ಬೀದರ್, ಅಕ್ಟೋಬರ್ 28: ಕಾಡು ಪ್ರಾಣಿಗಳ (wild animals) ಕಾಟಕ್ಕೆ ಆ ಜಿಲ್ಲೆಯ ರೈತರು ಆತಂಕದಲ್ಲಿದ್ದಾರೆ. ಬಿತ್ತಿದ ಬೆಳೆ ರಕ್ಷಿಸಲು ಹಗಲು ರಾತ್ರಿ ಎನ್ನದೆ ಹೊಲದಲಲ್ಲಿಯೇ ವಾಸ್ಥವ್ಯ ಹೂಡುತ್ತಿದ್ದಾರೆ. ಆದರೂ ರೈತರ ಕಣ್ಣು ತಪ್ಪಿಸಿ ಹೊಲಕ್ಕೆ ನುಗ್ಗುವ ಕಾಡುಪ್ರಾಣಿಗಳು ಬೆಳೆ ತಿಂದು ನಾಶಮಾಡುತ್ತಿವೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಸರಿಗೆ ಮಾತ್ರ ಪರಿಹಾರ ಕೊಟ್ಟು ಕೈತೊಳೆದುಕೊಂಡು ಕುಳಿತು ಬಿಟ್ಟಿದ್ದಾರೆ. ಎಕರೆಗೆ ಒಂದು ಸಾವಿರ ರೂ. ಮಾತ್ರ ಪರಿಹಾರ ನೀಡಿದ್ದು, ಅದು ಹೊಲ್ಲಕ್ಕೆ, ಮನೆಗೆ ಓಡಾಡಿದ ಪೆಟ್ರೋಲ್ಗೂ ಸಾಲುವುದಿಲ್ಲ ಎಂದು ರೈತರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಯ ಪೈಕಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಎರಡನೇಯ ಜಿಲ್ಲೆ ಬೀದರ್ ಆಗಿದೆ. ಇಲ್ಲಿನ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ಜಿಂಕೆ, ಮೊಲ, ಕಾಡು ಹಂದಿ, ಮುಳ್ಳು ಹಂದಿಗಳು ಎತ್ತೆಚ್ಚವಾಗಿವೆ. ಇನ್ನೂ ಅರಣ್ಯ ಇಲಾಕೆಯ ಕಾಡಿಗೆ ಹೊಂದಿಕೊಂಡಂತೆ ರೈತರ ಸಾವಿರಾರು ಎಕರೆಯಷ್ಟು ಫಲವತ್ತಾದ ಜಮೀನಿದೆ. ಈ ಜಮೀನಿನಲ್ಲಿ ಪ್ರತಿ ವರ್ಷ ರೈತರು ಮೂರು ಋತುವಿನಲ್ಲಿಯೂ ಬೆಳೆಯನ್ನ ಬೆಳೆಯುತ್ತಾರೆ. ಆದರೆ ಇಲ್ಲಿ ಬೆಳೆದ ಬೆಳೆಗೆ ಕಾಡು ಪ್ರಾಣಿಗಳು ಕಾಟ ಜಾಸ್ತಿಯಾಗಿ ಶೇಕಡಾ 40 ರಷ್ಟು ಬೆಳೆ ಹಾನಿಯಾಗುತ್ತದೆ. ಆದರೆ ಹೀಗೆ ಕಾಡು ಪ್ರಾಣಿಗಳಿಂದ ಹಾನಿಯಾದ ಬೆಳೆಗೆ ಅರಣ್ಯ ಇಲಾಖೆಯಿಂದ ಪರಿಹಾರ ಕೊಡುತ್ತಿದ್ದಾರೆ, ಆ ಪರಿಹಾರ ಎಕರೆಗೆ ಒಂದು ಸಾವಿರ ರೂಪಾಯಿ ಮಾತ್ರ. ಅದು ಸರಿಯಾಗಿ ರೈತರಿಗೆ ಬಂದು ತಲುಪುವುದೆ ಇಲ್ಲಾ.
