Bahmani Sultan Karez: ಐತಿಹಾಸಿಕ ವಾಟರ್ ಕರೇಜ್ ಬೀದರಿನಲ್ಲಿದೆ, ಆದ್ರೆ ಮುಚ್ಚಿ ಹೋಗಿದೆ! ಜಿಲ್ಲಾಡಳಿತವೂ ಕಣ್ಮುಚ್ಚಿ ಕುಳಿತಿದೆ

| Updated By: ಸಾಧು ಶ್ರೀನಾಥ್​

Updated on: Nov 27, 2023 | 1:52 PM

ಅಂಡರ್ ಗ್ರೌಂಡ್ ಮೂಲಕ ನೀರು ಸರಬರಾಜು ಮಾಡುವ ಏಶಿಯಾ ಖಂಡದಲ್ಲಿಯೇ ಏಕೈಕ ಐತಿಹಾಸಿಕ ವಾಟರ್ ಕರೇಜ್ ಅದು. ಶತಮಾನಗಳಿಂದ ಮಾಯವಾಗಿದ್ದ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದ್ದ ಅದರ ಉತ್ಖನನ ನಡೆಸಲು ಜಿಲ್ಲಾಡಳಿತ ಮುಂದಾಯಿತು. ಆದರೆ ಹೂಳು ತೆಗೆಸುವ ಕೆಲಸ ಅರ್ಧಕ್ಕೆ ನಿಲ್ಲಿಸಿ, ಲಕ್ಷಾಂತರ ರೂಪಾಯಿ ಹಣ ಪೋಲು ಮಾಡಲಾಗಿದೆ.

Bahmani Sultan Karez: ಐತಿಹಾಸಿಕ ವಾಟರ್ ಕರೇಜ್ ಬೀದರಿನಲ್ಲಿದೆ, ಆದ್ರೆ ಮುಚ್ಚಿ ಹೋಗಿದೆ! ಜಿಲ್ಲಾಡಳಿತವೂ ಕಣ್ಮುಚ್ಚಿ ಕುಳಿತಿದೆ
ಐತಿಹಾಸಿಕ ವಾಟರ್ ಕರೇಜ್ ಬೀದರಿನಲ್ಲಿದೆ
Follow us on

ಐದು ವರ್ಷದ ಹಿಂದೆ ಅಲ್ಲಿ ಜಲಮಾರ್ಗವೊಂದು ಆ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇದರ ಮಹತ್ವವನ್ನರಿತ ಜಿಲ್ಲಾಡಳಿತ ಈ ಜಲಮಾರ್ಗದ ಕರೇಜ್ (ಭೂಗರ್ಭ ಕಾಲುವೆಗಳ ಮೂಲಕ ನೀರಾವರಿ ವ್ಯವಸ್ಥೆ) ಇತಿಹಾಸವನ್ನ ಪ್ರಪಂಚಕ್ಕೆ ತಿಳಿಸಲು ಅದರ ಸ್ವಚ್ಚತೆಗೆ ಮುಂದಾಯಿತು. ಕರೇಜ್ ( Karez -a system of irrigation by underground tunnels) ನಲ್ಲಿ ತುಂಬಿಕೊಂಡಿದ್ದ ಮಣ್ಣು ತೆಗೆಸಲು ಜಿಲ್ಲಾಡಳಿತ (Bidar) ಕೊಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿ ಕಾಮಗಾರಿ ನಡೆಸಿತಾದರೂ, ಅರ್ಧಕ್ಕೆ ಕೈ ಬಿಟ್ಟಿದ್ದು, ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಷವಾಗಿದೆ.

ಶತಮಾನಗಳಿಂದ ಮಾಯವಾಗಿದ್ದ ವಾಟರ್ ಕರೇಜ್ ಗೆ ಮೂರು ವರ್ಷದ ಹಿಂದೆ ಮರು ಜೀವ… ಉತ್ಖನನ ನಡೆಸಿ ಮೂರು ಕಿಲೋ ಮೀಟರ್ ಸುರಂಗ ಮಾರ್ಗದ ಮಣ್ಣು ತೆಗೆಸಿದ ಜಿಲ್ಲಾಡಳಿತ… ಆದರೆ ಹೂಳು ತೆಗೆಸುವ ಕೆಲಸ ಅರ್ಧಕ್ಕೆ ನಿಲ್ಲಿಸಿ, ಲಕ್ಷಾಂತರ ರೂಪಾಯಿ ಹಣ ಪೋಲು… ಅಂಡರ್ ಗ್ರೌಂಡ್ ಮೂಲಕ ನೀರು ಸರಬರಾಜು ಮಾಡುವ ಏಶಿಯಾ ಖಂಡದಲ್ಲಿಯೇ ಏಕೈಕ ಐತಿಹಾಸಿಕ ವಾಟರ್ ಕರೇಜ್… ಹೌದು ಅದು ಆರು ಶತಮಾನಗಳ ಹಿಂದೆ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿದ (irrigation, drinking water) ವಾಟರ್ ಕರೇಜ್..

ಅಂದು ಇದೇ ವಾಟರ್ ಕರೇಜನ ಶುದ್ಧ ಕುಡಿಯುವ ನೀರು ಇಡೀ ಬೀದರ್ ನಗರದ ಜನರ ದಾಹ ಇಂಗಿಸುತ್ತಿತ್ತು. ಬೀದರ್ ನಗರದ ಸುತ್ತಮುತ್ತಲಿರುವ ಹತ್ತಾರು ಕೆರೆಗಳಿಗೆ, ಸಾವಿರಾರು ಬಾವಿಗಳಿಗೆ ಜಲಮೂಲವನ್ನ ಹೆಚ್ಚುವಂತೆ ಮಾಡಿದ್ದು ಇದೇ ವಾಟರ್ ಕರೇಜ. ಆದರೆ ಕಾಲ ಕಳೆದಂತೆ ವಾಟರ್ ಕರೇಜ ನಿರ್ವಹಣೆ ಇಲ್ಲದೆ ಸುರಂಗ ಮಾರ್ಗದಲ್ಲಿ ಮಣ್ಣು ತುಂಬಿಕೊಂಡು 2 ಶತಮಾನದಿಂದ ಮುಚ್ಚಲ್ಪಟ್ಟಿತ್ತು.

ಆದರೇ ಬೀದರ್ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದ, ದಿವಂಗತ ಅನೂರಾಗ್ ತಿವಾರಿ ಅವರು ವಾಟರ್ ಕರೇಜಾದ ಮಣ್ಣು ತೆಗೆಸುವ ಕೆಲಸಕ್ಕೆ ಚಾಲನೇ ನೀಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಮಾರು 3 ಕಿಲೋ ಮೀಟರ್ ಜಲಮಾರ್ಗ ಸ್ವಚ್ಚಗೊಳಿಸಿದರು. ಜಲಮಾರ್ಗದೊಳಗಿನ ಹತ್ತಾರು ಬಾವಿಗಳನ್ನ ಮಣ್ಣು ತೆಗೆಸಿ ಅದರಲ್ಲಿ ನೀರು ಬರುವಂತೆ ಮಾಡಿದರು.

ಈ ಜಲಮಾರ್ಗ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಹತ್ತಾರು ಜನರು, ಮಠಾಧೀಶರು ರಾಜಕಾರಣಿಗಳು, ವಿದೇಶಿ ಪ್ರಜೆಗಳು ಇಲ್ಲಿಗೆ ಬಂದು ಈ ವಾಟರ್ ಕರೇಜ್ ನೋಡಿ ಅಶ್ಚರ್ಯದಿಂದ ಪೊಟೋ ಕ್ಲಿಕ್ಕಿಸಿಕೊಂಡು ಹೋಗಿದ್ದರು. ಆದರೇ ಅಂದು ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಅನುರಾಗ್ ತಿವಾರಿ ಬೀದರ್ ನಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿದಂತೆ ಈ ಕೆಲಸಕ್ಕೆ ಬ್ರೇಕ್ ಬಿದ್ದು ಐದು ವರ್ಷಗಳೆ ಉರುಳಿ ಹೋಗಿವೆ. ಆದರೆ ಅದರ ಕಾಮಗಾರಿಯನ್ನ ಮಾತ್ರ ಇಂದಿಗೂ ಆರಂಭಿಸಿಲ್ಲ, ಮೊನ್ನೇ ಎರಡು ವಾರದ ಹಿಂದೆ ಬೀದರ್ ಜಿಲ್ಲೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಬಂದು ಈ ಐತಿಹಾಸಿಕ ವಾಟರ್ ಕರೇಜ್ ಗೆ ಭೇಟಿ ಕೊಟ್ಟು ಇದರ ಮಹತ್ವದ ಇತಿಹಾಸವನ್ನ ನೋಡಿ ಬೆರಗಾದರು. ಆದಷ್ಟು ಬೇಗ ವಾಟರ್ ಕರೇಜ್ ಕಾಮಗಾರಿ ಆರಂಭಿಸಿ ಹೂಳು ತೆಗೆಸಿ ಇದನ್ನ ಪ್ರವಾಸಿ ತಾಣವನ್ನಾಗಿ ಮಾಡುವ ವಾಗ್ದಾನ ಮಾಡಿದರು.

