ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ

2019 ರಿಂದಲೂ ಹಬ್ಬದ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ ಮಾಡಿಕೊಡುತ್ತಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ನಮ್ಮ ಭಾಗದ ಜನರ ಪರವಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಜಾಧವ್ ಉಲ್ಲೇಖಿಸಿದ್ದಾರೆ.

ದಸರಾ ಪ್ರಯುಕ್ತ ಬೆಂಗಳೂರು, ಬೀದರ್ ಮಧ್ಯೆ 3 ವಿಶೇಷ ರೈಲು: ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
|

Updated on: Oct 18, 2023 | 8:25 PM

ಬೆಂಗಳೂರು, ಅಕ್ಟೋಬರ್ 18: ದಸರಾ ಹಬ್ಬದ ಪ್ರಯುಕ್ತ ಭಾರತೀಯ ರೈಲ್ವೆಯು (Indian Railway) ಕಲಬುರಗಿ ಮಾರ್ಗವಾಗಿ ಬೆಂಗಳೂರು ಹಾಗೂ ಬೀದರ್ ಮಧ್ಯೆ ಮೂರು ವಿಶೇಷ ರೈಲನ್ನು (Special Train) ಘೋಷಿಸಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಫೇಸ್​ಬುಕ್​ನಲ್ಲಿ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ (Dr Umesh Jadhav) ಮಾಹಿತಿ ನೀಡಿದ್ದು, ರೈಲ್ವೆ ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ. ವಿಶೇಷ ರೈಲುಗಳು ಅಕ್ಟೋಬರ್ 20, 21, 22, 23 ಹಾಗೂ 24ರಂದು ಸಂಚರಿಸಲಿವೆ.

ದಸರಾ ಹಬ್ಬದ ಪ್ರಯುಕ್ತ 3 ವಿಶೇಷ ರೈಲನ್ನು ಕಲಬುರಗಿ ಮಾರ್ಗವಾಗಿ ಬೆ೦ಗಳೂರು ಹಾಗೂ ಬೀದರ್‌ ಮಧ್ಯೆ ಸ೦ಚರಿಸಲು ಅನುವು ಮಾಡಿಕೊಟ್ಟು, ನಮ್ಮ ಭಾಗದ ಜನರಿಗೆ ಅನುಕೂಲ ಮಾಡಿ ಕೊಟ್ಟಿದ್ದಕ್ಕೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು ಎಂದು ಉಮೇಶ್ ಜಾಧವ್ ಫೇಸ್​​ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ದಿನಾಂಕ ಅಕ್ಟೋಬರ್‌ 20 ಮತ್ತು 21ರಂದು ವಿಶೇಷ ರೈಲು ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಲಬುರಗಿ ಮಾರ್ಗವಾಗಿ ಬೀದರ್​​ಗೆ ಹೊರಡಲಿದೆ. ದಿನಾಂಕ ಅಕ್ಟೋಬರ್‌ 23 ರಂದು ವಿಶೇಷ ರೈಲು ಯಲಹಂಕ ರೈಲ್ವೆ ನಿಲ್ದಾಣದಿ೦ದ ಹೊರಡಲಿದೆ. ದಿನಾಂಕ ಅಕ್ಟೋಬರ್ 21, 22 ಮತ್ತು 24 ರಂದು ಬೀದರ್​​ನಿ೦ದ ಕಲಬುರಗಿ ಮಾರ್ಗವಾಗಿ ರೈಲು ಬೆ೦ಗಳೂರಿಗೆ ತಲುಪಲಿದೆ ಎಂದು ಸಂಸದರು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. 2019 ರಿಂದಲೂ ಹಬ್ಬದ ಪ್ರಯುಕ್ತ ವಿಶೇಷ ರೈಲು ವ್ಯವಸ್ಥೆ ಮಾಡಿಕೊಡುತ್ತಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ನಮ್ಮ ಭಾಗದ ಜನರ ಪರವಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಜಾಧವ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಇದು ಹೊಟೇಲ್ ರೂಮ್ ಅಲ್ಲ, ರೈಲಿನ ಚಿತ್ರ! ಈ ಐಷಾರಾಮಿ ರೈಲು ಪ್ರಯಾಣ ಹೇಗಿರುತ್ತದೆ? ಟಿಕೆಟ್ ದರ ಎಷ್ಟು? ಇಲ್ಲಿದೆ ವಿವರ

ಬೆಂಗಳೂರು – ವಾಸ್ಕೋಡಗಾಮಾ ಮಧ್ಯೆ ವಿಶೇಷ ರೈಲು

ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ವಾಸ್ಕೋಡಗಾಮಾ ನಡುವೆ ಒಂದು ವಿಶೇಷ ರೈಲು ವ್ಯವಸ್ಥೆ ಮಾಡಿದೆ. ರೈಲು ಸಂಖ್ಯೆ 07357 ಅಕ್ಟೋಬರ್ 20 ರಂದು ಸಂಜೆ 5.30 ಕ್ಕೆ ಎಸ್​ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 9.30 ಕ್ಕೆ ವಾಸ್ಕೋಡಗಾಮಾ ತಲುಪಲಿದೆ. ರೈಲು ಸಂಖ್ಯೆ 07358 ಅಕ್ಟೋಬರ್ 24 ರಂದು ಮಧ್ಯಾಹ್ನ 2.30 ಕ್ಕೆ ವಾಸ್ಕೋಡಗಾಮಾದಿಂದ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಎಸ್​ಎಂವಿಟಿ ಬೆಂಗಳೂರು ತಲುಪಲಿದೆ. 17 ಕೋಚ್​ಗಳನ್ನೊಳಗೊಂಡ ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಂ, ಸಂವೋರ್ಡೆಮ್ ಮತ್ತು ಮಡಗಾಂವ್‌ನಲ್ಲಿ ನಿಲುಗಡೆ ಹೊಂದಿರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