ಇದನ್ನೂ ಓದಿ: ಬೀದರ್: ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದ ರೈತ ಅರೆಸ್ಟ್
ವರ್ಷ ಕಾಡು ಪ್ರಾಣಿಗಳಿಂದ ಮುಂಗಾರು ಬೆಳೆ ಹಾನಿಯ ಪರಿಹಾರವನ್ನ ಅರಣ್ಯ ಇಲಾಕೆಯ ಅಧಿಕಾರಿಗಳು ಸರ್ವೆಮಾಡಿ ಎರಡೂವರೆ ಲಕ್ಷ ರೂಪಾಯಿ 178 ರೈತರಿಗೆ ಕೊಟ್ಟಿದ್ದು ಇನ್ನೂ ಹತ್ತು ಲಕ್ಷ ರೂಪಯಿ ಪರಿಹಾರ ಕೊಡುವುದು ಬಾಕಿ ಎಂದು ಅರಣ್ಯ ಇಲಾಕೆಯ ಅಧಿಕಾರಿಗಳು ಮಾಹಿತಿಕೊಟ್ಟಿದ್ದಾರೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರನ್ನ ಕೇಳಿದರೆ ಕಾಡು ಪ್ರಾಣಿಗಳಿಂದ ರೈತರ ಬೆಳೆ ಹಾನಿಯಾದರೆ ಸರಿಯಾಗಿ ಬೆಳೆ ಪರಿಹಾರ ಸಿಗುತ್ತಿಲ್ಲ ಎಂದು ನನ್ನ ಗಮನಕ್ಕೆ ಬಂದಿದೆ ಹೀಗಾಗಿ ಕಾಡು ಪ್ರಾಣಿಗಳಿಂದ ರೈತರ ಬೆಳೆ ಹಾನಿಯಾದರೆ ಅವರಿಗೆ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆಂದು ಸಚಿವರು ಹೇಳುತ್ತಿದ್ದಾರೆ.
ಪ್ರತಿ ವರ್ಷವೂ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಅನಾವೃಷ್ಟಿಯಿಂದ ಬೆಳೆ ಹಾಳಾಗುತ್ತದೆ. ಅದರ ಜೊತೆಗೆ ಕಾಡು ಪ್ರಾಣಿಗಳು ಕಾಟದಿಂದಲೂ ಕೂಡಾ ವರ್ಷಕ್ಕೆ ಒಂದು ಸಾವಿರ ಎಕರೆಗೂ ಹೆಚ್ಚು ಬೆಳೆ ಹಾನಿಯಾಗುತ್ತದೆ. ಆದರೆ ಅದಕ್ಕೆ ಅರಣ್ಯ ಇಲಾಕೆ ಕೊಡುವ ಪರಿಹಾರ ಅಲ್ಪ ಪ್ರಮಾಣದಲ್ಲಿ ಮಾತ್ರ. ಇನ್ನೂ ಈ ಕಾಡು ಪ್ರಾಣಿಗಳು ಅತೀ ಹೆಚ್ಚಾ ಕಬ್ಬು, ಕಡಲೆ, ಸ್ವೀಟ್ ಕಾರ್ನ್ ಹೀಗೆ ಹತ್ತಾರು ಬಗೆಯ ಬೆಳೆಗಳನ್ನ ಇಲ್ಲಿನ ಅರಣ್ಯ ಪ್ರದೇಶದಲ್ಲಿರುವ ಕಾಡು ಹಂದಿ, ಮಂಗಗಳು, ಜಿಂಕೆಗಳು ರೈತರ ಹೊಲಕ್ಕೆ ನುಗ್ಗಿ ಬೆಳೆಯನ್ನು ತಿಂದು ಹಾಕುತ್ತಿವೆ.