ಈ ವಾಟರ್ ಕರೇಜ್ ದ ಇತಿಹಾಸ ಕೆದಕಿದರೇ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅಂದರೆ 14 ನೇಯ ಶತಮಾನದ ವಾಟರ್ ಕರೇಜ ಕಳೆದ 5 ವರ್ಷದ ಹಿಂದೆ ಪತ್ತೆಯಾಗಿತ್ತು. ಇಲ್ಲಿ ಪತ್ತೆಯಾದ ಸುರಂಗ ಮಾರ್ಗ ಏನಿರಬಹುದೆಂದು ಇತಿಹಾಸಕಾರಿಂದ ಪರೀಲನೆ ನಡೆಸಿದಾಗ ಬೆಳಕಿಗೆ ಬಂದಿದ್ದು ಇದು ವಾಟರ್ ಕರೇಜ ಅಂತಾ. ಬಹುಮನಿ ಸುಲ್ತಾನರ ಕಾಲದಲ್ಲಿ ಬೀದರ್ ಜನರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ವಿಶಿಷ್ಟ ತಂತ್ರಜ್ಞಾನವನ್ನ ಬಳಿಸಿ ನೀರಿನ ಝರಿಗಳು, ಅಂತರ್ಜಲದ ಮೂಲಗಳನ್ನ ಸೂರಂಗದೊಳಗೆ ಹರಿಸಿ ಸುರಂಗದೊಳಗೆ ನೀರು ಬರುವಂತೆ ಮಾಡೋದು – ಇದೊಂದು ವಿಶಿಷ್ಟ ತಂತ್ರಜ್ಞಾನ.

ಕಳೆದ 15ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಬಹಮನಿ ಸುಲ್ತಾನರ (bahmani sultan) ಕಾಲದಲ್ಲಿ(1387-1518) ಅವಧಿಯಲ್ಲಿ ಬೀದರ್ ನ ನೌಬಾದ್ ಬಳಿ ಸುರಂಗ ಮಾರ್ಗ ನಿರ್ಮಿಸಲಾಗಿತ್ತು. ಬರೋಬ್ಬರಿ 10 ಕಿಲೋ ಮೀಟರ್ ಉದ್ದವಿರುವ ಈ ಸುರಂಗ ಮಾರ್ಗ ಕಾಲಾಂತರದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಅಷ್ಟೆ ಅಲ್ಲದೆ ಸುರಂಗ ಮಾರ್ಗ ಮಧ್ಯೆ ಮಣ್ಣು ತುಂಬಿಕೊಂಡು ಮುಚ್ಚಲ್ಪಟ್ಟಿತ್ತು.

ಯಾವುದೆ ಮೋಟರ್ ಇಲ್ಲದೆ, ವಿದ್ಯುತ್ ಇಲ್ಲದೆ, ಬೀದರ್ ನಗರದ ಕೋಟೆಯವರೆಗೆ ಸರಾಗವಾಗಿ ಸುರಂಗ ಮಾರ್ಗದ ಮುಖಾಂತರ ಅಂದು ನೀರನ್ನ ಹರಿಸಲಾಗುತ್ತಿತ್ತು, ಅದೂ ನಿರಂತರವಾಗಿ..! ಆದ್ರೆ ಇದರ ಬಗ್ಗೆ ಕಾಲಾಂತರದಲ್ಲಿ ಮಾಹಿತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಂಪೂರ್ಣ ಹಾಳಾಗಿ ಈ ರೀತಿ ಒಂದು ಕರೇಜ್ ಬೀದರ್ ನಗರದಲ್ಲಿ ಇದೆ ಅನ್ನೋದೆ ಜನರು ಮರೆತಿದ್ದರು.

