Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?

Farm Ponds: ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿ ನಾಮದಾಪುರ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿಯೇ ರೈತರು ಅತಿ ಹೆಚ್ಚು ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿಕೊಂಡಿದ್ದು ಗ್ರಾಮದ ಬಹುತೇಕ ರೈತರು ತಾವು ನಿರ್ಮಾಣ ಮಾಡಿಕೊಂಡು ಕೃಷಿ ಹೊಂಡದಿಂದ ಲಾಭವನ್ನ ಪಡೆಯುತ್ತಿದ್ದಾರೆ. ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ- ಇಡೀ ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಗ್ರಾಮದ ಅಷ್ಟೂ ರೈತರು ಸೇರಿಕೊಂಡು ಏನು ಮಾಡಿದ್ದಾರೆ ನೀವೂ ನೋಡಿ...

ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?
ಮಳೆಯ ಕೊರತೆಯನ್ನ ನೀಗಿಸಿದ ಕೃಷಿ ಹೊಂಡಗಳು... ಅಂತರ್ ಜಲ ಹೆಚ್ಚಿಸಿವೆ! ಎಲ್ಲಿ?
Follow us
ಸುರೇಶ ನಾಯಕ
| Updated By: ಸಾಧು ಶ್ರೀನಾಥ್​

Updated on:Oct 31, 2023 | 3:00 PM

ಆ ಜಿಲ್ಲೆಯಲ್ಲಿ ಮಳೆ ಕಡಿಮೆ, ಬೇಸಿಗೆ ಆರಂಭವಾದರೆ ಸಾಕು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತದೆ. ಸಾವಿರ ಅಡಿಯಷ್ಟು ಬೋರ್ ವೆಲ್ ಕೊರೆಸಿದರೂ ಅಲ್ಲಿ ನೀರು ಬರೋದು ಅಪರೂಪ. ಆದರೂ ಕೂಡಾ ಆ ಗ್ರಾಮದ ರೈತರು ವರ್ಷಕ್ಕೆ ಎರಡು ಬೆಳೆಯನ್ನ ಬೆಳೆಸಿ ಸಮೃದ್ಧ ಜೀವನ ಸಾಗಿಸುತ್ತಿದ್ದಾರೆ! ಹೇಗೆ ಅಂತೀರಾ? ಈ ಸ್ಟೋರಿ ನೋಡಿ.

ಮಳೆಯ ಕೊರೆತೆಯನ್ನ ನೀಗಿಸಿದ ಕೃಷಿ ಹೊಂಡ… ಅಂತರ್ ಜಲ ಹೆಚ್ಚಿಸಿದ ಕೃಷಿ ಹೊಂಡಗಳು… ಮಳೆ ಕೈಕೊಟ್ಟಾಗ ರೈತನ ಕೈ ಹಿಡಿಯುತ್ತೆ ಕೃಷಿ ಹೊಂಡ… ಒಂದೆ ಗ್ರಾಮದಲ್ಲಿವೆ ಇನ್ನೂರಕ್ಕು ಹೆಚ್ಚು ಕೃಷಿ ಹೊಂಡಗಳು…ಈ ವರ್ಷ ಮಳೆರಾಯನ ಅವಕೃಪೆಯಿಂದಾಗಿ ಬಾವಿ ಬೋರ್ ವೆಲ್ ನಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ರೈತರು ಬೆಳೆದ ಬೆಳೆ ನೀರಿನ ಕೊರೆತೆಯಿಂದಾಗಿ ಬಾಡುತ್ತಿದ್ದು ರೈತನಿಗೆ ಆತಂಕ ಶುರುವಾಗಿದೆ. ಆದರೆ ಆಗ್ರಾಮದ ರೈತರಿಗೆ ಇದ್ಯಾವ ಸಮಸ್ಯೆಯೇ ಉದ್ಭವವಾಗಿಲ್ಲ, ಹೌದು ಗಡೀ ಜಿಲ್ಲೆ ಬೀದರ್ ಅಂದರೆ ನಮಗೆ ನೆನಪಾಗೋದು ಬರದನಾಡು ಬಿಸಿಲ ನಗರಿ ಅಂತಲೇ ಹೆಸರು ವಾಸಿ. ಈ ಜಿಲ್ಲೆಯಲ್ಲಿ ಮಳೆ ಅಷ್ಟೇನು ಆಗೋದಿಲ್ಲ, ನದಿಗಳು ಕೂಡಾ ಈ ಜಿಲ್ಲೆಯಲ್ಲಿ ಇಲ್ಲಾ ಹೀಗಾಗಿ ಪ್ರತಿ ಬೆಸಿಗೆಯಲ್ಲಿಯೂ ಕೂಡಾ ಇಲ್ಲಿನ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಾರೆ.

