ಬೀದರ್, ನವೆಂಬರ್ 24: ಸರಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಬೇಕು. ಅವರ ಹಸಿವು ನಿಗಬೇಕು. ಜೊತೆಗೆ ಮಕ್ಕಳು ಶಾಲೆಗೆ ಬರಬೇಕು ಅನ್ನೋ ಉದ್ದೇಶದಿಂದ ರಾಜ್ಯ ಸರಕಾರ 2002-03 ರಲ್ಲಿ ರಾಜ್ಯಾದ್ಯಂತ ಮಧ್ಯಾಹ್ನ ಬಿಸಿ ಊಟದ ಯೋಜನೆ (Midday Meals Scheme) ಯನ್ನ ಜಾರಿಗೆ ತಂದಿದೆ. ಆದರೆ ಕೆಳೆದ ನಾಲ್ಕೈದು ತಿಂಗಳಿಂದ ಬಿಸಿ ಊಟದಲ್ಲಿ ಬಳಿಸಿದ ತರಕಾರಿ ಹಾಗೂ ಗ್ಯಾಸ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ತೊಂದರೆಗೆ ಸಿಲಿಕಿದ್ದಾರೆ. ತಮ್ಮ ಸ್ವಂತ ಹಣವನ್ನ ಖರ್ಚು ಮಾಡಿ ಮಕ್ಕಳ ಬಿಸಿ ಊಟಕ್ಕೆ ಬೇಕಾದ ತರಕಾರಿ, ಗ್ಯಾಸ್ ತಂದು ಅಡುಗೆ ಮಾಡಿ ಬಡಿಸುತ್ತಿದ್ದಾರೆ.
ಶಾಲಾ ಮಕ್ಕಳ ಬೆಳೆವಣಿಗೆಗೆ ಪೂರವಾದಂತ ಪೌಷ್ಠಿಕ ಆಹಾರ ಒದಗಿಸುವ ಊಟದಲ್ಲಿ ತೊಗರಿ ಬೆಳೆ, ಎಲ್ಲಾ ಬಗೆಯ ತರಕಾರಿ, ಹಾಲು, ಹಣ್ಣು, ಮೊಟ್ಟೆ ಕಡಲೇ ಬೆಳೆಯನ್ನೊಳಗೊಂಡ ಆಹಾವನ್ನ ಸಿದ್ದ ಪಡಿಸಿ ಮಕ್ಕಳಿಗೆ ಕಳೆದೊಂದು ದಶಕದಿಂದ ಕೊಡಲಾಗುತ್ತಿದೆ. ತರಕಾರಿ, ಬಾಳೆ ಹಣ್ಣು ಬೇಕಾದ ಕೆಲಸವು ಪದಾರ್ಥವನ್ನ ಮುಖ್ಯಶಿಕ್ಷಕರ ಬ್ಯಾಂಕ್ ಖಾತೆಗೆ ಹಾಕಿ ಆ ಹಣವನ್ನ ತರಕಾರಿ ಗ್ಯಾಸ್ ಹೀಗೆ ನಾನಾ ವಸ್ತುಗಳನ್ನ ಕೊಂಡುಕೊಳ್ಳಲಾಗಿತ್ತಿದೆ.
ಇದನ್ನೂ ಓದಿ: ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ! ಏನಿದರ ವಿಶೇಷ?
