AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ಮಠಾಧೀಶರ ಚಿಂತನ ಮಂಥನ ಸಭೆ; ಮೂರು ಪ್ರಮುಖ ನಿರ್ಣಯಗಳು ಅಂಗೀಕಾರ

ಮಠಾದೀಶರ ನಡೆ ಮೂಲ ಅನುಭವ ಮಂಟಪ ಕಡೆ ಹೋರಾಟದ ಅಂಗವಾಗಿ ಬಸವಕಲ್ಯಾಣ ಪಟ್ಟಣದಲ್ಲಿ ಮಠಾದೀಶರ ಚಿಂತನ ಮಂಥನ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನ ಅಂಗೀಕರಿಸಲಾಗಿದೆ.

ಬೀದರ್: ಮಠಾಧೀಶರ ಚಿಂತನ ಮಂಥನ ಸಭೆ; ಮೂರು ಪ್ರಮುಖ ನಿರ್ಣಯಗಳು ಅಂಗೀಕಾರ
ಮಠಾದೀಶರ ನಡೆ ಮೂಲ ಅನುಭವ ಮಂಟಪ ಕಡೆ ಹೋರಾಟ
TV9 Web
| Edited By: |

Updated on:Jun 12, 2022 | 8:14 PM

Share

ಬೀದರ: ಮಠಾದೀಶರ ನಡೆ ಮೂಲ ಅನುಭವ ಮಂಟಪ (Anubhav Mantapa) ಕಡೆ ಹೋರಾಟದ ಅಂಗವಾಗಿ ಬಸವಕಲ್ಯಾಣ (Basavkalyan) ಪಟ್ಟಣದಲ್ಲಿ ಮಠಾಧೀಶರ ಚಿಂತನ ಮಂಥನ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನ ಅಂಗೀಕರಿಸಲಾಗಿದೆ. ಡಿಸಿ ಮೂಲಕ ಪ್ರಧಾನಿ, ಸಿಎಂ ಅವರಿಗೆ ಮನವಿ ಕಳುಹಿಸಲಾಗಿದೆ. ಸ್ವಾಮೀಜಿಗಳ ನಿಯೋಗ ಪ್ರಧಾನಿಯವರನ್ನೂ ಭೇಟಿ ಮಾಡಲಿದೆ. ಅದಕ್ಕಾಗಿ ಪ್ರಧಾನಮಂತ್ರಿಗಳ ಸಮಯವನ್ನೂ ಕೇಳಲಾಗಿದೆ.ಸರ್ಕಾರಕ್ಕೆ ವಿಜಯ ದಶಮಿವರೆಗೂ ಕಾಲಾವಕಾಶ ನೀಡಿದ್ದೇವೆ. ಏನೂ ಕ್ರಮಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸಲಾಗುತ್ತದೆ ಎಂದು ಟಿವಿ9ಗೆ ತಡೋಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಇಂದು (ಜೂನ್​ 12) ರಂದು ನಡೆದ ಸಮಾವೇಶದಲ್ಲಿ ವೇದಿಕೆ ಮೇಲೆ ಐವತ್ತಕ್ಕೂ ಹೆಚ್ಚು ಮಠಾದೀಶರು  ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಅನೇಕರು ಕಾರ್ಯಕ್ರಮ ರದ್ದಾಗಿದೆ ಅಂತ ಅಪಪ್ರಚಾರ ಮಾಡಿದ್ದಾರೆ. ಸಭೆಗೆ ಅನೇಕ ಬಾರದಂತೆ ಅನೇಕ ಮಠಾದೀಶರಿಗೆ ಹೇಳಿದ್ದಾರೆ. ಈ ಹೋರಾಟ ಇಲ್ಲಿಗೆ ಮುಗಿಯುತ್ತಿಲ್ಲಾ. ಬಸವಣ್ಣನವರೇ ಮುಂದೆ ನಿಂತು ಅನುಭವ ಮಂಟಪ ಪಡೆಯುತ್ತಾರೆ. ಪ್ರಧಾನಿ ಮೋದಿ ಅವರೇ ಅನುಭವ ಮಂಟಪ ದ ಬಗ್ಗೆ ಮಾತನಾಡಿದ್ದಾರೆ. ಆದರೆ ಅನುಭವ ಮಂಟಪ, ಚಪ್ಪರವಿತ್ತು, ಗುಡಿಸಲು ಇತ್ತು ಅಂತ ಕೆಲವರು ಹೇಳಿದರು. ಆ ಮೂಲಕ ಅನುಭವ ಮಂಟಪಕ್ಕೆ ಅಪಚಾರ ಮಾಡೋ ಕೆಲಸ ಮಾಡಿದ್ದಾರೆ ನಿಮಗೆ ಆಗದೇ ಇದ್ದರು ಚಿಂತೆಯಿಲ್ಲಾ, ದೈರ್ಯ ಇದ್ದವರ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಸಭೆಯಲ್ಲಿ ಸ್ವಾಮಿಜಿಗಳು ಹೇಳಿದ್ದಾರೆ.

