ಮೆಣಸಿನಕಾಯಿ ಕೃಷಿಯಲ್ಲಿ 8 ಲಕ್ಷ ರೂ. ಗಳಿಸಿದ ಬೆಳಗಾವಿಯ ವಾಣಿಜ್ಯ ಪದವೀಧರ ಯುವತಿ ನಿಖಿತಾ

ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬುದು ಕಡೆಯಾದರೆ, ತಂದೆಯನ್ನು ಕಳೆದುಕೊಂಡು ದಿಕ್ಕಿಲ್ಲದಂತಾಗಿ, ಜೀವನಕ್ಕೆ ಮುಂದೆ ಏನು ಎಂದಾಗ ತನ್ನ ಕನಸುಗಳನ್ನು ಬದಿಗಿಟ್ಟು, ಕೃಷಿಯತ್ತ ಮುಖ ಮಾಡಿ ನಿಂತ ಹುಡುಗಿಯ ಸಾಧನೆಯ ಸ್ಟೋರಿ ಇದು.

ಮೆಣಸಿನಕಾಯಿ ಕೃಷಿಯಲ್ಲಿ 8 ಲಕ್ಷ ರೂ. ಗಳಿಸಿದ ಬೆಳಗಾವಿಯ ವಾಣಿಜ್ಯ ಪದವೀಧರ ಯುವತಿ ನಿಖಿತಾ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 30, 2023 | 11:52 AM

ಬೆಳಗಾವಿ: ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದು ಯುವತಿ ಅನಿರೀಕ್ಷಿತವಾಗಿ ಕೃಷಿ ಕ್ಷೇತ್ರಕ್ಕೆ ಪ್ರವೇಶ ಮಾಡಿ, ಈಗ ಈ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದ್ದಾರೆ. ವಾಣಿಜ್ಯ ಪದವೀಧವನ್ನು ಮುಗಿಸಿದ ಈ ಯುವತಿ, ಕೃಷಿಯಲ್ಲಿ ಅಪ್ರತಿಮ ಯಶಸ್ಸನ್ನು ಸಾಧಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ಕೇವಲ ಎರಡೇ ತಿಂಗಳಲ್ಲಿ 8 ಲಕ್ಷ ರೂ.ಗಳನ್ನು ಗಳಿಸಿರುವ ಅವರು, ಇತರ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ತಮ್ಮ ಭೂಮಿಯಲ್ಲೇ 2 ತಿಂಗಳಿಗೆ 8 ಲಕ್ಷ ರೂ. ಗಳಿಸಬಹುದು ಎಂದು ತಿಳಿಸಿಕೊಟ್ಟಿದ್ದಾರೆ. ಬೆಳಗಾವಿ ನಗರದಿಂದ 8 ಕಿಲೋಮೀಟರ್ ದೂರದಲ್ಲಿರುವ ಕೃಷಿ ಪ್ರಧಾನ ಗ್ರಾಮವಾದ ಜಾಫರ್ವಾಡಿಯ ಯುವತಿ ಈ ಸಾಧನೆಯನ್ನು ಮಾಡಿದ್ದಾರೆ.

ನಿಖಿತಾ ವಿ ಪಾಟೀಲ್ ಬಿಕಾಂನಲ್ಲಿ ಡಿಸ್ಟಿಂಕ್ಷನ್ ಪಡೆದು ಸಿಎ ಕೋರ್ಸ್‌ಗೆ ತಯಾರಿ ನಡೆಸುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಆಕೆಯ ತಂದೆ ವೈಜು ಪಾಟೀಲ್ ಕಳೆದ ವರ್ಷ ನಿಧನರಾದರು. ಆಕೆಯ ತಾಯಿ ಅಂಜನಾ ಮತ್ತು ಅಣ್ಣ ಅಭಿಷೇಕ್ ಅವರ ಜವಾಬ್ದಾರಿಯು 26 ವರ್ಷದ ನಿಖಿತಾ ಅವರ ಮೇಲೆ ಇರುವ ಕಾರಣ ದುಡಿಯುವ ಮುಂದುವರಿಯಬೇಕಾದ ಅಗತ್ಯ ಇತ್ತು. ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವ ಕನಸನ್ನು ಬಿಟ್ಟು ನಿಖಿತಾ ತನ್ನ ಕುಟುಂಬದ ಒಡೆತನದ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದರು. ತನ್ನ ಚಿಕ್ಕಪ್ಪ ತಾನಾಜಿ ಪಾಟೀಲ್ ಮತ್ತು ಗ್ರಾಮದ ಇತರ ಅನುಭವಿ ರೈತರ ಸಹಾಯದಿಂದ ಯಾವ ಬೆಳೆಗಳನ್ನು ಬೆಳೆದರೆ ಒಳ್ಳೆಯದು, ಮಾರುಕಟ್ಟೆ ಲಾಭ ಮತ್ತು ಇತರ ವಿಷಯಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದರು.

