ವಾಯುವ್ಯ ಶಿಕ್ಷಕರ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಬೆಂಬಲಿಗರಿಂದ ಹಣ ಹಂಚಿಕೆ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೆಂಬಲಿಗರು
ವಿಜಯಪುರ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ ಮತ ಹಾಕುವಂತೆ ಪ್ರಕಾಶ್ ಹುಕ್ಕೇರಿ ಬೆಂಬಗಲಿಗರು ನಗರದ ಸೆಟಲೈಟ್ ಬಸ್ ನಿಲ್ದಾಣದ ಬಳಿ ಹಣ ಹಂಚುವ ವೇಳೆ ಫ್ಲೈಂಗ್ ಸ್ಕ್ವಾಡ್ ರೆಡ್ ಹ್ಯಾಂಡ್ ಆಗಿ ಹಿಡಿದುಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯಪುರ: ವಿಜಯಪುರ (Vijaypur) ವಾಯುವ್ಯ ಶಿಕ್ಷಕರ ಮತಕ್ಷೇತ್ರದ (MLC Election) ಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿಗೆ (Prakash Hukkeri) ಮತ ಹಾಕುವಂತೆ ಪ್ರಕಾಶ್ ಹುಕ್ಕೇರಿ ಬೆಂಬಗಲಿಗರು ನಗರದ ಸೆಟಲೈಟ್ ಬಸ್ ನಿಲ್ದಾಣದ ಬಳಿ ಹಣ ಹಂಚುವ ವೇಳೆ ಫ್ಲೈಂಗ್ ಸ್ಕ್ವಾಡ್ ರೆಡ್ ಹ್ಯಾಂಡ್ ಆಗಿ ಹಿಡಿದುಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಕಡೆಯಿಂದ ಹಣ ಹಂಚಿಕೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಈ ಕುರಿತು ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಹಣ ಹಂಚಿಕೆ ಬಗ್ಗೆ ನಮ್ಮ ಬಳಿ ದಾಖಲೆಗಳಿದ್ದು,ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ದೂರು ನೀಡುತ್ತೇನೆ. ಪ್ರಕರಣದ ಬಗ್ಗೆ ಪೂರ್ಣ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇರುವ ಕಾರಿನಲ್ಲಿ ಹತ್ತು ಸಾವಿರದಂತೆ ಪ್ಯಾಕೇಟ್ ನಲ್ಲಿ ಹಣವಿಟ್ಟು ಹಂಚಲಾಗುತ್ತಿತ್ತು. ಇದೊಂದೆ ವಾಹನ ಅಲ್ಲದೆ ಇನ್ನೂ ಹದಿನಾಲ್ಕು ಕಾರುಗಳು ಹೀಗೆ ಓಡಾಡುತ್ತಿವೆ. ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಇದೆಲ್ಲವನ್ನೂ ತಪಾಸಣೆ ಮಾಡಿ, ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಯಾವುದೇ ವಾಹನದಲ್ಲಿ ಹಣ ಹಂಚಲು ಬಂದರೆ ಅದರ ವಿಡಿಯೋ ಮಾಡಿ ಕಳುಹಿಸಿ. ಯಾರಾದರೂ ಹಣದ ಆಮಿಷ ಒಡ್ಡಿದರೆ ಅಂತಹವರ ವಿರುದ್ಧ ದೂರು ಕೊಡಿ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಂದಾಜು ಹದಿನೇಳು ಲಕ್ಷಕ್ಕೂ ಅಧಿಕ ಹಣ ಆ ಕಾರಿನಲ್ಲಿದೆ ಎಂದು ಅರುಣ ಶಹಾಪುರ ಆರೋಪ ಮಾಡಿದ್ದಾರೆ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಅರುಣ ಶಹಾಪುರ ಅವರಿಗೆ ಬೆಂಬಲ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:33 pm, Sun, 12 June 22