ಇದನ್ನು ಓದಿ: ಬೀದರ: ಪೀರ್​ ಪಾಷಾ ಮಸೀದಿಯೇ ಮೂಲ ಅನುಭವ ಮಂಟಪ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

ದಾಖಲೆ ಸಮೇತ ಅನುಭವ ಮಂಟಪದ ಬಗ್ಗೆ ಮಾತನಾಡುತ್ತಿದ್ದಾರೆ. ದಾಖಲೆ ಸುಳ್ಳು ಅನ್ನೋದಾದರೆ ಅನುಭವ ಮಂಟಪ ನೋಡಿ ಬರಲಿ. ಮೂಲ ಅನುಭವ ಮಂಟಪ ನೋಡಲು ಸರ್ಕಾರ ಕ್ರಮಕೈಗೊಳ್ಳಲಿ. ಬಸವಕಲ್ಯಾಣ ಅಂದರೆ ಮೊದಲು ನೆನಪಾಗೋದೆ ಅನುಭವ ಮಂಟಪ ಬರುತ್ತದೆ. ಆದರೆ ನೋಡಲು ಬಂದರೆ ಅನುಭವ ಮಂಟಪ ಕಾಣಿಸುತ್ತಿಲ್ಲ. ಮೂಲ ಅನುಭವ ಮಂಟಪವನ್ನೇ ನಾವು ಮರೆತು ಕೂತಿದ್ದೇವೆ. ಬಸವಣ್ಣನವರು ಎಲ್ಲಾ ಜಾತಿ ಜಾನಾಂಗಕ್ಕೆ ಸೇರಿದವರು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಬಸವಣ್ಣ ನವರು ತಮಗೆ ಮಾತ್ರ  ಎಂದು ಮೀಸವಾಗಿರಿಸಿಕೊಂಡಿದ್ದಾರೆ. ಆ ಮೂಲಕ ಬಸವಣ್ಣನವರಿಗೆ ಕಳಂಕ ತರೋ ಕೆಲಸ ಮಾಡುತ್ತಿದ್ದಾರೆ. ಕಲ್ಯಾಣ ನಾಡಿನಲ್ಲಿ ಹುಟ್ಟಿದವರು ಕಲ್ಯಾಣದ ಬಗ್ಗೆ ಚಿಂತನೆ ಮಾಡೋದು ಬಿಟ್ಟರೆ ಅಪಹಾಸ್ಯವಾಗುತ್ತದೆ. ದಾಖಲೆಗಳ ಸಮೇತ ಸಂಘಟನೆಯವರು ಅನುಭವ ಮಂಟಪ ಬಗ್ಗೆ ಮಾತನಾಡುತ್ತಿದ್ದಾರೆ. ದಾಖಲೆಗಳು ಸುಳ್ಳು ಅನ್ನೋದಾದರೆ ಮೂಲ ಅನುಭವ ಮಂಟಪ ನೋಡಿ ಬರಲಿ. ಹೊಸ ಅನುಭವ ಮಂಟಪ ಕಟ್ಟಿಸಬಹುದು. ಆದ್ರೆ ಮುಂದಿನ ಪೀಳಿಗೆಗೆ ಬಸವಣ್ಣನವರ ಅನುಭವ ಮಂಟಪ ದ ಬಗ್ಗೆ ಏನು ತೋರಿಸ್ತೀರಿ? ಮೂಲ ಅನುಭವ ಮಂಟಪ ನೋಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಶ್ರೀನಿವಾಸ ಸರಡಗಿ ರೇವಣಸಿದ್ದೇ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇದನ್ನು ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ಯೋಗ ಆಚರಣೆಗೆ ಮನವಿ; ಮೈದಾನದಲ್ಲಿ ನಿನ್ನೆ ನೆಟ್ಟಿದ್ದ ಕಂಬ ಏಕಾಏಕಿ ನೆಲಸಮ!

ಬಸವಕಲ್ಯಾಣ ದಲ್ಲಿ ಮಠಾದೀಶರ ಚಿಂತನ ಮಂಥನ ಸಭೆಯಲ್ಲಿ  ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಎಸ್ಪಿ ಡೆಕ್ಕಾ ಕಿಶೋರಬಾಬು ಮಠಾದೀಶರ ಮನವಿ ಸ್ವೀಕರಿಸಲು ಸಭೆಗೆ ಆಗಮಿಸಿದ್ದರು.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಿಂದ ಶ್ರೀಗಳು ಜಿಲ್ಲೆಗೆ ಆಗಮಿಸಿದ್ದಾರೆ. ಸಭೆಯಲ್ಲಿ 200ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಸ. ಸಭೆ ನಡೆದ ತೇರು ಮೈದಾನ ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಭೆಗೆ ಆಗಮಿಸಿದವರಿಗಾಗಿ  ಊಟದ ವ್ಯವಸ್ಥೆ ಮಾಡಲಾಗಿತ್ತು. ಗೋದಿ ಹುಗ್ಗಿ, ರೊಟ್ಟಿ, ಹಿಟ್ಟಿನ ಪಲ್ಲೆ, ಅನ್ನ, ಸಾರು ಮಾಡಿಸಲಾಗಿತ್ತು. ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅಡುಗೆ ತಯಾರಿಯಾಗಿತ್ತು. ಮಠಾಧೀಶರ ಜೊತೆ ಸಾರ್ವಜನಿಕರು ಕೂಡಾ ಬಂದ ಹಿನ್ನೆಲೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:13 pm, Sun, 12 June 22

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