ಕರ್ನಾಟಕದ ಜನತೆಗೆ ಅದರಲ್ಲೂ ರಾಯಚೂರು ಜಿಲ್ಲೆಗೆ ಇದು ಶುಭಸುದ್ದಿಯಾಗಿದೆ. ಕೃಷಿ ಮತ್ತು ಜಲ ಸಂಪನ್ಮೂಲ ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆ ಇಡೀ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ.
May 26, 2023 | 11:24 AM
ಕರ್ನಾಟಕದ ಜನತೆಗೆ ಅದರಲ್ಲೂ ರಾಯಚೂರು ಜಿಲ್ಲೆಗೆ ಇದು ಶುಭಸುದ್ದಿಯಾಗಿದೆ. ಕೃಷಿ ಮತ್ತು ಜಲ ಸಂಪನ್ಮೂಲ ಅಭಿವೃದ್ಧಿ ವಿಷಯದಲ್ಲಿ ರಾಯಚೂರು ಜಿಲ್ಲೆ ಇಡೀ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ.
1 / 5
2023 ಮಾರ್ಚ್ ತಿಂಗಳ ಕಾರ್ಯವೈಖರಿ ಆಧಾರದ ಮೇಲೆ ಮಹಾತ್ಮಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮದಡಿ ನೀತಿ ಆಯೋಗವು ನೀಡುವ ರ್ಯಾಂಕ್ ಇದಾಗಿದೆ. ಅದರಂತೆ ದೇಶದ 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರು ಮೊದಲ ಸ್ಥಾನ ಪಡೆದುಕೊಂಡಿದೆ.
2 / 5
ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ರಾಯಚೂರು ಹೆಚ್ಚವರಿ 3 ಕೋಟಿ ರೂಪಾಯಿ ಅನುದಾನ ಪಡೆಯಲು ಅರ್ಹತೆ ಪಡೆದುಕೊಂಡಿದೆ.
3 / 5
ಕಾರ್ಯಕ್ಷಮತೆ ಮೇರೆಗೆ ಹೆಚ್ಚುವರಿ ಅನುದಾನ ನೀಡುವ ಯೋಜನೆ ಇದಾಗಿದೆ. ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ವಿ.ರಾಧಾ ಅವರು ರಾಜ್ಯದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪ್ರಮಾಣಪತ್ರ ವಿತರಿಸಿದ್ದಾರೆ.
4 / 5
ಇದೇ ವೇಳೆ ನೀತಿ ಆಯೋಗವು ರಾಯಚೂರು ಜಿಲ್ಲಾಧಿಕಾರಿ ಹಾಗೂ ಕೇಂದ್ರ ಪ್ರಭಾರಿ ಅಧಿಕಾರಿಯನ್ನ ಶ್ಲಾಘಿಸಿದ್ದಾರೆ.