ್ತಿದ್ದಾರೆ ಗ್ರಾಮದ ರೈತರು.

ರೇಷ್ಮೆ ಉತ್ಪನ್ನ ಸಾಗಾಟದ ಸಮಸ್ಯೆ ಬಿಟ್ಟರೆ ಬೇರೆ ಯಾವುದೆ ತೊಂದರೆಯಿಲ್ಲ. ಇನ್ನೂ ಎಲ್ಲಾ ರೈತರು ಒಗ್ಗಟ್ಟಾಗಿ ತಾವು ತೆಗೆದ ರೇಷ್ಮೆಯನ್ನ ಒಂದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದ್ದರಿಂದಾಗಿ ಈಗ ಸಾಗಾಟದ ಸಮಸ್ಯೆಯೂ ಕೂಡ ಅಷ್ಟೇನು ಇಲ್ಲಾ ಎನುತ್ತಾರೆ ರೈತರು. ಹಿಪ್ಪೆ ನೇರಳೆ ಬೆಳೆಯಲು ಚಾಕಿ ಕೇಂದ್ರ ಹಾಗೂ ಗೂಡು ಕಟ್ಟಡ ನಿರ್ಮಿಸಲು ಸರಕಾರದ ಸಹಾಯಧನ ಸಿಗುತ್ತದೆ. ಹೀಗಾಗಿ ನಾವು ಸ್ವಲ್ಪವೇ ಕಷ್ಟ ಪಟ್ಟರೇ ಸಾಕು ವರ್ಷದ 12 ತಿಂಗಳು ರೇಷ್ಮೆ ಗೂಡು ಉತ್ಪಾಧಿಸಿ ಹಣ ಮಾಡಿಕೊಳ್ಳಬಹುದೆನ್ನುತ್ತಾರೆ ರೇಷ್ಮೆ ಕೃಷಿಕರು. ಒಟ್ಟಿನಲ್ಲಿ ಬರದ ತಾಲೂಕು ಬಂಡಾರ ಕುಮಟಾ ಗ್ರಾಮದ ರೈತರು ರೇಷ್ಮೇ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳಬೇಕು. ರೇಷ್ಮೇ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸೋ ಬೆಳೆ ಬೆಳೆಯಲು ಎಲ್ಲ ರೈತರು ಯಶಸ್ಸು ಆಗಬೇಕು.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