Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದ ರೈತ ಅರೆಸ್ಟ್

ರಾಥೋಡ್ ತೊಗರಿ ಮತ್ತು ಹತ್ತಿ ಗಿಡಗಳ ಜೊತೆಗೆ ಗಾಂಜಾ ಗಿಡಗಳನ್ನು ಬೆಳೆಸಿದ್ದಾರೆ. ಈ ಕುರಿತು ಮೂಲಗಳಿಂದ ಖಚಿತ ಮಾಹಿತಿ ಪಡೆದ ಸಂತಪುರ ಪೊಲೀಸರು ಎಸ್ಪಿ ಚೆನ್ನಬಸವಣ್ಣ ಮಾರ್ಗದರ್ಶನದಲ್ಲಿ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಬೀದರ್: ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದ ರೈತ ಅರೆಸ್ಟ್
ಬೀದರ್: ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದ ರೈತ ಅರೆಸ್ಟ್
Follow us
TV9 Web
| Updated By: Ganapathi Sharma

Updated on:Oct 24, 2023 | 5:54 PM

ಬೀದರ್, ಅಕ್ಟೋಬರ್: ಬೀದರ್ (Bidar) ಜಿಲ್ಲೆಯ ವಿಜಯನಗರ ತಾಂಡಾ ಗ್ರಾಮದಲ್ಲಿ ಜಮೀನಿನಲ್ಲಿ ಗಾಂಜಾ (Ganja) ಬೆಳೆದಿದ್ದ ರೈತರೊಬ್ಬರನ್ನು ಬಂಧಿಸಲಾಗಿದೆ. ರೈತ ತೊಗರಿ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಗಿಡ ಬೆಳೆಸಿದ್ದರು. ಆರೋಪಿಯನ್ನು ಶಿವಾಜಿ ರಾಥೋಡ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ತೆಲಂಗಾಣದ ಗಡಿಯಲ್ಲಿ ಜಮೀನು ಹೊಂದಿದ್ದಾರೆ. ರಾಥೋಡ್ ಅವರ ಜಮೀನಿನಲ್ಲಿ 25.54 ಲಕ್ಷ ಮೌಲ್ಯದ 63.86 ಕೆಜಿ ತೂಕದ 179 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಥೋಡ್ ತೊಗರಿ ಮತ್ತು ಹತ್ತಿ ಗಿಡಗಳ ಜೊತೆಗೆ ಗಾಂಜಾ ಗಿಡಗಳನ್ನು ಬೆಳೆಸಿದ್ದಾರೆ. ಈ ಕುರಿತು ಮೂಲಗಳಿಂದ ಖಚಿತ ಮಾಹಿತಿ ಪಡೆದ ಸಂತಪುರ ಪೊಲೀಸರು ಎಸ್ಪಿ ಚೆನ್ನಬಸವಣ್ಣ ಮಾರ್ಗದರ್ಶನದಲ್ಲಿ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತು ಸಂತಪುರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ರೈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಅಂತರ್ ರಾಜ್ಯ ದರೋಡೆಕೋರರ ಹೆಡೆ ಮುರಿ ಕಟ್ಟಿದ ಬೀದರ್ ಪೊಲೀಸ್: 94 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

ಈ ಮಧ್ಯೆ, ಬೀದರ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ, ದರೋಡೆ, ಮನೆಗಳ್ಳತನ ಸೇರಿ ಒಟ್ಟು ಐದು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 9 ದರೋಡೆಕೋರರನ್ನು ಬಂಧಿಸಿದ್ದಾರೆ. 94 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಂಟೆನರ್ ಡ್ರೈವರ್​ಗೆ ಮತ್ತುಬರುವ ಇಂಜೆಕ್ಷನ್ ಚುಚ್ಚಿ ಲಾರಿ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿಯಲ್ಲಿ ಸಾಗಿಸುತ್ತಿದ್ದ 50 ಲಕ್ಷ 76 ಸಾವಿರ ಮೌಲ್ಯದ 694 ಫ್ಯಾನ್ ಬಾಕ್ಸ್ ಲಾರಿ ವಶಕ್ಕೆ ಪಡೆಯಲಾಗಿದೆ. ಹಾಗೂ 12 ಲಕ್ಷ 82 ಸಾವಿರ ಮೌಲ್ಯದ 180 ಗ್ರಾಮ್ ಬಂಗಾರದ ಆಭರಣ, ಎರಡು ಕೆಜಿಯಷ್ಟು ಬೆಳ್ಳಿಯ ಆಭರಣ ಒಂದು ಬೈಕ್ 20 ಸಾವಿರ ನಗದು ಹಣ ವಶಕ್ಕೆ ಪಡೆಯಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:51 pm, Tue, 24 October 23

ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