ದೀಪಾವಳಿ: ಯಶವಂತಪುರ-ಬೀದರ್ ಮಧ್ಯೆ ವಿಶೇಷ ರೈಲು; ಇಲ್ಲಿದೆ ದಿನಾಂಕ, ಸಮಯ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ, ಯಶವಂತಪುರ ಮತ್ತು ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.

ಬೆಂಗಳೂರು ನ.12: ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ (North Western Railway), ಯಶವಂತಪುರ ಮತ್ತು ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ.
ರೈಲು ಸಂಖ್ಯೆ 06507: ಯಶವಂತಪುರ-ಬೀದರ್ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 13 ರಂದು ರಾತ್ರಿ 11:15 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 12:15 ಕ್ಕೆ ಬೀದರ್ ತಲುಪಲಿದೆ. ರೈಲು ಮಾರ್ಗ: ಯಲಹಂಕ, ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್ ಕಲಬುರಗಿ ಕಮಲಾಪುರ ಮತ್ತು ಹುಮನಾಬಾದ್‌ನಲ್ಲಿ ರೈಲು ನಿಲುಗಡೆಯಾಗಲಿದೆ.
ಇದನ್ನೂ ಓದಿ: ಮಂಗಳೂರು-ಮಂಡ್ಯ ಮಧ್ಯೆ ವಿಶೇಷ ರೈಲು; ಇಲ್ಲಿದೆ ದಿನಾಂಕ, ಸಮಯ
ರೈಲು ಸಂಖ್ಯೆ 06508: ಬೀದರ್-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ನ.14 ರಂದು ಮಧ್ಯಾಹ್ನ 02:30 ಕ್ಕೆ ಬೀದರ್‌ನಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದೆ. ರೈಲು ಮಾರ್ಗ: ಹುಮನಾಬಾದ್, ಕಮಲಾಪುರ, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಗೌರಿಬಿದನೂರು ಮತ್ತು ಯಲಹಂಕದಲ್ಲಿ ನಿಲ್ಲುತ್ತದೆ.
ರೈಲು 1-ಎಸಿ ಟೂ ಟೈರ್ ಕೋಚ್, 3-ಎಸಿ ತ್ರೀ ಟೈರ್ ಕೋಚ್‌ಗಳು, 6-ಸ್ಲೀಪರ್ ಕ್ಲಾಸ್ ಕೋಚ್‌ಗಳು, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2-ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿದಂತೆ 16 ಕೋಚ್‌ಗಳನ್ನು ಒಳಗೊಂಡಿದೆ. ಈ ರೈಲುಗಳಲ್ಲಿ ಲಿನಿನ್ ಮತ್ತು ಬೆಡ್ರೋಲ್ಅನ್ನು ಒದಗಿಸಲಾಗುವುದಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