ಅದನ್ನ ಬೆಳಕಿಗೆ ತಂದವರೆ ಅಂದು ಜಿಲ್ಲಾಧಿಕಾರಿಗಳಾಗಿದ್ದ ಪಿ.ಸಿ. ಜಾಫರ್ ಹಾಗೂ ದಿವಂಗತ ಅನುರಾಗ್ ತಿವಾರಿ. ಇಂದಿಗೂ ವಿಶ್ವದ 38 ದೇಶದಲ್ಲಿ ಈ ಕರೇಜ್ ವ್ಯವಸ್ಥೆ ಜಾರಿಯಲ್ಲಿದೆ. ವಿಶೇಷವಾಗಿ ಬಲೂಚಿಸ್ತಾನ, ಇರಾನ್ ನಲ್ಲಿ ಸಾವಿರಾರು ಕರೇಜ್ (ಸುರಂಗ ಮಾರ್ಗ) ಗಳಿವೆ. ಅಲ್ಲಿ ನೀರಿನ ಮೂಲ ಇಂದಿಗೂ ಕರೇಜ್ ಆಗಿದೆ. ಭಾರತದಲ್ಲಿ ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ಪರ್ಶಿಯಾದಿಂದ ತಂತ್ರಜ್ಞರನ್ನ ಕರೆಸಿ ಈ ಯೋಜನೆಯನ್ನ ಕೈಗೊಳ್ಳಲಾಗಿತ್ತು.

ಇಂತಹ ಅಪರೂಪದ ವಾಟರ್ ಕರೇಜ್ ನಮ್ಮ ಕರ್ನಾಟದಲ್ಲಿ ಬೀದರ್ ಜಿಲ್ಲೆಯಲ್ಲಿರುವುದು ನಮ್ಮ ಹೆಮ್ಮೆಯಾಗಿದೆ. ಈ ಕರೇಜ್ ಮರುಜೀವ ಪಡೆದರೇ ಪ್ರವಾಸಿಗರನ್ನ ಕೈ ಬೀಸಿ ಕರೆಯುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯ ಪ್ರವಾಸ್ಯೋದ್ಯಮ ಅಭಿವೃದ್ದಿಗೆ ಇದು ಆಶಾಕಿರಣವಾಗಲಿದೆ. ಅಷ್ಟೆ ಅಲ್ಲದೆ ದೇಶ ವಿದೇಶದಿಂದ ಪ್ರವಾಸಿಗರನ್ನ ಸೆಳೆಯುವುವುದರಲ್ಲೂ ತನ್ನದೇ ಆದ ಮಹತ್ತರ ಪಾತ್ರ ವಹಿಸಲಿದೆ. ಬಂದ್ ಆಗಿರುವ ಕಾಮಗಾರಿಯನ್ನ ಆರಂಭಿಸಿ ಒಂದು ಪ್ರವಾಸಿ ತಾಣವನ್ನಾಗಿ ಮಾಡಿ ಎಂದು ಇಲ್ಲಿನ ಜನರು ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ವಿನಂತಿಸುತ್ತಿದ್ದಾರೆ.

ಜಿಲ್ಲಾಡಳಿತದ ಪ್ರಯತ್ನದಿಂದಾಗಿ ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಿಹೋಗಿದ್ದ ಈ ಕರೇಜ್ ಗೆ ಮರುಜೀವ ನೀಡುವ ಕೆಲಸವನ್ನ ಅನುರಾಗ್ ತಿವಾರಿ ಮಾಡಿದ್ದರು. ಆದರೇ ಈಗ ಕರೇಜ್ ಮಣ್ಣು ತೆಗೆಯುವ ಕೆಲಸ ಸಂಪೂರ್ಣವಾಗಿ ನಿಂತೂ ಹೋಗಿದೆ. 3 ಕಿಲೋ ಮೀಟರ್ ಜಲಮಾರ್ಗದಲ್ಲಿರುವ ಮಣ್ಣು ಕ್ಲೀನ್ ಮಾಡಿದ್ದರಿಂದ ಈಗ ಅಲ್ಲಿ ನೀರು ಹರಿಯುತ್ತಿದೆ. ಹತ್ತಾರು ಬಾವಿಯಲ್ಲಿ ನೀರು ತುಂಬಿಕೊಂಡಿದೆ. ಆದರೆ ಇನ್ನುಳಿದ ಕರೇಜ್ ದಲ್ಲಿರುವ ಮಣ್ಣು ತೆಗೆದು ಉತ್ತಮ ಪ್ರವಾಸಿ ತಾಣ ಮಾಡಬೇಕಾಗಿದೆ ಎಂದು ಇಲ್ಲಿನ ಜನರ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Mon, 27 November 23