2000 ರೂ. ಅತ್ತೆಗಾ? ಸೊಸೆಗಾ?: ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ
ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಮನೆಯೊಡತಿ ಯಾರು ಎನ್ನುವುದನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ ಶುರುವಾಗಿದ್ದು, ಅತ್ತೆ ಸೊಸೆ ಇಬ್ಬರಿಗೂ ಸರ್ಕಾರ ಎರಡು ಸಾವಿರ ರೂಪಾಯಿ ನೀಡಬೇಕು. ಒಬ್ಬರಿಗೆ ಕೊಟ್ಟು ಇಬ್ಬರ ನಡುವೆ ಭೇದಭಾವ ಮಾಡಬಾರದು ಎನ್ನುವ ಅಭಿಪ್ರಾಯಗಳ ವ್ಯಕ್ತವಾಗಿವೆ. ಹೀಗಾಗಿ ಅತ್ತೆಗಾ? ಸೊಸೆಗಾ? ಎನ್ನುವುದೇ ಗೊಂದಲವಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ 5 ಗ್ಯಾರಂಟಿ (5 guarantees)ಯೋಜನೆಗಳ ಜಾರಿಯೇ ದೊಡ್ಡ ಸವಾಲಾಗಿದೆ. ಆದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇಬೇಕಿದೆ. ಹೀಗಾಗಿ ಐದೂ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಚಾಲೆಂಜ್ ಆಗಿ ತೆಗೆದುಕೊಂಡಿದೆ. ಈಗಾಗಲೇ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಎಲ್ಲಾ ಸಾಧಕ ಬಾಧಕಗಳನ್ನ ಚರ್ಚೆ ಮಾಡಿದ್ದಾರೆ. ನಾಳೆ ಸಚಿವರ ಜೊತೆ ಸಮಾಲೋಚನೆ ನಡೆಯಲಿದ್ದು, ನಾಡಿದ್ದು ಅಂದ್ರೆ, ಜೂನ್ 1ರಿಂದಲೇ 5 ಗ್ಯಾರಂಟಿ ಜಾರಿ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸರಳವಾಗಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಮನೆಯೊಡತಿ ಯಾರು ಎನ್ನುವುದನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮೀಗಾಗಿ ಪೈಪೋಟಿ ಶುರುವಾಗಿದ್ದು, ಅತ್ತೆ ಸೊಸೆ ಇಬ್ಬರಿಗೂ ಸರ್ಕಾರ ಎರಡು ಸಾವಿರ ರೂಪಾಯಿ ನೀಡಬೇಕು. ಒಬ್ಬರಿಗೆ ಕೊಟ್ಟು ಇಬ್ಬರ ನಡುವೆ ಭೇದಭಾವ ಮಾಡಬಾರದು ಎನ್ನುವ ಅಭಿಪ್ರಾಯಗಳ ವ್ಯಕ್ತವಾಗಿವೆ. ಹೀಗಾಗಿ ಅತ್ತೆಗಾ? ಸೊಸೆಗಾ? ಎನ್ನುವುದೇ ಗೊಂದಲವಾಗಿದೆ. ಇನ್ನು ಈ ಗೃಹಲಕ್ಷ್ಮೀಯ 2000 ರೂ ಬಗ್ಗೆ. ಜನ ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ.
ಅಧಿಕಾರಕ್ಕಾಗಿ ರಾಜಕಾರಣಿಗಳು ಜಗಳ ಆಡುತ್ತಾರೆ; ಮನೆಯೊಡತಿ ಪಟ್ಟಕ್ಕೆ ನಮ್ಮಲ್ಲಿ ಜಗಳ ಆಗುವುದಿಲ್ಲವಾ?
