AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ! ಏನಿದರ ವಿಶೇಷ?

Ghandi Grama Bidar: ಮುಧೋಳ ಗ್ರಾಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಗೊಂಡಿದ್ದಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಶ್ರಮವೂ ಇಲ್ಲಿದೆ. ಕಡತಗಳ ನಿರ್ವಹಣೆ, ಕರ ವಸೂಲಿ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ, ಸಿಸಿ ರಸ್ತೆ, ಚರಂಡಿ, ನಾಲಾ-ಕೆರೆ ಹೂಳು ತೆರವು, ಸಕಾಲಕ್ಕೆ ಕುಡಿವ ನೀರು ಪೂರೈಕೆ, ಗ್ರಾಮ ಆರೋಗ್ಯ ಯೋಜನೆ ಅಡಿ ಉಚಿತ ಆರೋಗ್ಯ ತಪಾಸಣೆ, ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಡಿಜಿಟಲ್ ಗ್ರಂಥಾಲಯ, ನಿಯಮಿತವಾಗಿ ಗ್ರಾಮ ಸಭೆ ವಾರ್ಡ್ ಸಭೆಗಳನ್ನು ನಡೆಸಿ ದೂರದೃಷ್ಟಿ ಯೋಜನೆಯನ್ನು ರೂಪಿಸಿದೆ.

ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ! ಏನಿದರ ವಿಶೇಷ?
ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ!
ಸುರೇಶ ನಾಯಕ
| Edited By: |

Updated on: Nov 11, 2023 | 2:59 PM

Share

ಬೀದರ್ ಜಿಲ್ಲೆಯಲ್ಲಿಯೇ ಆ ತಾಲೂಕು ಅತಿ ಹಿಂದೂಳಿದ ತಾಲೂಕಾಗಿದೆ. ಅದೆ ಹಿಂದೂಳಿತ ತಾಲೂಕಿನ ಮುಧೋಳ ಗ್ರಾಮಕ್ಕೆ ಈ ವರ್ಷದ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿದೆ. ಗ್ರಾಮದಲ್ಲಿನ ಸ್ವಚ್ಚತೆ, ಅಂತರ್ ಜಲ ವೃದ್ಧಿಯಿಂದಾಗಿ ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ. ಜಿಲ್ಲೆಯ ಅತಿ ಹಿಂದೂಳಿದ ತಾಲೂಕಿನ‌ ಮುಧೋಳ ಗ್ರಾಮ ಪಂಚಾಯತಿಗೆ ಒಲಿದ ಗಾಂಧಿ ಗ್ರಾಮ‌ ಪುರಸ್ಕಾರ…. ಸ್ವಚ್ಚತೆ, ಕೆರೆ ಅಭಿವೃದ್ಧಿ ಟ್ಯಾಕ್ಸ್ ಸಂಗ್ರಹ ಹೀಗೆ ಎಲ್ಲದರಲ್ಲೂ ಮುಂದಿದೆ ಈ ಪಂಚಾಯತ್… ಗ್ರಾಮ ಪಂಚಾಯತಿ ‌ಸದಶ್ಯರು ಅಧಿಕಾರಿಗಳ ಹೊಂದಾಣಿಕೆ ಕೆಲಸದಿಂದ ಸಿಕ್ಕ ಪುರಸ್ಕಾರ… ಹೌದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮುಧೋಳ ಬಿ. ಗ್ರಾಮ ಪಂಚಾಯತ್ ಗೆ 2022-23ನೇ ‘ಸಾಲಿನ ಗಾಂಧಿ ಗ್ರಾಮ ಪುರಸ್ಕಾರ’ ದೊರೆತಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3,672 ಕುಟುಂಬಗಳಿದ್ದು, 12,300 ಕಿಂತ ಹೆಚ್ಚು ಜನಸಂಖ್ಯೆ ಇದೆ. ಪ್ರತಿ ಕುಟುಂಬವು ವೈಯುಕ್ತಿಕ ಶೌಚಾಲಯ ಹೊಂದಿದೆ ಹಾಗೂ ಬಳಕೆ ಮಾಡುತ್ತಿದ್ದಾರೆ. ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಗ್ರಾಮಸಭೆ, ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು, ಅಭಿವೃದ್ಧಿ ಕಾಮಗಾರಿಗಳ ಪಾರದರ್ಶಕ, ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ, ನರೇಗಾ ಯೋಜನೆಯ ಉತ್ತಮ ಪ್ರಗತಿ, ಗ್ರಾಮ ಆರೋಗ್ಯ ಯೋಜನೆ ಅಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ,ಕಂದಾಯ ವಸೂಲಿ, ಕುಡಿಯುವ ನೀರು ಪೂರೈಕೆ, ವಸತಿ ಯೋಜನೆಗಳಲ್ಲಿ ಗ್ರಾಮ ಪಂಚಾಯಿತಿ ಉತ್ತಮ ಸಾಧನೆ ತೋರಿದೆ. ಗ್ರಾಮ ಪಂಚಾಯಿತಿ ಯೋಜನೆಗಳು, ಅಭಿವೃದ್ಧಿ ಹಾಗೂ ವ್ಯವಹಾರದ ಸಮಗ್ರ ಮಾಹಿತಿಯನ್ನು ಪಂಚತಂತ್ರದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಆನ್‌ಲೈನ್ ಮೂಲಕ ಹಣದ ವ್ಯವಹಾರ ಮಾಡಲಾಗುತ್ತದೆ. ಹೀಗಾಗಿ ನಮ್ಮ ಗ್ರಾಮ ಪಂಚಾಯತ್ ಗೆ ಈ ವರ್ಷದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ ಎಂದು ಪಿಡಿಓ ಹೇಳುತ್ತಿದ್ದಾರೆ.

