ಕಲ್ಲಿನ ಕೆತ್ತನೆಯಿಂದ ಬದುಕು ಕಟ್ಟಿಕೊಂಡ ಕುಟುಂಬ: ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಂದಲೂ ಭಾರೀ ಬೇಡಿಕೆ
ನೋಡುಗರ ಕಣ್ಣಿಗೆ ಬರಿ ಕಲ್ಲು ಕಂಡರೆ ಅದು ಶಿಲ್ಪಿಯ ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನ ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಿ ಕಲ್ಲನ್ನ ಕೆತ್ತಿ ಅದಕ್ಕೆ ಭಾವವಿಲ್ಲದಿದ್ದರೂ ನೋಡುಗರ ಮನಸ್ಸಿನಲ್ಲಿ ಸಂತುಷ್ಠಿ ಭಾವ ಮೂಡುವಂತೆ ಮಾಡುವ ವಿಶಿಷ್ಟ ಶಿಲ್ಪಿಗಳಲ್ಲಿ ಇಲ್ಲಿ ಪ್ರತಿಭಾನ್ವೀತ ಶಿಲ್ಪಿ ನಿರ್ಮಾತೃಗಳು.
ಬೀದರ್, ಅಕ್ಟೋಬರ್ 22: ಅವರು ದಶಕಗಳಿಂದ ಶಿಲ್ಪಕಲೆ (Sculpture) ಯನ್ನ ನಂಬಿಕೊಂಡು ಬದುಕುತ್ತಿದ್ದಾರೆ. ಬೆಳಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೆ ಅವರ ನಿತ್ಯದ ಕಾಯಕ. ಒಂದು ಶಿಲ್ಪ ಕಲೆಗೆ ಒಗ್ಗುವ ಕಲ್ಲು ತಂದು ಅದಕ್ಕೊಂದು ರೂಪ ನೀಡುವ ಕಲಾ ಶ್ರಿಮಂತಿಗೆ ಅವರದು. ಲಲಿತ ಕಲಾ ಸೇವೆಗೆ ನೀಡುವ ಯಾವುದೇ ಸೌವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇವರು ಕೆತ್ತಿದ ಕಲ್ಲಿನ ಮೂರ್ತಿಗಳಿಗೆ ಭಾರೀ ಬೇಡಿಕೆಯಿದ್ದು ಕರ್ನಾಟಕ ಸೇರಿದಂತೆ ತೆಲಗಾಂಣ, ಮಹಾರಾಷ್ಟ್ರ ರಾಜ್ಯದಿಂದ ಜನ ಬಂದು ಮೂರ್ತಿ ಖರಿದಿಸುತ್ತಾರೆ.
ನೋಡುಗರ ಕಣ್ಣಿಗೆ ಬರಿ ಕಲ್ಲು ಕಂಡರೆ ಅದು ಶಿಲ್ಪಿಯ ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನ ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಿ ಕಲ್ಲನ್ನ ಕೆತ್ತಿ ಅದಕ್ಕೆ ಭಾವವಿಲ್ಲದಿದ್ದರೂ ನೋಡುಗರ ಮನಸ್ಸಿನಲ್ಲಿ ಸಂತುಷ್ಠಿ ಭಾವ ಮೂಡುವಂತೆ ಮಾಡುವ ವಿಶಿಷ್ಟ ಶಿಲ್ಪಿಗಳಲ್ಲಿ ಇಲ್ಲಿ ಪ್ರತಿಭಾನ್ವೀತ ಶಿಲ್ಪಿ ನಿರ್ಮಾತೃಗಳಿದ್ದಾರೆ. ಅವರೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಶಂಕರ್ ಮತ್ತು ಸಹೋದರರು.
ಇದನ್ನೂ ಓದಿ: ಅತೀ ಹೆಚ್ಚು ಕಬ್ಬುನುರಿಸಿ ಪ್ರಶಸ್ತಿ ಪಡೆದಿದ್ದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚುವ ಸ್ಥಿತಿಗೆ
ಇವರ ತಂದೆ ಮಾಡಿಕೊಂಡಿದ್ದ ಮೂರ್ತಿ ಕೆತ್ತನೆಯ ಕೆಲಸವನ್ನೇ ಇವರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ತಂದೆ ಮಾಡುವ ಮೂರ್ತಿಕೆಲಸವನ್ನ ನೋಡತ್ತಲೆ ಮೂರ್ತೀ ಕೆತ್ತನೆಯಲಲ್ಲಿ ತೊಡಗಿದ ಇವರು ಇಂದು ಸಾವಿರಾರು ಮೂರ್ತಿಗಳನ್ನ ಕೆತ್ತನೆ ಮಾಡುವುದರ ಮೂಲಕ ಸೈ ಎಣಿಸಿಕೊಂಡಿದ್ದಾರೆ. ಯಾರಿಗೆ ಯಾವ ಮೂರ್ತಿ ಬೇಕೋ ಅಂತಾ ಹೇಳಿದರೆ ಅದೆ ತರನಾದ ಮೂರ್ತಿಯನ್ನ ತಯ್ಯಾರಿಸಿ ಕೊಡುತ್ತೆವೆ ಆದರೆ, ಯಾರಿಗೂ ಇಷ್ಟೇ ಹಣ ನೀಡಬೇಕು ಎಂದು ಒತ್ತಾಯ ಮಾಡುವುದಿಲ್ಲ . ಅವರು ನೀಡಿದ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬಂದಿದ್ದೇವೆ ಎಂದು ಶಂಕರ್ ಹೇಳುತ್ತಿದ್ದಾರೆ.