ಮೈಸೂರು: ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯೂ ಒಂದೂ, ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೀಗ ಮನೆಯೊಡತಿ ಯಾರೆಂಬುದನ್ನ ಗುರುತಿಸಲು ಸರ್ಕಾರಕ್ಕೆ ತೊಂದರೆ ಪರಿಣಮಿಸಿದೆ. ಅದರಂತೆ ಇದೀಗ ಮೈಸೂರಿನಲ್ಲಿ ಮಹಿಳೆಯೊಬ್ಬರು ‘ ಅಧಿಕಾರಕ್ಕಾಗಿ ರಾಜಕಾರಣಿಗಳು ಜಗಳ ಆಡುತ್ತಾರೆ; ಮನೆಯೊಡತಿ ಪಟ್ಟಕ್ಕೆ ನಮ್ಮಲ್ಲಿ ಜಗಳ ಆಗುವುದಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಇದು ಅವಿಭಕ್ತ ಕುಟುಂಬಗಳನ್ನು ವಿಭಜನೆ ಮಾಡುವ ಯೋಜನೆ. ನಮಲ್ಲಿ ಈಗ ಮನೆಯ ಒಡತಿ ಯಾರು ಅನ್ನೋ ಪೈಪೋಟಿ ಶುರುವಾಗಿದೆ ಎಂದಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯಡಿ ಮನೆಯಲ್ಲಿ ಹಿರಿಯರು ಅತ್ತೆ ಅವರಿಗೆ ಕೊಡಬೇಕು ಅಂತೀರೋ ಸೊಸೆ
ಕಲಬುರಗಿ: ಗೃಹ ಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ಎರಡು ಸಾವಿರ ನೀಡೋ ವಿಚಾರ, ಮನೆಯಲ್ಲಿ ಅತ್ತೆ ಸೊಸೆ ಇದ್ದಾಗ ಯಾರಿಗೆ ಕೊಡಬೇಕು ಅನ್ನೋ ಚರ್ಚೆ ಇದೀಗ ಪ್ರತಿ ಮನೆಗಳಲ್ಲೂ ಶುರುವಾಗಿದೆ. ಅದರಂತೆ ‘ ಅತ್ತೆ ಹಿರಿಯರು, ಹೀಗಾಗಿ ಅತ್ತೆಗೆ ಕೊಡಬೇಕೆಂದು ಸೊಸೆ ಅಂತಿದ್ದರೇ, ಇತ್ತ ಮನೆ ನಡೆಸಿಕೊಂಡು ಹೋಗೋದು ಸೊಸೆ, ಹೀಗಾಗಿ ಸೊಸೆಗೆ ಕೊಟ್ಟರೆ ಉತ್ತಮ ಅಂತಿರೋ ಅತ್ತೆ.
ಅತ್ತೆ ನಮ್ಮ ಜೊತೆ ಇಲ್ಲ, ನಮಗೆ ಗೃಹಲಕ್ಷಿ ಯೋಜನೆ ಹಣ ಸಿಗಬೇಕು
ಮಂಗಳೂರು: ಗೃಹಲಕ್ಷ್ಮೀ ಯೋಜನೆ ಕುರಿತು ವಿವಿಧ ಕುಟುಂಬದ ಅತ್ತೆ–ಸೊಸೆಯಂದಿರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅತ್ತೆ ನಮ್ಮ ಜೊತೆ ಇಲ್ಲ, ನಮಗೆ ಗೃಹಲಕ್ಷಿ ಯೋಜನೆ ಹಣ ಸಿಗಬೇಕು ಎಂದರೇ, ಕೆಲ ಕುಟುಂಬಗಳಲ್ಲಿ ಅತ್ತೆ–ಸೊಸೆಯಂದಿರ ಭಿನ್ನ ಭಿನ್ನ ಆಭಿಪ್ರಾಯ ಬಂದಿದೆ.
ಬೆಳಗಾವಿಯಲ್ಲಿ ಅತ್ತೆ ಸೊಸೆ ಮಧ್ಯೆ ಜಗಳ ತರದಿರಲಿ ಗೃಹಲಕ್ಷ್ಮೀ ಗ್ಯಾರಂಟಿ
ಬೆಳಗಾವಿ: ಕಾಂಗ್ರೆಸ್ ತಂದಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಅತ್ತೆ, ಸೊಸೆ ಇಬ್ಬರಿಗೂ ಹಣ ನೀಡಲು ಬೆಳಗಾವಿಯಲ್ಲಿ ವಾಸವಿರುವ ಬೋಗೂರು ಕುಟುಂಬದವರು ಆಗ್ರಹಿಸಿದ್ದಾರೆ. ಕೆಲಸ ಅರಸಿ ನಾವು ಬೆಳಗಾವಿ ನಗರಕ್ಕೆ ಬಂದಿದ್ದೇವೆ. ನಾವು ಬಡವರಿದ್ದು, ಅತ್ತೆ, ಸೊಸೆ ಇಬ್ಬರಿಗೂ ಗೃಹಲಕ್ಷ್ಮೀ ಯೋಜನೆಯಡಿ ಹಣ ನೀಡಬೇಕು, ಕೊಟ್ಟ ಭರವಸೆ ಎಲ್ಲವನ್ನೂ ಈಡೇರಿಸಬೇಕು ಎಂದಿದ್ದಾರೆ.