ಅತೀ ಹೆಚ್ಚು ಕಬ್ಬುನುರಿಸಿ ಪ್ರಶಸ್ತಿ ಪಡೆದಿದ್ದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚುವ ಸ್ಥಿತಿಗೆ
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುಮಾರು 20 ಕೋಟಿಗೂ ಅಧಿಕ ಸಂಬಳದ ಹಣ ಬಾಕಿ ಇದೆ. ಕಳೆದ ನಾಲ್ಕು ವರ್ಷದಿಂದ ನಮಗೆ ಬರಬೇಕಾದ ಬಾಕಿ ಸಂಬಳದ ಬಾಕಿ ಹಣವನ್ನ ನೀಡಿ ಎಂದು ಕಾರ್ಮಿಕರು ಜಿಲ್ಲಾಡಳಿತಕ್ಕೆ, ಶಾಸಕರಿಗೆ ಸಚಿವರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೇ ಇವರಿಗೆ ಕೊಡಬೇಕಾದ ಸಂಬಳ ಮಾತ್ರ ಕೊಟ್ಟಿಲ್ಲ.
ಬೀದರ್, ಅಕ್ಟೋಬರ್ 19: ಒಂದು ಕಾಲದಲ್ಲಿ ಅತೀ ಹೆಚ್ಚು ಕಬ್ಬುನುರಿಸಿ ಪ್ರಶಸ್ತಿ ಪಡೆದಿದ್ದ ಬೀದರ್ (Bidar) ಸಹಕಾರಿ ಸಕ್ಕರೆ ಕಾರ್ಖಾನೆ (Bidar Sahakari Sakkare Karkhane) ತನ್ನ ಕೊನೆಯ ದಿನಗಳನ್ನ ಎಣಿಸುತ್ತಿದೆ. ಐದು ದಶಕಗಳಿಂದ ಇದೇ ಕಾರ್ಖಾನೆಯನ್ನ ನಂಬಿಕೊಂಡು ಬದುಕುಕಟ್ಟಿಕೊಂಡಿದ್ದ ನೂರಾರು ಕಾರ್ಮಿಕರ ಬದುಕು ಅಂತತ್ರವಾಗಿದೆ. ಕೆಲಸಗಾರರು ಸಂಬಳವಿಲ್ಲದೇ ತುತ್ತು ಅನ್ನಕ್ಕಾಗಿ ಪರಿತಪಿಸುತಿದ್ದು, ಲಕ್ಷಾಂತರ ಜನರ ಬಾಯಿಗೆ ಸಿಹಿ ನೀಡುತ್ತಿದ್ದ ಕಾರ್ಮಿಕರ ನೋವು ಯಾರಿಗೂ ಕೆಳಿಸುತ್ತಿಲ್ಲ.
ಐದು ದಶಕದಷ್ಟು ಹಳೆಯದಾದ ಸಹಕಾರಿ ಕ್ಷೇತ್ರದ ಮೊದಲ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಯ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ಒಂದು ದಶಕದಿಂದ ಬಂದ್ ಆಗಿದ್ದು ಒಂದು ವರ್ಷ ಆರಂಭವಾದರೆ ಇನ್ನೊಂದು ವರ್ಷ ಸಾಲ ಮಾಡಿ ಕಾರ್ಖಾನೆ ಆರಂಭಿಸುತ್ತಾರೆ. ಮತ್ತೆ ಎರಡ್ಮೂರು ವರ್ಷ ಬಂದ್ ಆಗುತ್ತದೆ. ಹೀಗೆ ಕಳೆದ ಹತ್ತು ವರ್ಷದಿಂದ ಬೀದರ್ ಸಕ್ಕರೆ ಕಾರ್ಖಾನೆ ಈ ಸ್ಥಿತಿಗೆ ಬಂದು ತಲುಪಿದೆ. ಇನ್ನು ಕಳೆದ ವರ್ಷದ ಕಾರ್ಖಾನೆ ಆಢಳಿತ ಮಂಡಳಿಗೆ ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾದ ಬಳಿಕ ಸಾಲ ಮಾಡಿ ಕಾರ್ಖಾನೆಯನ್ನ ಆರಂಭಿಸಿದರು. ಆದರೆ ಅರ್ಧಕ್ಕೆ ಕಾರ್ಖಾನೆಯನ್ನ ಬಂದ್ ಮಾಡಲಾಯಿತು.
20 ಕೋಟಿ ರೂ.ಗೂ ಹೆಚ್ಚಿನ ವೇತನ ಬಾಕಿ!
ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುಮಾರು 20 ಕೋಟಿಗೂ ಅಧಿಕ ಸಂಬಳದ ಹಣ ಬಾಕಿ ಇದೆ. ಕಳೆದ ನಾಲ್ಕು ವರ್ಷದಿಂದ ನಮಗೆ ಬರಬೇಕಾದ ಬಾಕಿ ಸಂಬಳದ ಬಾಕಿ ಹಣವನ್ನ ನೀಡಿ ಎಂದು ಕಾರ್ಮಿಕರು ಜಿಲ್ಲಾಡಳಿತಕ್ಕೆ, ಶಾಸಕರಿಗೆ ಸಚಿವರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೇ ಇವರಿಗೆ ಕೊಡಬೇಕಾದ ಸಂಬಳ ಮಾತ್ರ ಕೊಟ್ಟಿಲ್ಲ. ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕಾಯಂ ಕಾರ್ಮಿಕರು 161, ಹಂಗಾಮಿ ಕಾರ್ಮಿಕರು 222 ಹಾಗೂ ಗುತ್ತಿಗೆ ಆದಾರದಲ್ಲಿ 4 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಕೂಡಾ ಕಳೆದ ನಾಲ್ಕು ವರ್ಷದಿಂದ ಸಂಬಳವನ್ನ ನೀಡಿಲ್ಲ. ಹೀಗಾಗಿ ಇವರ ಬದುಕು ಮಾತ್ರ ಅಂತ್ರತ್ರ ಸ್ಥಿತಿಯಲ್ಲಿದೆ. ಜೊತೆಗೆ ಕಾರ್ಖಾನೆಯೂ ಕೂಡಾ ಈ ವರ್ಷವೂ ಕೂಡಾ ಕಬ್ಬು ನೂರಿಸದೆ ಬಂದ್ ಆಗಿದೆ ಇದನ್ನ ನೋಡಿದರೆ ಈ ಕಾರ್ಖಾನೆ ಶಾಶ್ವತವಾಗಿ ಬಂದ್ ಆಗುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರವಾಗಿವೆ.
ಈ ವರ್ಷ ಕಾರ್ಖಾನೆಯನ್ನ ಆರಂಭಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಹೀಗಾಗಿ ಇಲ್ಲಿನ ಕಾರ್ಮಿಕರಿಗೆ ಏನು ಮಾಡಬೇಕೋ ಅನ್ನೋದೆ ತಿಳಿಯದಾಗಿದೆ. ಕಾರ್ಖಾನೆಯನ್ನ ಯಾರಿಗಾದರೂ ಲೀಸ್ ಗೆ ಕೊಟ್ಟು ಕಾರ್ಖಾನೆಯನ್ನ ಆರಂಭಿಸಿ ಎಂದು ಇಲ್ಲಿನ ಕಾರ್ಮಿಕರು ಮನವಿ ಮಾಡುತ್ತಿದ್ದಾರೆ.
ಬೀದರ್ ಜಿಲ್ಲೆಯ ಮೊದಲ ಕಾರ್ಖಾನೆ
ಬೀದರ್ ಜಿಲ್ಲೆಯಲ್ಲಿ ಆರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆ ಈ ಕಾರ್ಖಾನೆಗಿದೆ. 1963 ರಲ್ಲಿ ಆರಂಭವಾದ ಕಾರ್ಖಾನೆಯೂ ರಾಜ್ಯದಲ್ಲಿಯೇ ಅತೀಹೆಚ್ಚು ಕಬ್ಬು ನುರಿಸಿ ಪ್ರಶಸ್ತಿ ಕೂಡಾ ಬಾಚಿಕೊಂಡಿತ್ತು. ಇಂದು ಈ ಕಾರ್ಖಾನೆ ಅಧೋಗತಿಗೆ ಇಳಿದಿದೆ. ಈ ಖಾರ್ಕಾನೆಯನ್ನ ನಂಬಿಕೊಂಡು 5 ನೂರು ಕುಟುಂಬಗಳ ಬದುಕುಕಟ್ಟಿಕೊಂಡಿವೆ. ಇದರ ಜೊತೆಗೆ ಸಾವಿರಾರು ರೈತರು ಈ ಕಾರ್ಖಾನೆಗೆ ಕಬ್ಬಣ್ಣ ಹಾಕಿ ತಕ್ಷಣದಲ್ಲಿಯೇ ಹಣವನ್ನ ಪಡೆದುಕೊಂಡು ಹಾಯಾಗಿದ್ದರು. ಆದರೇ ಕಾರ್ಖಾನೆಯೀಗ ಶಾಶ್ವತವಾಗಿ ಬಂದ್ ಆಗುತ್ತಿರುವುದು ಇಲ್ಲಿನ ಕಾರ್ಮಿಕರು ಹಾಗೂ ರೈತರ ನಗುವನ್ನ ಕಸಿದುಕೊಂಡಿದೆ. ಕಳೆದ ನಾಲ್ಕು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಂಬಳವೇ ಸಿಕ್ಕಿಲ್ಲ ಹೀಗಾಗಿ ನೂರಾರು ಕಾರ್ಮಿಕರು ಸಂಬಳವಿಲ್ಲದೇ ಒಪ್ಪತ್ತಿನ ಊಟಕ್ಕೇ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಇಲ್ಲಿನ ಕಾರ್ಮಿಕರು ಕಾಯಿಲೆ ಬಿದ್ದರೇ ಅವರಿಗೆ ತೋರಿಸಲಿಕ್ಕೂ ಕೂಡಾ ಹಣದ ಸಮಸ್ಯೆ ಇದೆ. ವರ್ಷದಿಂದ ಸಂಬವಿಲ್ಲದ ಕಾರಣ ಯಾರುಕೂಡಾ ಉದ್ರಿಸಹಿತಿ ಇವರಿಗೆ ಕೊಡುತ್ತಿಲ್ಲ ಮಕ್ಕಳ ಶಾಲೆಯ ಪೀಸ್ ಕೂಡಾ ಕೊಡಲಾರದಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕಳೆದ ವರ್ಷ ಇಲ್ಲಿ ಕೆಲಸ ಮಾಡುತ್ತಿದ್ದ 243 ಕಾಯಂ ನೌಕರರನ್ನ ಕಲಸದಿಂದ ವಜಾ ಮಾಡಲಾಗಿತ್ತು. ಅದರ ಜೊತೆಗೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೊಡಬೇಕಾದ ಯಾವುದೆ ಸಂಬಳವಾಗಲಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದೆ ಇಲ್ಲಿನ ಕಾರ್ಮಿಕರು ನರಕದಂತೆ ಬದುಕುತ್ತಿದ್ದಾರೆ.
ಇದನ್ನೂ ಓದಿ: ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ
ಈ ವರ್ಷ ಕಾರ್ಖಾನೆ ಕ್ರಷಿಂಗ್ ಆರಂಭಿಸುವುದು ಅನುಮಾನವಿರುವ ಕಾರಣ ಮುಂದೆ ಈ ಕಾರ್ಖಾನೆ ಆರಂಭವಾಗುವುದು ಗ್ಯಾರಂಟಿಯೂ ಇಲ್ಲಿ ಹೀಗಾಗಿ ಇಲ್ಲಿನ ನೂರಾರು ಕಾರ್ಮಿಕರು ಬಿದಿಗೆ ಬಿಳುವುದು ಗ್ಯಾರಂಟಿಯಾಗಿದೆ ಕಾರ್ಖಾನೆ ಬಂದ್ ಆದರೇ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕಾಗುತ್ತದೆಂದು ಇಲ್ಲಿನ ಜನರು ತಮ್ಮ ನೋವನ್ನ ತೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಕಾರ್ಖಾನೆಯನ್ನ ಸರಿಯಾಗಿ ನಡೆಸದ ಪರಿಣಾಮ ಇಂದು ಬಂದ್ ಆಗಿದೆ ಆದರೆ ಇದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ ಕಾರ್ಮಿಕರ ಸಮಸ್ಯೆ ಯಾರಿಗೂ ಕೆಳಿಸುತ್ತಿಲ್ಲ ಎಂದು ಕಾರ್ಮಿಕರ ಮುಂಖಡರು ಹೇಳುತ್ತಿದ್ದಾರೆ.
ರಾಜಕೀಯದ ಬಣ ಪ್ರತಿಷ್ಠೆಯಿಂದ ಹಾಗೂ ಸಾಲದ ಸುಳಿಗೆ ಸಿಲುಕಿ ಐದು ದಶಕದ ಇತಿಹಾಸ ಹೊಂದಿರುವ ಬೀದರ್ ಸಕ್ಕರೇ ಕಾರ್ಖಾನೆ ಬಂದ್ ಆಗಿದೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಸಂಬಳ ಬರದಿದ್ದರೇ ಅವರ ಕುಟುಂಬ ಯಾವ ಸ್ಥಿಗೆ ಬರುತ್ತವೇ ಎನ್ನುವುದನ್ನು ಅರಿಯದೇ ತಮ್ಮ ಹಿತಕ್ಕಾಗಿ ಸಂಬಳ ನೀಡದೇ ಸತಾಯಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