ಸ್ನಾನ ಮಾಡಿ ಶುಚಿಯಿಂದ ಕೆಲಸಕ್ಕೆ ಅಣಿಯಾದರೆ ಬೆಳಿಗ್ಗೆ ಎರಡು ತಾಸು ಮತ್ತು ಸಂಜೆ ಎರಡು ತಾಸು ಮಾತ್ರ ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತೇವೆ. ಇದರಿಂದಾಗಿ ಒಂದು ಮೂರ್ತಿ ರೂಪುಗೊಳ್ಳಲು 4 ತಿಂಗಳು ಸಮಯ ಬೇಕಾಗುತ್ತದೆ. ಇನ್ನೂ ಇವರು ಎರಡು ಇಂಚಿನ ಮೂರ್ತಿಯಿಂದ 9 ಫೂಟ್ ಉದ್ದದ ಕಲ್ಲಿನ ಮೂರ್ತಿವರೆಗೂ ಇವರು ತಯಾರಿಸುತ್ತಾರೆ. ಒಂದು ನೂರು ರೂಪಾಯಿಂದ ಹಿಡಿದು ಎರಡು ಲಕ್ಷದವರೆಗೂ ಮೂರ್ತಿಗಳನ್ನ ಜನರು ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ
ಶ್ರೀದೇವಿ, ವೆಂಕಟೇಶ್ವರ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ ಸೇರಿದಂತೆ ದೇವತೆಗಳ ಮೂರ್ತಿಗಳೊಂದಿಗೆ ಶರಣೆ ತಂಗಡಗಿ ನೀಲಮ್ಮ, ಅಕ್ಕಮಹಾದೇವಿ, ವಾಲ್ಮೀಕಿ ಮೂರ್ತಿಗಳನ್ನು, ದೇವಸ್ಥಾನದ ಕಲ್ಲಿನ ಬಾಗಿಲುಗಳನ್ನು ಮಾಡಿದ್ದಾಗಿ ಹೇಳುತ್ತಾರೆ. ಇವರು ಕೆತ್ತನೆ ಮಾಡಿದ ದುರ್ಗಾದೇವಿ ಮೂರ್ತಿಗಳು ದೂರದ ಹೈದರಾಬಾದ್, ಆಂದ್ರ, ತೆಲಂಗಾಣ ರಾಜ್ಯಕ್ಕೂ ಮಾರಾಟವಾಗಿವೆ.
ಹೈದರಾಬಾದ್ ಕರ್ನಾಟಕದಲ್ಲಿ ಇವರೊಬ್ಬರೆ ಗ್ರಾಹಕರ ಇಚ್ಚೆಯಂತೆ ಮೂರ್ತಿಗಳನ್ನ ಕೆತ್ತಿಕೊಡುವುದರಿಂದ ಜನರು ಇಲ್ಲಿಯೇ ಬಂದು ಮೂರ್ತಿಗಳನ್ನ ಎಗೆದುಕೊಂಡು ಹೋಗುತ್ತಾರೆ ಇಲ್ಲಿ ಮೊದಲೇ ಆರ್ಡರ್ ಮಾಡಿದರೇ ಮಾತ್ರ ಇವರು ಮೂರ್ತಿಯನ್ನ ತಯ್ಯಾರು ಮಾಡುತ್ತಾರೆ ಮುಂಚಿತವಾಗಿ ಇವರು ಮೂರ್ತಿಗಳನ್ನ ತಯಾರಿಸಿ ಇಟ್ಟಿರುವುದಿಲ್ಲ. ಇಲ್ಲಿಗೆ ಮೂರ್ತಿ ತೆಗೆದುಕೊಂಡು ಹೋಗಲು ಬಂದವರು ಇವರ ಬಗ್ಗೆ ಇಲ್ಲಿನ ಕಲ್ಲಿನ ಮೂರ್ತಿಯ ಬಗ್ಗೆ ಮೆಚ್ಚಿಗೆಯ ಮಾತನಾಡುತ್ತಾರೆ.
ಕಲ್ಲಿನಲ್ಲಿ ಮೂರ್ತಿಯನ್ನ ಕೆತ್ತುವುದು ಸಾಮಾನ್ಯ ಮಾತಲ್ಲ, ಆಸಕ್ತಿ, ತಾಳ್ಮೇ, ಏಕಾಗ್ರತೆವಹಿಸಿ ಕಲ್ಲಿಗೆ ರೂಪಕೊಡಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮವ್ಯರ್ಥವಾಗುದಂತೂ ಪಕ್ಕಾ. ಆದರೂ ಕೂಡಾ ಕಲೆಯನ್ನೇ ನಂಬಿಕೊಂಡಿರುವ ಈ ಕುಟುಂಬ ತಾತ ಮುತ್ತಾತರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದು ಒಪ್ಪತ್ತಿನ ಊಟಕ್ಕೆ ಬರವಿಲ್ಲ ಎಂದು ಇವರು ಹೇಳುತ್ತಿದ್ದಾರೆ.
ಎಲೆಮರೆಯ ಕಾಯಿಯಂತೆ ಶಿಲ್ಪಕಲೆಯಲ್ಲಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯ ಮೈಗೂಡಿಸಿಕೊಂಡು ಲಲಿತಕಲೆಯಲ್ಲಿಯೇ ಕಳೆದು ಹೋಗಿರುವ ಶಿಲ್ಪಿಗಳನ್ನ ಕನ್ನಡ ಮತ್ತು ಸಂಸ್ಕೃತ ಇಲಾಕೆ ಶಿಲ್ಪಕಲಾ ಅಕಾಡೆಮಿಗಳು ಕಲಾವಿದರನ್ನ ಗುರುತಿಸಿ ಆರ್ಥಿಕ ಸಹಾಯ ಮಾಡಿದರೆ ಭಾರತಿಯ ಸಂಸ್ಕೃತಿ ಶಾಸ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.