AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮೊದಲ ಬಲಿ! ಬೀದರ್​ನಲ್ಲಿ ಬಿಸಿಲ ಝಳ ತಾಳಲಾರದೆ ಕುಸಿದು ಬಿದ್ದ ಯುವಕ ಸ್ಥಳದಲ್ಲೇ ಸಾವು

ರಾಜ್ಯದಲ್ಲಿ ತೀವ್ರ ಬಿಸಿಲ ಅಲೆ ಹೆಚ್ಚಾಗಿದ್ದು, ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೀಟ್‌ವೇವ್ ಅಲರ್ಟ್ ಘೋಷಿಸಲಾಗಿದೆ.  ಇದರ ಮಧ್ಯೆ ಬೀದರ್‌ನಲ್ಲಿ 20 ವರ್ಷದ ಯುವಕ ಹೀಟ್‌ಸ್ಟ್ರೋಕ್‌ಗೆ ಬಲಿಯಾಗಿದ್ದಾನೆ. ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಬಾರದಂತೆ, ಸಾಕಷ್ಟು ನೀರು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. 

ರಾಜ್ಯದಲ್ಲಿ ಹೀಟ್​ ಸ್ಟ್ರೋಕ್​ಗೆ ಮೊದಲ ಬಲಿ! ಬೀದರ್​ನಲ್ಲಿ ಬಿಸಿಲ ಝಳ ತಾಳಲಾರದೆ ಕುಸಿದು ಬಿದ್ದ ಯುವಕ ಸ್ಥಳದಲ್ಲೇ ಸಾವು
ಬೀದರ್​ನ ಕಡುಬಿಸಿಲಿಗೆ ಹದಿಹರೆಯದ ಯುವಕ ಬಲಿ!Image Credit source: google Gemini
ಭಾವನಾ ಹೆಗಡೆ
|

Updated on:Apr 20, 2026 | 11:16 AM

Share

ಬೀದರ್, ಏಪ್ರಿಲ್ 20: ಬೇಸಿಗೆ ಶುರುವಾದಾಗಲಿಂದಲೂ ರಾಜ್ಯದ ಹಲವೆಡೆ ವಿಪರೀತ ಬಿಸಿಲು (Heat wave) ಕಂಡು ಬಂದಿದೆ. ಕರಾವಳಿ, ಉತ್ತರ ಕರ್ನಾಟಕದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ವರೆಗೂ ಹೋಗುವ ಹಂತಕ್ಕೆ ತಪುಪಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ನಡುವೆ ಬೀದರ್​ನ ಕಮಲನಗರ ಪಟ್ಟಣದ ಹೊರವಲಯದಲ್ಲಿ ಹೀಟ್ ಸ್ಟ್ರೋಕ್​ನಿಂದಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶ ಮೂಲದ ಯುವಕ

ಮೃತರನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಲಯಿಕ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಆತ ಕಮಲನಗರದಲ್ಲಿ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತಾಪಮಾನ ಗಣನೀಯವಾಗಿ ಏರಿಕೆಯಾಗಿದ್ದು, ಹೊರಗಡೆ ಸಂಚರಿಸುವುದು ಕಷ್ಟವಾಗುವಷ್ಟು ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಘಟನೆಯ ದಿನ ಸಮೀರ್ ತಾಪಮಾನ ಹೆಚ್ಚಿದ ಪರಿಣಾಮ ತಲೆ ಸುತ್ತು ಕಾಣಿಸಿಕೊಂಡಿದೆ ಎಂದು ಹೇಳಿಕೊಂಡಿದ್ದ. ಸ್ಥಳೀಯ ಮೆಕ್ಯಾನಿಕ್ ಅಂಗಡಿ ಬಳಿ ನೀರು ಕುಡಿದು ಸ್ವಲ್ಪ ಸಮಯ ವಿಶ್ರಾಂತಿಯನ್ನೂ ಪಡೆದಿದ್ದ ಎನ್ನಲಾಗಿದೆ.

ಇದನ್ನೂ ಓದಿ ಕರ್ನಾಟಕ ಹವಾಮಾನ ವರದಿ: ಇಂದು ಹೀಟ್ ವೇವ್ ಜೊತೆಗೆ ಕರಾವಳಿಯಲ್ಲಿ ವರುಣಾರ್ಭಟ!

ಬಿಸಿಲಿನಲ್ಲಿ ಹೊರಗೆ ಹೋಗದಂತೆ ಅಧಿಕಾರಿಗಳಿಂದ ಎಚ್ಚರಿಕೆ

ಬಳಿಕ ಡಿಗ್ಗಿ ಗ್ರಾಮದ ಕಡೆಗೆ ರಾಷ್ಟ್ರೀಯ ಹೆದ್ದಾರಿ-50 ಮಾರ್ಗವಾಗಿ ತೆರಳುತ್ತಿದ್ದಾಗ ಯುವಕ ಏಕಾಏಕಿ ಕುಸಿದು ಬಿದ್ದಿದ್ದು, ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದರೂ, ಹೀಟ್ ಸ್ಟ್ರೋಕ್​ನಿಂದಾಗಿ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಆದರೆ ಮರಣೋತ್ತರ ಪರೀಕ್ಷೆಯ ವರದಿ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಕಮಲನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಜನರು ಅಗತ್ಯವಿಲ್ಲದೆ ಬಿಸಿಲಿನಲ್ಲಿ ಹೊರಗೆ ತೆರಳದಂತೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Mon, 20 April 26

Follow Us