ಕಡಲೆ, ಜೋಳ, ಕಬ್ಬು, ಮುಸಕಿನ ಜೋಳ ಯಾವ ರೈತ ಹಾಕಿದ್ದಾನೆ ಅಲ್ಲಿಗೆ ಹಿಂಡು ಹಿಂಡಾಗಿ ರಾತ್ರಿ ವೇಳೆಯಲ್ಲಿ ಹೊಲಕ್ಕೆ ನುಗ್ಗಿ ಇಡಿ ಹೊಲ್ಲವನ್ನೇಲ್ಲ ತಿಂದು ಹಾಕುತ್ತಿವೆಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಒಂದೇ ರಾತ್ರಿಯಲ್ಲಿ ಈ ಕಾಡು ಪ್ರಾಣಿಗಳು ಎಕರೆಗಟ್ಟಲೇ ಬೆಳೆಯನ್ನ ತಿಂದು ನಾಶ ಮಾಡಿ ಹೋಗುತ್ತವೆ. ಆದರೆ ರೈತರ ಸಮಸ್ಯೆ ಸ್ಫಂದಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಕಂಡು ಕಾನಂದತೆ ಕುಳಿತುಬಿಟ್ಟಿದ್ದಾರೆ.
ಇದನ್ನೂ ಓದಿ: ಕಲ್ಲಿನ ಕೆತ್ತನೆಯಿಂದ ಬದುಕು ಕಟ್ಟಿಕೊಂಡ ಕುಟುಂಬ: ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಂದಲೂ ಭಾರೀ ಬೇಡಿಕೆ
ನಮ್ಮ ನೋವನ್ನ ಯಾರಿಗೆ ಹೇಳಬೇಕೆಂದು ಇಲ್ಲಿನ ರೈತರ ಅಳಲಾಗಿದೆ. ಇದರ ಜೊತೆಗೆ ಈ ಕಾಡು ಪ್ರಾಣಿಗಳನ್ನ ಹೊಡೆಯಲು ಬಾರದ ಅವುಗಳನ್ನ ಹೆದರಿಸಲು ಬಾರದಂತಾ ಸ್ಥಿತಿ ನಮ್ಮಲ್ಲಿದೆ, ಒಂದು ವೇಳೆ ಏನಾದರೂ ನಾವು ಜಿಂಕೆ, ಮಂಗಗಳು, ಕಾಡುಹಂದಿಯನ್ನ ಹೊಡೆದರೇ ಇಲ್ಲವೋ ಅದು ಆಕಸ್ಮಿಕವಾಗಿಯೂ ಅದು ಮರಣ ಹೊಂದಿದರು ಕೂಡ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆಯನ್ನ ಅರಣ್ಯ ಇಲಾಕೆಯವರು ಮಾಡುತ್ತಿದ್ದಾರೆ. ಇದರ ಜೊತೆಗೆ ನಮಗೆ ಬೆಳೆ ಹಾನಿ ಪ್ರರಿಹಾರವು ಕೂಡ ಕಡಿಮೆ ಕೊಡುತ್ತಿದ್ದು ಅತಿವೃಷ್ಠಿಯಿಂದ ಅನಾವೃಷ್ಟಿಯಿಂದಾಗುವ ಬೆಳೆ ಪರಿಹಾರದಂತೆ ಕಾಡು ಪ್ರಾಣಿಗಳಿಂದ ಹಾನಿಯಾದ ಬೆಳೆಗೂ ಅದೇ ಮಾದರಿಯಲ್ಲಿ ಹೆಚ್ಚಿನ ಹಣ ಕೊಡಿ ಎಂದು ರೈತರ ಮುಖಂಡರು ಹೇಳುತ್ತಿದ್ದಾರೆ.
ಗಡಿ ಜಿಲ್ಲೆಯ ರೈತರ ಹೊಲದಲ್ಲೀಗ ಕಾಡು ಪ್ರಾಣಿಗಳದ್ದೆ ಕಾರುಬಾರು. ಕಾಡು ಪ್ರಾಣಿಗಳ ತುಂಟಾಟಕ್ಕೆ ರೈತರು ಕಂಗಾಲು. ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವುಲು ಕಾದರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ ಅಂತಾ ಅರಣ್ಯ ಇಲಾಖೆಯ ಮೊರೆ ಹೋಗುತ್ತಿದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ರೈತರ ಮನವಿಗೆ ಸ್ಫಂದಿಸುತ್ತಿಲ್ಲ ಅನ್ನೂವುದು ಮಾತ್ರ ದುರದುಷ್ಟಕರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:50 pm, Sat, 28 October 23