ಬೀದರ್ ಬಸವಕಲ್ಯಾಣದಲ್ಲಿ ಮಠಾಧೀಶರಿಂದ ಸಭೆ: 14 ಸ್ಥಳಗಳಲ್ಲಿ ಸಾವಿರಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ

| Updated By: sandhya thejappa

Updated on: Jun 12, 2022 | 11:15 AM

ಸಭೆಯಲ್ಲಿ 200ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗುವ ಸಾಧ್ಯತೆಯಿದ್ದು, ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪಕ್ಕಾಗಿ ಹೋರಾಟ ನಡೆಸಲು ಶ್ರೀಗಳು ತಯಾರಿ ನಡೆಸಿಕೊಳ್ಳುತ್ತಾರೆ.

ಬೀದರ್ ಬಸವಕಲ್ಯಾಣದಲ್ಲಿ ಮಠಾಧೀಶರಿಂದ ಸಭೆ: 14 ಸ್ಥಳಗಳಲ್ಲಿ ಸಾವಿರಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ
ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ಆಯೋಜಿಸಲಾಗಿದೆ
Follow us on

ಬೀದರ್: ಬಸವಕಲ್ಯಾಣದಲ್ಲಿ (Basavakalyana) ಇಂದು (ಜೂನ್ 12) ‘ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ’ ಸಭೆ ನಡೆಯುತ್ತಿರುವ ಹಿನ್ನೆಲೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಿಂದ ಶ್ರೀಗಳು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಸಭೆಯಲ್ಲಿ 200ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗುವ ಸಾಧ್ಯತೆಯಿದ್ದು, ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪಕ್ಕಾಗಿ ಹೋರಾಟ ನಡೆಸಲು ಶ್ರೀಗಳು ತಯಾರಿ ನಡೆಸಿಕೊಳ್ಳುತ್ತಾರೆ. ಸಭೆ (Meeting) ನಡೆಯುವುದರಿಂದ ತೇರು ಮೈದಾನ ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ತೇರು ಮೈದಾನದ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಮಠಾಧೀಶರ ಸಮಾವೇಶ ನಡೆಯಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಎಸ್​ಪಿ, ಎಎಸ್​ಪಿ, ಮೂವರು ಡಿವೈಎಸ್​ಪಿ, ಕೆಎಸ್ಆರ್​ಪಿ ತುಕಡಿ, ಡಿಎಆರ್ ತುಕಡಿ ಸೇರಿ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಇನ್ನು ಸಮಾವೇಶಕ್ಕೆ ಆಗಮಿಸುವವರಿಗೆ ಮೈದಾನದಲ್ಲೇ ಊಟದ ವ್ಯವಸ್ಥೆ ಇರುತ್ತದೆ.

ಹತ್ತು ಸಾವಿರ ಜನರಿಗೆ ಆಗುವಷ್ಟು ಊಟದ ವ್ಯವಸ್ಥೆ ಇದೆ. ಗೋದಿ ಹುಗ್ಗಿ, ರೊಟ್ಟಿ, ಹಿಟ್ಟಿನ ಪಲ್ಲೆ, ಅನ್ನ, ಸಾರು ಸಿದ್ಧವಾಗುತ್ತಿದೆ. ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅಡುಗೆ ತಯಾರಿಯಾಗುತ್ತಿದೆ. ಮುಂಜಾನೆಯಿಂದ ಬಾಣಸಿಗರು ಅಡುಗೆ ಮಾಡುತ್ತಿದ್ದಾರೆ. ಮಠಾಧೀಶರ ಜೊತೆ ಸಾರ್ವಜನಿಕರು ಕೂಡಾ ಬರುತ್ತಿರುವ ಹಿನ್ನೆಲೆ ಊಟದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ
ಮೈಸೂರಿನಲ್ಲಿ ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಆನೆ ಸಾವು
ಉತ್ತರ ಪ್ರದೇಶದ ಕಾನ್​ಪುರ, ಸಹರಾನ್​ಪುರಗಳಲ್ಲಿ ಬೀದಿಗಿಳಿದ ಬುಲ್​ಡೋಜರ್​ಗಳು: ಹಿಂಸಾಚಾರಕ್ಕಿಳಿದವರ ಆಸ್ತಿ ತೆರವಿಗೆ ಮುಂದಾದ ಸರ್ಕಾರ
ರಷ್ಯಾ ದಾಳಿ ಅರಂಭಿಸಿದಾಗಿನಿಂದ ಇಲ್ಲಿಯವರೆಗೆ ಕನಿಷ್ಟ 287 ಮಕ್ಕಳು ಬಲಿಯಾಗಿದ್ದಾರೆ: ಉಕ್ರೇನ್
Autobiography : ಆಧುನಿಕ ಶಕುಂತಲಾ ಕಥನ; ಆ ಪುಣ್ಯಭೂಮಿಯ ಸ್ಪರ್ಶವೂ, ಹೆಚ್ಚೇ ಹೊಳಪಿಟ್ಟ ನನ್ನ ಬಾಲ್ಯವೂ


ಇದನ್ನೂ ಓದಿ: ಉತ್ತರ ಪ್ರದೇಶದ ಕಾನ್​ಪುರ, ಸಹರಾನ್​ಪುರಗಳಲ್ಲಿ ಬೀದಿಗಿಳಿದ ಬುಲ್​ಡೋಜರ್​ಗಳು: ಹಿಂಸಾಚಾರಕ್ಕಿಳಿದವರ ಆಸ್ತಿ ತೆರವಿಗೆ ಮುಂದಾದ ಸರ್ಕಾರ

ಬೃಹತ್ ವೇದಿಕೆ ಸಜ್ಜು:
ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜಾಗಿದೆ. ಸಾವಿರಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಂಘಟಕರು ಸಮಾವೇಶಕ್ಕೆ ಬರುವವರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಿದ್ದಾರೆ  ವೇದಿಕೆ ಮೇಲೆ ಎಲ್​ಸಿಡಿ ಸ್ಕ್ರೀನ್ ಕೂಡಾ ಅಳವಡಿಕೆ ಮಾಡಿದ್ದಾರೆ.

ಪೀರ್ ಪಾಷಾ ದರ್ಗಾವೇ ಮೂಲ ಅನುಭವ ಮಂಟಪ ಅಂತ ಕೆಲ ಮಠಾಧೀಶರು ಹೇಳುತ್ತಿದ್ದಾರೆ. ಹೀಗಾಗಿ ಪೀರ್ ಪಾಷಾ ದರ್ಗಾವನ್ನು ಸರ್ಕಾರ ವಶ ಪಡಿಸಿಕೊಳ್ಳಬೇಕು ಅಂತ ಆಗ್ರಹಿಸುತ್ತಿರುವ ಸ್ವಾಮೀಜಿಗಳು, ಹೋರಾಟಕ್ಕೆ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:50 am, Sun, 12 June 22