ಬೀದರ್ ತಾಲ್ಲೂಕಿನಲ್ಲಿ ಒಟ್ಟು 450 ಶಾಲೆಗಳಿವೆ. ಸರ್ಕಾರಿ, ಅನುದಾನ ಸಹಿತ, ಪ್ರೌಢಶಾಲೆಗಳು ಇದರಲ್ಲಿ ಸೇರಿವೆ. ಈ ಪೈಕಿ 294 ಕಡೆಗಳಲ್ಲಿ ಅಡುಗೆ ಕೇಂದ್ರಗಳಿವೆ. ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ರೇಷನ್, ಹಾಲಿನ ಪುಡಿ ನೇರವಾಗಿ ಸರ್ಕಾರದಿಂದ ಶಾಲೆಗಳಿಗೆ ರವಾನೆಯಾಗುತ್ತದೆ. ಆದರೆ ತರಕಾರಿ, ಮೊಟ್ಟೆ, ಸಕ್ಕರೆ ಸೇರಿದಂತೆ ಇತರೆ ವೆಚ್ಚಗಳನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರೇ ಭರಿಸುತ್ತಾರೆ. ಅವರಿಗೆ ಸಕಾಲಕ್ಕೆ ಹಣ ಮರು ಪಾವತಿ ಮಾಡದ ಕಾರಣ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಇದುವರೆಗೆ ಹಣವೇ ಮರು ಪಾವತಿ ಮಾಡಿಲ್ಲ. ಹೀಗಾಗಿ ಆಯಾ ಶಾಲೆಯ ಮುಖ್ಯಗುರುಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ. ಸರಕಾರ ಹಣ ಕೊಟ್ಟಿಲ್ಲ ಅಂತಾ ಬಿಸಿ ಊಟವನ್ನ ಮಕ್ಕಳಿಗೆ ಕೊಡದೆ ಇರೋದಕ್ಕೆ ಸಾಧ್ಯವಿಲ್ಲ. ಸರಕಾರ ಹಣ ಕೊಡುತ್ತದೆಂದು ಕೆಲವು ಶಿಕ್ಷಕರು ಶಾಲಾ ಮಾಡಿ ಮಕ್ಕಳಿಗೆ ತರಕಾರಿ ಗ್ಯಾಸ ತಂದು ಬಿಸಿ ಊಟವನ್ನ ತಯಾರಿಸಿ ಮಕ್ಕಳ ಹೊಟ್ಟೆ ತುಂಬಿಸುತ್ತಿದದಾರೆ.
ಇದನ್ನೂ ಓದಿ: ವಿದ್ಯಾಕಾಶಿ ಧಾರವಾಡದಲ್ಲಿ ಈಗ ಹಾಸ್ಟೆಲ್ ಸಮಸ್ಯೆ: ಬಾಡಿಗೆ ಕಟ್ಟಡಗಳ ಮೊರೆಹೋದ ಜಿಲ್ಲಾಡಳಿತ
ಮುಖ್ಯಶಿಕ್ಷಕರಿಗೆ ಕುಟುಂಬದ ಜವಾಬ್ದಾರಿಗಳಿವೆ. ಅವರ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ, ಬ್ಯಾಂಕ್ ಸಾಲ ಮರು ಪಾವತಿ ಸೇರಿದಂತೆ ಇತರೆ ಖರ್ಚಿಗೆಲ್ಲ ಹಣ ಬೇಕಾಗುತ್ತದೆ. ಆಯಾ ತಿಂಗಳು ಹಣ ಮರು ಪಾವತಿ ಮಾಡಲಾಗುತ್ತದೆ ಎಂಬ ಭರವಸೆಯೊಂದಿಗೆ ಅವರು ಅವರ ಜೇಬಿನಿಂದಲೇ ಹಣ ಭರಿಸುತ್ತಿದ್ದಾರೆ. ಆದರೆ, ಸಾಕಷ್ಟು ವಿಳಂಬ ಆಗುತ್ತಿರುವುದರಿಂದ ಅವರ ಮೇಲೆ ಹೊರೆ ಬೀಳುತ್ತಿದೆ.
ಈ ವಿಷಯವನ್ನು ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಅನೇಕ ಶಿಕ್ಷಕರು ಹೇಳುತ್ತಿದ್ದಾರೆ. ಸರಕಾರ ಹಣ ಕೊಟ್ಟಿಲ್ಲ ಎಂದು ನಾವು ಸುಮ್ಮನಿಲ್ಲ ಮಕ್ಕಳಿಗೆ ಕಾಲ ಕಾಲಕ್ಕೆ ಪೌಷ್ಠಿಕ ಆಹಾರ ಕೊಡುತ್ತಿದ್ದೇವೆಂದು ಶಿಕ್ಷಕರು ಹೇಳುತ್ತಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಹಣ ಮಾವತಿ ಮಾಡಲಾಗಿದೆ ಆದರೆ ಬೀದರ್ ಜಿಲ್ಲೆಯಲ್ಲಿ ಮಾತ್ರ ಪಾವತಿ ಮಾಡಿಲ್ಲ ಇದು ಸಹಜವಾಗಿಯೇ ಶಿಕ್ಷಕರ ಅಸಮಾಧಾನ ಹೆಚ್ಚಸಿಸುವಂತೆ ಮಾಡಿದೆ. ಸರ್ಕಾರ ಶಿಕ್ಷಕರ ಪರಿಸ್ಥಿತಿ ಅರ್ಥ ಮಾಡಿಕೊಂಡು ಬಾಕಿ ಉಳಿಸಿಕೊಂಡಿರುವ ಹಣ ಮರು ಪಾವತಿಸಬೇಕು. ಪ್ರತಿ ತಿಂಗಳು ಖಾತೆಗೆ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.