ಮುಧೋಳ ಗ್ರಾಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಗೊಂಡಿದ್ದಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಶ್ರಮವೂ ಇಲ್ಲಿದೆ. ಕಡತಗಳ ನಿರ್ವಹಣೆ, ಕರ ವಸೂಲಿ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ, ಸಿಸಿ ರಸ್ತೆ, ಚರಂಡಿ, ನಾಲಾ-ಕೆರೆ ಹೂಳು ತೆರವು, ಸಕಾಲಕ್ಕೆ ಕುಡಿವ ನೀರು ಪೂರೈಕೆ, ಗ್ರಾಮ ಆರೋಗ್ಯ ಯೋಜನೆ ಅಡಿ ಉಚಿತ ಆರೋಗ್ಯ ತಪಾಸಣೆ, ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಡಿಜಿಟಲ್ ಗ್ರಂಥಾಲಯ, ನಿಯಮಿತವಾಗಿ ಗ್ರಾಮ ಸಭೆ ವಾರ್ಡ್ ಸಭೆಗಳನ್ನು ನಡೆಸಿ ದೂರದೃಷ್ಟಿ ಯೋಜನೆಯನ್ನು ರೂಪಿಸಿದೆ.

Also Read: ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?

ಇನ್ನು ಈ ಗ್ರಾಮದ ಮಹಾದೇವ ಮಂದಿರದಲ್ಲಿ ಆವರಣದಲ್ಲಿರುವ ಕೆರೆಯನ್ನ ನವೀಕರಣ ಮಾಡಲಾಗಿದೆ. ಜೊತೆಗೆ ವಾಕಿಂಗ್ ಪಾಥ್ ಮಾಡಲಾಗಿದೆ ದೇವಸ್ತಾನದಕ್ಕೆ ಬರುವ ಭಕ್ತರು ಈ ಕರೆಯಲ್ಲಿ ಕೈಕಾಲು ಮುಖ ತೊಳೆದುಕೊಂಡು ಮಹಾದೇವನ ದರ್ಶನವನ್ನ ಮಾಡುತ್ತಾರೆ. ಇದರ ಜೊತೆಗೆ ಮುಧೋಳ ಗ್ರಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರು ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಚಿಕಿತ್ಸೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಇಲ್ಲಿನ ಗಾರ್ಡ್ ನಲ್ಲಿ ಸ್ವಲ್ಪ ಹೊತ್ತು ವಿಶ್ವಾಂತಿ ಪಡೆದುಕೊಂಡು ಮನೆಗೆ ಹೋಗುತ್ತಿದ್ದಾರೆ. ಇನ್ನೂ ಗ್ರಾಮದಲ್ಲಿನ ರಸ್ತೆಗಳು, ಬಸ್ ನಿಲ್ದಾನ ಎಲ್ಲವೂ ಸ್ವಚ್ಚತೆಯಿಂದಾ ಕೂಡಿದ್ದು ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿರುವುದು ಗ್ರಾಮಸ್ಥರಿಗೆ ಇಲ್ಲಿನ ಸದಶ್ಯರಿಗೆ ಖುಸಿ ಹೆಚ್ಚಿಸುವಂತೆ ಮಾಡಿದೆ.

ಇನ್ನೂ ಬೀದರ್ ಜಿಲ್ಲೆಯಲ್ಲಿ ಸುಮಾರು ಐದು ಗ್ರಾಮ ಪಂಚಾಯತ್ ಗೆ ಈ ವರ್ಷದ ಗಾಂಧಿ ಗ್ರಾಮ ಪುರಸ್ಕಾರ್ ಸಿಕ್ಕಿದೆ. ಅದರಲ್ಲಿ ಈ ಹಿಂದುಳಿದ ತಾಲೂಕಿನ ಮುಧೊಳ ಗ್ರಾಮವು ಒಂದಾಗಿದೆ. ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಗ್ರಾಮಸ್ಥರ ಸಹಕಾರದಿಂದ ಈ ಪ್ರಶಸ್ತಿ ಸಿಕ್ಕಿರುವುದು ಗ್ರಾಮದಲ್ಲಿ ಮತ್ತಷ್ಟು ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