ಗದಗ: ದೀಪಾವಳಿ ಹಬ್ಬಕ್ಕೆಂದು ಬೆಳೆದ ಹೂವು; ಗಾಳಿ, ಮಳೆಗೆ ಸಂಪೂರ್ಣ ನಾಶ

ಇನ್ನೇನು ಹೂವುಗಳನ್ನು ಕಟಾವು ಮಾಡಿ, ಮಾರಾಟ ಮಾಡಬೇಕು ಎನ್ನುವ ಸಮಯದಲ್ಲಿ ಹೂವಿನ ಗಿಡಗಳು ನೆಲಕಚ್ಚಿವೆ. ಹೀಗಾಗಿ ನಮಗೆ ಬಹಳ ಹಾನಿಯಾಗಿದೆ. ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಒತ್ತಾಯ ಮಾಡಿದ್ದಾರೆ. ಇಷ್ಟು ದಿನ ಮಳೆ ಇಲ್ಲದೇ ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಆದ್ರೆ, ಈಗ ಸುರಿದ ಮಳೆ ಹೂವು ಬೆಳೆಗಾರರನ್ನು ಕಂಗಾಲಾಗಿಸಿದೆ.

ಗದಗ: ದೀಪಾವಳಿ ಹಬ್ಬಕ್ಕೆಂದು ಬೆಳೆದ ಹೂವು; ಗಾಳಿ, ಮಳೆಗೆ ಸಂಪೂರ್ಣ ನಾಶ
ಮಳೆ ಗಾಳಿಗೆ ನೆಲಕಚ್ಚಿದ ಹೂವು ಬೆಳೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 11, 2023 | 6:09 PM

ಗದಗ, ನ.11: ಸುಂದರ ಹೂವಿನ ತೋಟ ಸಂಪೂರ್ಣ ನೆಲಕಚ್ಚಿದೆ. ಜಮೀನಿನಲ್ಲಿ ಹೂವಿನ ಹಾಸಿಗೆ ಹಾಸಿದಂತಾಗಿದೆ. ದೀಪಾವಳಿ(Deepavali) ಹಬ್ಬದಲ್ಲಿ ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣದೇವ ಶಾಕ್ ನೀಡಿದ್ದಾನೆ. ಹೌದು, ಗದಗ(Gadag) ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಹೂವಿನ ತೋಟಗಳು ಸಂಪೂರ್ಣ ಹಾನಿಯಾಗಿವೆ. ಸಾಲ ಸೂಲ ಮಾಡಿ ಬೆಳೆದ ಹೂವು(Flower), ರೈತರ ಕಣ್ಮುಂದೆ ನಾಶವಾಗಿದ್ದು, ನೋಡಿ ಗೋಳಾಡುತ್ತಿದ್ದಾರೆ. ಹೀಗಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಅಂದಹಾಗೇ ಗದಗ ತಾಲೂಕಿನ ಲಕ್ಕುಂಡಿ, ಸಂಭಾಪುರ, ಕಂದಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಅತೀ ಹೆಚ್ಚು ಹೂವು ಬೆಳೆಯಲಾಗುತ್ತದೆ. ಅದರಲ್ಲೂ ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿ ಹಬ್ಬಕ್ಕೆಂದು ಹೂವಿನ ತೋಟಗಳು ಮಾಡಿರುತ್ತಾರೆ. ಪ್ರತಿ ವರ್ಷ ದೀಪಾವಳಿ ಹಬ್ಬಕ್ಕೆ ರೈತರು ಹೂವು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಆದ್ರೆ, ಎರಡು ದಿನಗಳಿಂದ ಗಾಳಿ ಹಾಗೂ ಮಳೆಗೆ ಸೇವಂತಿ ಹೂವಿನ ತೋಟಗಳು ನಾಶವಾಗಿವೆ.

ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ

ಇನ್ನೇನು ಹೂವುಗಳನ್ನು ಕಟಾವು ಮಾಡಿ, ಮಾರಾಟ ಮಾಡಬೇಕು ಎನ್ನುವ ಸಮಯದಲ್ಲಿ ಹೂವಿನ ಗಿಡಗಳು ನೆಲಕಚ್ಚಿವೆ. ಹೀಗಾಗಿ ನಮಗೆ ಬಹಳ ಹಾನಿಯಾಗಿದೆ. ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಒತ್ತಾಯ ಮಾಡಿದ್ದಾರೆ. ಇಷ್ಟು ದಿನ ಮಳೆ ಇಲ್ಲದೇ ಭೀಕರ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಆದ್ರೆ, ಈಗ ಸುರಿದ ಮಳೆ ಹೂವು ಬೆಳೆಗಾರರನ್ನು ಕಂಗಾಲಾಗಿಸಿದೆ. ಅಷ್ಟೋ ಇಷ್ಟೋ ನೀರಾವರಿ ಮಾಡಿಕೊಂಡು ಹೂವು ಬೆಳೆದ ಬದುಕು ಕಟ್ಟಿಕೊಳ್ಳುವ ರೈತರಿಗೆ ಈಗ ಭಾರಿ ಹಾನಿಯಾಗಿದೆ. ಒಂದು ಎಕರೆ‌ ಹೂವು ಬೆಳೆಯಲು ರೈತರು ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನೆನ್ನೂ ದೀಪಾವಳಿ ಹಬ್ಬ ಬಂತು ಬಂಪರ್ ಬೆಲೆ ಸಿಗುತ್ತೆ ಎಂದು ಹೂವು ಕಟಾವು ಮಾಡದೆ ಜಮೀನಿನಲ್ಲಿ ಹಾಗೇ ಬಿಟ್ಟಿದ್ರು. ಆದ್ರೆ ಗಾಳಿ, ಮಳೆಗೆ ಸಿಲುಕಿ ಹೂವಿನ ತೋಟಗಳು ನೆಲಕ್ಕುರುಳಿವೆ.

ಇದನ್ನೂ ಓದಿ:ಬಾಗಲಕೋಟೆ: ನಿರಂತರ ಮಳೆಯಿಂದ ನೂರಾರು ಎಕರೆ ಬೆಳೆ ನಾಶ: ಉಕ್ಕಿ ಹರಿಯುತ್ತಿರುವ ಹಳ್ಳ; ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ಸಂಪರ್ಕ ಕಡಿತ

ನೂರಾರು ಎಕರೆ ಬೆಳೆದ ಹೂವು ನಾಶ

ನೂರಾರು ಎಕರೆ ಬೆಳೆದ ರೈತರ ಹೂವಿನ ತೋಟಗಳಿಗೆ ಹಾನಿಯಾಗಿದ್ದು, ಹೂವು ಹಾಳಾಗಿದೆ. ಮಾರ್ಕೆಟ್​ಗೆ ತಂದರೂ ಸೂಕ್ತ ಬೆಲೆ ಸಿಗುತ್ತಿಲ್ಲ. 10,20,30 ರೂಪಾಯಿಗೆ ಕೆಜಿ ಮಾರಾಟ ಆಗುತ್ತಿದೆ. ಇಷ್ಟೊಂದು ಹಾನಿಯಾದ್ರು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ಮಳೆ ಬಂದರೂ ಕಷ್ಟ, ಮಳೆ ಬರದಿದ್ರೂ ಕಷ್ಟ ಎಂಬಂತಾಗಿದೆ. ಇಷ್ಟು ಮಳೆ ಇಲ್ಲದೇ ಭೀಕರ ಬರದಿಂದ ಎಲ್ಲ ಬೆಳೆಗಳು ಕಳೆದುಕೊಂಡು ರೈತರು ಕಂಗಾಲಾಗಿದ್ದರು. ಬರಗಾಲದ ನಡುವೆ ನೀರಾವರಿ ಮಾಡಿ, ಹೂವು ಬೆಳೆದ ರೈತರು ಮಳೆಯ ಹೊಡೆತಕ್ಕೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ. ದೀಪಾವಳಿ ಹಬ್ಬ ನಮ್ಮ ಬಾಳಿನಲ್ಲಿ ಬೆಳಕು ತರುತ್ತದೆ ಎಂದು ಅಂದುಕೊಂಡ ರೈತರ ಪಾಲಿಗೆ ಕತ್ತಲು ಆವರಿಸಿದೆ. ಇನ್ನಾದರೂ ಸರ್ಕಾರ, ಗದಗ ಜಿಲ್ಲಾಡಳಿತ ಹೂ ಬೆಳೆಗಾರರಿಗೆ ಸಹಾಯ ಹಸ್ತ ನೀಡಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?