ಕಬ್ಬು, ಗೋಧಿ, ಜೋಳ, ಅಕ್ಕಿ ಮತ್ತು ಇತರ ದೀರ್ಘಾವಧಿಯ ಬೆಳೆಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿವೆ ಎಂದು ಅವರು ಅರಿತುಕೊಂಡು. ತಮ್ಮ ಗದ್ದೆಯಲ್ಲಿ ಎರಡು ತೆರೆದ ಬಾವಿ ಹಾಗೂ ಒಂದು ಬೋರ್ ವೆಲ್ ಇರುವ ಕಾರಣ ಕೊನೆಗೆ ಹನಿ ನೀರಾವರಿ ಮೂಲಕ ಮೆಣಸಿನಕಾಯಿ ಬೆಳೆಯಲು ನಿರ್ಧರಿಸಿದರು.

ಇದನ್ನೂ ಓದಿ:ಕೃಷಿ ಮತ್ತು ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ರಾಯಚೂರು ದೇಶದಲ್ಲಿ ಮೊದಲ ಸ್ಥಾನ

ಬೆಳಗಾವಿ ತಾಲೂಕಿನಲ್ಲಿ ಹೆಚ್ಚಿನ ರೈತರು ತರಕಾರಿಗಳಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. 2-3 ತಿಂಗಳೊಳಗೆ ಬೆಳೆಗಳು ಇಳುವರಿಯಾಗಿ, ಒಳ್ಳೆಯ ಹಣ ಕೂಡ ಬರುತ್ತದೆ ಮತ್ತು ಇದರಲ್ಲಿ ಅಪಾಯವು ಕಡಿಮೆಯಾಗಿರುತ್ತದೆ. ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇರುವುದರಿಂದ ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಬೆಳಗಾವಿ ತರಕಾರಿಗಳಿಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ ಮತ್ತು ಗುಜರಾತ್ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆ ಇದೆ.

ಬೇಸಾಯಕ್ಕೆ ಮುಂದಾಗುವ ಮುನ್ನ ನಿಖಿತಾ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಸೇರಿದಂತೆ ಉತ್ತಮ ತಳಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಕೂಲಂಕಷ ಅಧ್ಯಯನದ ನಂತರ, ಅವರು ನೇವಲ್ ತಳಿಯ ಮೆಣಸಿನಕಾಯಿಯನ್ನು ಆಯ್ಕೆ ಮಾಡಿಕೊಂಡು ಬೆಳೆಯುತ್ತಿದ್ದಾರೆ, ಇದು ಮಣ್ಣು ಮತ್ತು ಹವಾಮಾನಕ್ಕೆ ಸೂಕ್ತವಾಗಿದೆ. ಇದ್ದ ನಾಲ್ಕು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ಮೆಣಸಿನಕಾಯಿ ಕೃಷಿಯನ್ನು ಮಾಡುತ್ತಿದ್ದಾರೆ. ಇದನ್ನು ಮೂರು ಭಾಗಗಳಾಗಿ ವಿಂಗಡಿಸಿ ಮೂರು ಹಂತಗಳಲ್ಲಿ ಮೆಣಸಿನಕಾಯಿ ನಾಟಿ ಮಾಡಿದ್ದಾರೆ.

ಮೆಣಸಿನಕಾಯಿ ನಾಟಿ ಮಾಡಿದ 2 ತಿಂಗಳೊಳಗೆ ಇಳುವರಿ ನೀಡಲು ಪ್ರಾರಂಭಿಸುತ್ತದೆ. ಬೆಳೆ ವೈವಿಧ್ಯವನ್ನು ಅವಲಂಬಿಸಿ 5-6 ತಿಂಗಳುಗಳವರೆಗೆ ಇರುತ್ತದೆ. 4-5 ಹಸಿರು ಮೆಣಸಿನಕಾಯಿ ಮತ್ತು 2-3 ಕೆಂಪು ಮಾಗಿದ ಮೆಣಸಿನಕಾಯಿಯನ್ನು ತೆಗೆಯಲಾಗುತ್ತದೆ. ಹಾಗಾಗಿ ಒಂದು ಕೀಳುವಲ್ಲಿ 4 ರಿಂದ 4.5 ಟನ್ ಮೆಣಸಿನಕಾಯಿಯನ್ನು ಹೊಲದಿಂದ ಕೊಯ್ಲು ಮಾಡಲಾಗುತ್ತದೆ.

ಪ್ರತಿ ಕೆಜಿ ಮೆಣಸಿನಕಾಯಿ ಬೆಲೆ 50 ರೂ., ರೈತನ ಕುಟುಂಬಕ್ಕೆ 2-2.3 ಲಕ್ಷ ರೂ. 50 ದಿನಗಳಲ್ಲಿ ಒಂದು ಎಕರೆಯಲ್ಲಿ 8 ಲಕ್ಷ ರೂ. ತಮ್ಮ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬೇರೆಡೆಗಿಂತ ಹೆಚ್ಚು ಸಂಬಳ ನೀಡಲಾಗುತ್ತದೆ. ನಿಖಿತಾ ಅವರ ಹೊಲದಲ್ಲಿ 10-15 ಮಹಿಳೆಯರು ಕೂಲಿ ಕೆಲಸ ಮಾಡುತ್ತಾರೆ. ಕೃಷಿ ಕುಟುಂಬದಿಂದ ಬಂದಿದ್ದರಿಂದ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎನ್ನುತ್ತಾರೆ ನಿಖಿತಾ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