ಕಿಲೋಮೀಟರ್ ಗಟ್ಟಲೇ ಅಲೆದಾಡಿ ಕುಡಿಯುವ ನೀರು ತರುವ ಸ್ಥಿತಿ ಇಲ್ಲಿನ ಜನರದ್ದು ಹತ್ತಾರು ವರ್ಷದಿಂದ ಈ ಜಿಲ್ಲೆಯ ಜನರು ಇದೆ ರೀತಿಯ ಸಮಸ್ಯೆಯನ್ನ ಇಲ್ಲಿನ ಜನರು ರೈತರು ಅನುಭವಿಸುತ್ತಾರೆ. ಮಳೆ ಕೊರತೆಯಿಂದಾಗಿ ಬಾವಿ ಹಾಗೂ ಬೊರ್ ವೆಲ್ ನಲ್ಲಿ ನೀರು ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ನೀರಿನ ಸಮಸ್ಯೆಯಿಂದ ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು, ತೊಗರಿ ತೋಟಗಾರಿಕೆ ಬೆಳೆಗಳು ಬಾಡುತ್ತಿವೆ.

ಆದರೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿ ನಾಮದಾಪುರ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿಯೇ ರೈತರು ಅತಿ ಹೆಚ್ಚು ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿಕೊಂಡಿದ್ದು ಗ್ರಾಮದ ಬಹುತೇಕ ರೈತರು ತಾವು ನಿರ್ಮಾಣ ಮಾಡಿಕೊಂಡು ಕೃಷಿ ಹೊಂಡದಿಂದ ಲಾಭವನ್ನ ಪಡೆಯುತ್ತಿದ್ದಾರೆ. ಇನ್ನು ಈ ಗ್ರಾಮದಲ್ಲಿ ಯಾವುದೆ ಬೋರ್ ವೆಲ್ ಕೊರೆಯಿಸಿದರು, ಒಂದರಿಂದ ಎರಡು ಇಂಚು ನೀರು ಬಂದರೆ ಅದೆ ಹೆಚ್ಚು, ಹೀಗಾಗಿ ಕೃಷಿ ಹೊಂಡದಲ್ಲಿ ನೀರು ಸಂಗ್ರಹ ಮಾಡಿಕೊಂಡು ಅದೆ ನೀರನ್ನ ಹೊಲಗಳಿಗೆ ಹಾಯಿಸುವುದರಿಂದ ನೀರಿನ ಕೊರತೆ ರೈತನ್ನ ಕಾಡುತ್ತಿಲ್ಲ ಹೀಗಾಗಿ ಕಡಿಮೆ ನೀರಿನಲ್ಲಿಯೇ ವರ್ಷಕ್ಕೆ ಎರಡ್ಮೂರು ಬೆಳೆಯನ್ನ ಬೆಳೆಸುತ್ತಿದ್ದಾರೆ. ನಮಗೆ ಕೃಷಿ ಹೊಂಡ ಅನುಕೂಲವಾಗಿದ್ದು ಉತ್ತಮ ಬೆಳೆಯನ್ನ ಬೆಳೆಸುತ್ತಿದ್ದೆವೆಂದು ಹೇಳುತ್ತಿದ್ದಾರೆ.

ನಾಮದಾಪುರ ಗ್ರಾಮದಲ್ಲಿ ಇಡೀ ಜಿಲ್ಲೆಯಲ್ಲಿಯೇ ರೈತರು ಅತಿ ಹೆಚ್ಚು ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿಕೊಂಡಿದ್ದು ಗ್ರಾಮದ ಬಹುತೇಕ ರೈತರು ತಾವು ನಿರ್ಮಾಣ ಮಾಡಿಕೊಂಡು ಕೃಷಿ ಹೊಂಡದಿಂದ ಲಾಭವನ್ನ ಪಡೆಯುತ್ತಿದ್ದು ಸುಂದರವಾದ ಬದುಕನ್ನ ಕಟ್ಟಿಕೊಂಡಿದ್ದಾರೆ. ಕೃಷಿ ಭಾಗ್ಯ ಯೋಜನೆ ಅಡಿ ಹಾಗೂ ಸ್ವಂತ ಹಣದಿಂದ ಗ್ರಾಮದ ಬಹುತೇಕ ರೈತರು ಕೃಷಿ ಹೊಂಡಗಳನ್ನ ನಿರ್ಮಾಣಮಾಡಿಕೊಂಡಿದ್ದು ಮಳೆಯಾಗದೆ ಇದ್ದರೆ ಅಥವಾ ತಮ್ಮ ಬಾವಿ ಬೋರ್ ವೆಲ್ ನಲ್ಲಿ ನೀರು ಕಡಿಮೆಯಾದರೆ ಜೊತೆಗೆ ಕರೆಂಟ್ ನ ಸಮಸ್ಯೆಯಿಂದಾ ಬೆಳೆಗೆ ನೀರು ಬಿಡಲು ಸಾಧ್ಯವಾಗದೆ ಹೋದರೆ ಕೃಷಿ ಹೊಂಡದಲ್ಲಿನ ನೀರನ್ನ ಉಪಯೋಗಿಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಈ ಕೃಷಿ ಹೊಂಡಗಳು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಇದು ವರದಾನವಾಗಿದ್ದು ಇದರಿಂದ ಆದಾಯವೂ ವೃದ್ಧಿಯಾಗುತ್ತಿದೆ. ಹೀಗಾಗಿ ನೀರಾವರಿ ಮಾಡಿಕೊಂಡು ಈ ಗ್ರಾಮದ ರೈತರು ಸುಂದರವಾದ ಬದುಕನ್ನ ಕಟ್ಟಿಕೊಂಡಿದ್ದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಇನ್ನೂ ಕೃಷಿ ಹೊಂಡದಿಂದ ಹತ್ತಾರು ಪ್ರಯೋಜನಗಳಿವೆ ರೈತರು ತಮ್ಮ ಹೊಲದಲ್ಲಿ ಯಾವುದೆ ಬೆಳೆಯನ್ನ ಬೆಳೆದರೆ ಆ ಬೆಳೆಗೆ ನೀರಿನ ಸಮಸ್ಯೆಯಾದಾಗ ಇದೆ ಕೃಷಿ ಹೊಂಡದಲ್ಲಿನ ನೀರನ್ನ ಬಳಸಿಕೊಂಡು ಒಣಗಿ ಹೋಗುವ ಬೆಳೆಯನ್ನ ಕಾಪಾಡಬಹುದು. ಜೊತೆಗೆ ಕೃಷಿ ಹೊಂಡದಲ್ಲಿನ ನೀರು ಭೂಮಿಯಲ್ಲಿ ಇಂಗಿ ಅಂತರ್ ಜಲ ವೃದ್ಧಿಗೂ ಕೂಡಾ ಕಾರಣವಾಗುತ್ತದೆಂದು ಇಲ್ಲಿನ ರೈತರು ಹೇಳುತ್ತಿದ್ದಾರೆ. ಇನ್ನು ಬೀದರ್ ಜಿಲ್ಲೆಯಲ್ಲಿ 9 ಸಾವಿರ ಕೃಷಿ ಹೊಂಡಗಳನ್ನ ನಿರ್ಮಾಣ ಮಾಡಿದ್ದೇವೆ.

ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡ ರೈತರಿಗೆ ಪೆಟ್ರೋಲ್ ಚಾಲಿತ ನೀರು ಎತ್ತುವ ಯಂತ್ರ, ಅದಕ್ಕೆ ಬೇಕಾದ ಪೈಪ್ ಗಳನ್ನೂ ಕೂಡಾ ಶೇಕಡಾ 90 ರ ಸಬ್ಸಿಡಿಯಲ್ಲಿ ರೈತರಿಗೆ ಕೊಡಲಾಗುತ್ತದೆ. ನಾಲ್ಕೈದು ರೈತರು ಒಟ್ಟಾಗಿ ಬಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಭೇಟಿಯಾದರೆ ನಾಲ್ಕು ಜನ ರೈತರಿಗೆ ಉಚಿತವಾಗಿ ನೀರು ಎತ್ತುವ ಯಂತ್ರವನ್ನ ಕೊಡಲಾಗುತ್ತದೆ ಎಂದು ಕೃಷಿ ಇಲಾಕೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಹೊಂಡಗಳನ್ನ ಇಲ್ಲಿ ರೈತರ ಹೊಲಗಳಲ್ಲಿ ನಿರ್ಮಾಣ ಮಾಡಿ ಕೊಡಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಜೊತೆಗೆ ಅಂತರ್ ಜಲ ವೃದ್ಧಿಗೂ ಇವು ಸಹಕಾರಿಯಾಗುತ್ತವೆ ಎನ್ನುತ್ತಾರೆ ರಂತೇಂದ್ರನಾಂಥ್ ಸೂಗೂರು, ಜಂಟಿ ಕೃಷಿ ನಿರ್ದೇಶಕರು.

ಕೃಷಿ ಹೊಂಡಗಳು ರೈತರ ಪಾಲಿನ ಕಾಮಧೇನುವಂತಾಗಿದೆ. ನೀರಿಲ್ಲದೆ ಬೆಳೆ ಒಣಗುವ ಹಂತಕ್ಕೆ ಬಂದಾಗ ಕೃಷಿ ಹೊಂಡಗಳು ರೈತರ ಕೈ ಹಿಡಿಯುತ್ತವೆ. ಜೊತೆಗೆ ಇದರಿಂದ ನೀರಿನ ಅಂತರ್ ಜಲ ಮಟ್ಟವೂ ಕೂಡಾ ಜಾಸ್ತಿಯಾಗಿ ನೀರಿಲ್ಲದೆ ಬತ್ತಿಹೋಗಿರುವ ಅದೆಷ್ಟೋ ಬೋರ್ ವೆಲ್ ಗಳಲ್ಲಿ ಮತ್ತೆ ನೀರು ಬರುವಂತೆ ಮಾಡಿದೆ. ಇದು ಸಹಜವಾಗಿಯೇ ರೈತರ ಮೊಗದಲ್ಲಿ ನಗು ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:57 pm, Tue, 31 October 23

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್