- Kannada News National Indian Railway Salon Coach Train Special Travel Information Photos details here
ಇದು ಹೊಟೇಲ್ ರೂಮ್ ಅಲ್ಲ, ರೈಲಿನ ಚಿತ್ರ! ಈ ಐಷಾರಾಮಿ ರೈಲು ಪ್ರಯಾಣ ಹೇಗಿರುತ್ತದೆ? ಟಿಕೆಟ್ ದರ ಎಷ್ಟು? ಇಲ್ಲಿದೆ ವಿವರ
ಈ ರೈಲು ಕೋಚ್ ಪ್ರಯಾಣ ಹೇಗಿರುತ್ತದೆ ಎಂದು ಅರ್ಥ ಮಾಡಿಕೊಳ್ಳಲು ನೀವು ಈ ಚಿತ್ರ ನೋಡಬಹುದು. ಇವುಗಳೆಲ್ಲಾ ಯಾವುದೋ ಹೋಟೆಲ್ನ ರೂಮ್ಗಳಲ್ಲ, ಬದಲಾಗಿ ರೈಲಿನ ಕೋಚ್ಗಳು.
Updated on: Nov 12, 2021 | 7:07 PM

Indian Railway Salon Coach Train Special Travel Information Photos details here

ಸಲೊನ್ಗಳು ಎಂದರೆ ಐಷಾರಾಮಿ ಕಂಪಾರ್ಟ್ಮೆಂಟ್ಗಳು. ಇವುಗಳನ್ನು ಸೀಟ್ಗಳನ್ನಾಗಿ ಬುಕ್ ಮಾಡಲು ಆಗುವುದಿಲ್ಲ. ಬದಲಾಗಿ ಕಂಪಾರ್ಟ್ಮೆಂಟ್ ಬುಕ್ ಮಾಡಬೇಕಾಗುತ್ತದೆ. ಈ ಐಷಾರಾಮಿ ಕಂಪಾರ್ಟ್ಮೆಂಟ್ ರೈಲಿನಲ್ಲಿ ಪ್ರಯಾಣಿಕರು ದೂರದೂರಕ್ಕೆ ಪ್ರಯಾಣ ಬೆಳೆಸಬಹುದು. ಒಂದು ಅಥವಾ ಎರಡು ಇಂತಹ ಕೋಚ್ಗಳನ್ನು ಯಾವುದೇ ರೈಲಿಗೆ ಅಳವಡಿಸಲಾಗುತ್ತದೆ. ಕೆಲವೊಮ್ಮೆ ಇಂತಹ ಎರಡು ಕೋಚ್ಗಳು ಮಾತ್ರ ಹೊಂದಿರುವ ರೈಲು ಕೂಡ ಪ್ರಯಾಣ ಮಾಡುತ್ತದೆ. ಈ ಮೊದಲು ಈ ಕೋಚ್ನ್ನು ರೈಲ್ವೇ ಅಧಿಕಾರಿಗಳು ಬಳಸುತ್ತಿದ್ದರು.

ಈ ಕೋಚ್ಗಳಲ್ಲಿ ಆಸನ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ರೂಮ್ ಇರುತ್ತದೆ. ಈ ರೂಮ್ಗಳಲ್ಲಿ ಸೋಫಾ, ಬೆಡ್, ಕಿಚನ್, ಐಷಾರಾಮಿ ವಾಶ್ ರೂಮ್ ವ್ಯವಸ್ಥೆ ಇರುತ್ತದೆ. ಇದು ಶ್ರೀಮಂತ ಹೊಟೇಲ್ನಂತೆ ಇರುತ್ತದೆ. ಒಳ್ಳೆಯ ಹೊಟೇಲ್ ಒಂದರಲ್ಲಿ ಉಳಿದುಕೊಂಡಂತೆ ಪ್ರಯಾಣಿಕರಿಗೆ ಅನುಭವ ಸಿಗುತ್ತದೆ. ಈಗ ಈ ಕೋಚ್ ಸಾಮಾನ್ಯರಿಗೂ ಲಭ್ಯವಿದೆ.

ಈ ಕೋಚ್ನ ರೈಲು ಪ್ರಯಾಣದ ಟಿಕೆಟ್ ದರ ಸಾಮಾನ್ಯ ಸೀಟ್ಗಿಂತ ಬಹಳ ಹೆಚ್ಚಿರುತ್ತದೆ. ಈ ಕೋಚ್ಗಳು ಪರಿಚಯಿಸಿದಾಗ ಈ ಕೋಚ್ ಪ್ರಯಾಣ ದರ ಒಂದು ಕುಟುಂಬಕ್ಕೆ ಸುಮಾರು 2 ಲಕ್ಷ ರೂಪಾಯಿ ಆಗಿತ್ತು. ಈ ಟಿಕೆಟ್ ತೆತ್ತು ದೆಹಲಿಯಿಂದ ಕಾತ್ರಾಗೆ ಪ್ರಯಾಣ ಮಾಡಬಹುದಿತ್ತು.

ಒಂದು ರಾತ್ರಿಯ ಪ್ರಯಾಣಕ್ಕೆ ಒಂದು ಕುಟುಂಬದ ಸದಸ್ಯರು ಅಂದರೆ, 3- 4 ಮಂದಿ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬರಬಹುದು.




