ಬೆಂಗಳೂರು: ಆರ್ಡರ್ ಕೊಟ್ಟ ಕೇಕ್​ನಲ್ಲಿ ಸ್ಪೆಲಿಂಗ್ ಮಿಸ್ಟೇಕ್: ಸಿಬ್ಬಂದಿಗೆ ಚಾಕು ಇರಿದು ವ್ಯಕ್ತಿ ಪರಾರಿ

ಬೇಕರಿ ಸಿಬ್ಬಂದಿ ವಂಶಿ ಎಂಬುವವರ ಎರಡು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳು ಬೇಕರಿ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ(ಅ.17) ರಾತ್ರಿ 8 ಗಂಟೆಯ ಸುಮಾರಿಗೆ ಬೇಕರಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೇಕ್ ಆರ್ಡರ್ ಮಾಡಿದ್ದ. ಬಳಿಕ ಕೇಕ್ ಕೊಟ್ಟು ಹಣ ಕೇಳಿದಾಗ ಸ್ಪೆಲಿಂಗ್ ಸರಿಯಿಲ್ಲವೆಂದು ಎಂದು ಹಲ್ಲೆ ಮಾಡಿದ್ದಾನೆ.

ಬೆಂಗಳೂರು: ಆರ್ಡರ್ ಕೊಟ್ಟ ಕೇಕ್​ನಲ್ಲಿ ಸ್ಪೆಲಿಂಗ್ ಮಿಸ್ಟೇಕ್: ಸಿಬ್ಬಂದಿಗೆ ಚಾಕು ಇರಿದು ವ್ಯಕ್ತಿ ಪರಾರಿ
ಬೇಕರಿ ಸಿಬ್ಬಂದಿಗೆ ಚಾಕು ಇರಿತ
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 8:36 PM

ಬೆಂಗಳೂರು, ಅ.18: ಆರ್ಡರ್ ಕೊಟ್ಟ ಕೇಕ್​ನಲ್ಲಿ ಹೆಸರಿನ ಸ್ಪೆಲಿಂಗ್ ಸರಿಯಿಲ್ಲದ ಹಿನ್ನಲೆ ವ್ಯಕ್ತಿಯೊಬ್ಬ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಬೆಂಗಳೂರು(Bengaluru) ನಗರದ ತಿರುಮನಹಳ್ಳಿಯ ಬೇಕರಿಯಲ್ಲಿ ನಡೆದಿದೆ. ಬೇಕರಿ ಸಿಬ್ಬಂದಿ ವಂಶಿ ಎಂಬುವವರ ಎರಡು ಕೈಗಳಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಗಾಯಾಳು ಬೇಕರಿ ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ(ಅ.17) ರಾತ್ರಿ 8 ಗಂಟೆಯ ಸುಮಾರಿಗೆ ಬೇಕರಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೇಕ್ ಆರ್ಡರ್ ಮಾಡಿದ್ದ. ಬಳಿಕ ಕೇಕ್ ಕೊಟ್ಟು ಹಣ ಕೇಳಿದಾಗ ಸ್ಪೆಲಿಂಗ್ ಸರಿಯಿಲ್ಲವೆಂದು ಎಂದು ಗಲಾಟೆ ಶುರು ಮಾಡಿ, ಕೊನೆಗೆ ಹಣ ಕೇಳುತ್ತಿಯಾ ಎಂದು ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಫ್​ ಆಗಿದ್ದಾನೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕೃತ್ಯ ಎಸಗಿ ಪರಾರಿಯಾದ ಆರೋಪಿಗಾಗಿ ಶೋಧಕಾರ್ಯ ನಡೆಸಲಾಗಿದೆ.

ಕಾರು, ಸರಕು ಸಾಗಣೆ ವಾಹನ, ಕ್ಯಾಂಟರ್ ನಡುವೆ ಸರಣಿ ಅಪಘಾತ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ-ದಾಬಸ್​ಪೇಟೆ ಹೆದ್ದಾರಿಯ 11ನೇ ಮೈಲಿ ಬಳಿ ಕಾರು, ಸರಕು ಸಾಗಣೆ ವಾಹನ ಹಾಗೂ ಕ್ಯಾಂಟರ್​ ನಡುವೆ ಸರಣಿ ಅಪಘಾತ ಆಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸರಕು ಸಾಗಣೆ ವಾಹನದ ಚಾಲಕನ ಕಾಲು ಮುರಿದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಸರಕು ವಾಹನದಲ್ಲಿದ್ದ  5ಕ್ಕೂ ಹೆಚ್ಚು ಮೇಕೆಗಳ ಸಾವನ್ನಪ್ಪಿವೆ. ಸಕಾಲಕ್ಕೆ ಆ್ಯಂಬುಲೆನ್ಸ್ ಬಾರದೆ ಗಾಯಾಳುಗಳ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಆ್ಯಂಬುಲೆನ್ಸ್​ ಬಾರದಿದ್ದರಿಂದ ಕಾರಿನಲ್ಲೇ ಗಾಯಾಳುಗಳು ಆಸ್ಪತ್ರೆಗೆ ಶಿಫ್ಟ್ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಆರೋಪಿಯನ್ನ ಬಂಧಿಸಲು ಹೋಗಿದ್ದ ಪೊಲೀಸ್​ ಸಿಬ್ಬಂದಿಗೆ ಚಾಕು ಇರಿತ; ಮುಂದೆನಾಯ್ತು?

ಇಬ್ಬರು ಬೈಕ್ ಕಳ್ಳರ ಬಂಧನ

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,  ಇಬ್ಬರು ಬೈಕ್​ ಕಳ್ಳರನ್ನು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಂದ 5 ಲಕ್ಷ ರೂ ಮೌಲ್ಯದ 10 ಬೈಕ್​ಗಳನ್ನು​ ಜಪ್ತಿ ಮಾಡಿದ್ದಾರೆ. ಮೌಲಾಲಿ ಜಮಾದಾರ್(24)ಹಾಗೂ ಯಾಸಿನ್ ಅಪ್ತಾಗಿರಿ(19) ಬಂಧಿತರು. ಇನ್ನು ಘಟನೆ ಕುರಿತು ಸೆ.5 ರಂದು ಇರ್ಫಾನ್ ಕೋಲೂರ ಎಂಬುವರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆ ತನಿಖೆ ಆರಂಭಿಸಿದ್ದ ಪೊಲೀಸರು, ತೇರದಾಳ, ಜಮಖಂಡಿ, ಗೋಕಾಕ್, ಅಥಣಿ, ಯಾದವಾಡ ಸೇರಿ ಹಲವೆಡೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