Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರಿ ಮಳೆಗೆ ರೈತರ ಅಪಾರ ಪ್ರಮಾಣದ ಬೆಳೆ ನಾಶ; 30 ಲಕ್ಷ ಬಂಡವಾಳ ಹಾಕಿದ್ದ ಪಾಲಿಹೌಸ್ ಬಿರುಗಾಳಿಗೆ ಸಂಪೂರ್ಣ ಜಖಂ

ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವು ಕಡೆ ನಿರಂತರ ಮಳೆಯಾಗುತ್ತಿದೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೇನು ಫಸಲು ಮಾರಾಟ ಮಾಡಬೇಕಿದ್ದ ಅನ್ನದಾತರ ಬೆಳೆಗಳು ಮಳೆಯಿಂದ ಮಣ್ಣು ಪಾಲಾಗಿದ್ದು, ಬಿರುಗಾಳಿಗೆ ಹಲವು ಪಾಲಿಹೌಸ್ಗಳು ನೆಲಕಚ್ಚಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರಿ ಮಳೆಗೆ ರೈತರ ಅಪಾರ ಪ್ರಮಾಣದ ಬೆಳೆ ನಾಶ; 30 ಲಕ್ಷ ಬಂಡವಾಳ ಹಾಕಿದ್ದ ಪಾಲಿಹೌಸ್ ಬಿರುಗಾಳಿಗೆ ಸಂಪೂರ್ಣ ಜಖಂ
ದೇವನಹಳ್ಳಿ ಬೆಳೆ ನಾಶ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 02, 2023 | 8:04 AM

ಬೆಂಗಳೂರು ಗ್ರಾಮಾಂತರ: ಬಿರುಗಾಳಿ ಸಹಿತ ಭಾರಿ ಮಳೆಗೆ ಸಂಪೂರ್ಣ ನೆಲಕ್ಕಚ್ಚಿರುವ ಪಾಲಿಹೌಸ್. ಭಾರಿ ಮಳೆಗೆ ಬೆಳೆಗಳಿಗೆ ನುಗ್ಗಿರೋ ನೀರು, ದ್ರಾಕ್ಷಿ ತೋಟದಲ್ಲಿ ಒಂದು ಅಡಿಗಳಷ್ಟು ನಿಂತಿರೋ ಮಳೆ ನೀರು. ಮಳೆಯಿಂದ ಬೆಳೆಗಳು ಹಾನಿಯಾಗಿ ಕಂಗಲಾಗಿರೋ ರೈತರು. ಹೌದು ಅಂದಹಾಗೆ ಮಳೆಯಿಂದ ಇಂತಹ ಅವಾಂತರಗಳು ಸೃಷ್ಟಿಯಾಗಿರೋದು ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋರಮಂಗಲ ಗ್ರಾಮದಲ್ಲಿ. ನಿನ್ನೆ(ಮೇ.31) ಸಂಜೆ ಒಂದು ಗಂಟೆಗಳ ಕಾಲ ಗ್ರಾಮದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಇದ್ರಿಂದ ಗ್ರಾಮದಲ್ಲಿ ರೈತರು ಬೆಳೆದಿದ್ದ ಹತ್ತಾರು ಎಕರೆ ಪ್ರದೇಶದ ಬೆಳೆಗಳಿಗೆ ಮಳೆ ನೀರು ನುಗ್ಗಿ ಅಪಾರ ಬೆಳೆಗಳು ಮಣ್ಣು ಪಾಲಾಗಿದೆ. ರೈತರು ಬೆಳೆದಿರೋ ದ್ರಾಕ್ಷಿ, ಹೀರೆಕಾಯಿ, ಹುರುಳಿ ಕಾಯಿ, ಚೆಂಡು ಹೂವು, ರೋಜ್ ಸೇರಿದಂತೆ ಹಲವು ಬೆಳೆಗಳು ಆಲಿಕಲ್ಲು ಮಳೆಗೆ ಸಂಪೂರ್ಣ ನೆಲಕ್ಕಚ್ಚಿದ್ದು, ಫಸಲು ಮಾರಾಟ ಮಾಡಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಸಂಪೂರ್ಣವಾಗಿ ನೆಲಕಚ್ಚಿದ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಪಾಲಿಹೌಸ್

ಒಂದ್ಕಡೆ ಮಿಶ್ರ ಬೆಳೆಗಳು ಭಾರಿ ಮಳೆಗೆ ನೆಲಕಚ್ಚಿ ನೀರಿನಲ್ಲಿ ಮುಳುಗಿದ್ದರೆ, ಮತ್ತೊಂದೆಡೆ ಮಳೆಯ ನೀರು ಹತ್ತಾರು ಎಕರೆ ದ್ರಾಕ್ಷಿ ತೋಟಗಳಿಗೆ ನುಗ್ಗಿ ನಾಶವಾಗಿದೆ. ಜೊತೆಗೆ ಬಿರುಗಾಳಿಗೆ ಸೊಣ್ಣೆಗೌಡ ಎಂಬುವವರು 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಪಾಲಿಹೌಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಅದರಲ್ಲಿ ಬೆಳೆದಿದ್ದ ಸುಮಾರು 80 ಸಾವಿರ ಕ್ಯಾಪ್ಸಿಕಂ ಗಿಡಗಳು ನೀರಿನಲ್ಲಿ ಮುಳುಗಿ ಹಾಳಾಗಿದೆ. ಸಾಲ ಸೋಲ ಮಾಡಿ ಹಾಕಿದ್ದ ಪಾಲಿಹೌಸ್ ನೆಲಕ್ಕಚ್ಚಿರುವ ಹಿನ್ನಲೆ ರೈತ ಕಣ್ಣಿರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗೆ ಸಾಕಷ್ಟು ಅವಾಂತರ ಒಂದೇ ಗ್ರಾಮದಲ್ಲಿ ಆಗಿದ್ದು, ಯಾವೊಬ್ಬ ಅಧಿಕಾರಿಗಳು ಇದುವರೆಗೂ ಪರಿಶೀಲನೆ ಮಾಡಿಲ್ಲ ಎಂದು ರೈತರು ದೂರಿದ್ದಾರೆ. ಪಾಲಿಹೌಸ್ ನಾಶವಾದ ರೈತ ಸಾಲ ಹೇಗೆ ತಿರಿಸಲಿ ಅಂತಾ ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ. ಇನ್ನೂ ಅಪಾರ ಪ್ರಮಾಣದ ಬೆಳೆ ನಾಶವಾಗಿರೋ ಬಗ್ಗೆ ಜಿಲ್ಲಾಡಳಿತ ಸ್ಥಳಕ್ಕೆ ಭೆಟಿಯನ್ನ ನೀಡಿ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Sidlaghatta: ಮಹಾಮಳೆಯಿಂದ ರೈತ ಕುಟುಂಬದಲ್ಲಿ ಎದ್ದಿತು ಬಿರುಗಾಳಿ – ನೊಂದು ತವರುಮನೆ ಸೇರಿದ ಪತ್ನಿ! ಕಂಗಲಾದ ರೈತ

ಒಟ್ಟಾರೆ ಕೇವಲ ಒಂದು ಗಂಟೆ ಬಿದ್ದ ಆಲಿಕಲ್ಲು ಸಹಿತ ಬಿರುಗಾಳಿಯ ಭಾರಿ ಮಳೆಗೆ ಕೋರಮಂಗಲ ಗ್ರಾಮದ ರೈತರ ಹಲವು ಬೆಳೆಗಳು ಮಣ್ಣು ಪಾಲಾಗಿದ್ದು, ಮಳೆಗೆ ಲಕ್ಷಾಂತರ ರೂ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಹಾಳಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿದೆ.

ಪಾಲಿಹೌಸ್ ಎಂದರೇನು?

ಪಾಲಿಹೌಸ್ ಕೃಷಿ ಎನ್ನುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸುವ ಆಧುನಿಕ ಕೃಷಿ ತಂತ್ರವಾಗಿದೆ. ಭಾರತದಲ್ಲಿ, ಸಾಂಪ್ರದಾಯಿಕ ಕೃಷಿಯು ಒಟ್ಟು ಉತ್ಪಾದನೆಯ 95% ನಷ್ಟಿದೆ. ಏಕೆಂದರೆ ಭಾರತದಲ್ಲಿನ ರೈತರು ಭೂಮಿಯ ವೈಯಕ್ತಿಕ ಮಾಲೀಕರು ಮತ್ತು ಸಾಮಾನ್ಯವಾಗಿ ಅವರಲ್ಲಿ ಹೆಚ್ಚಿನವರು ಕೃಷಿಗಾಗಿ ಸುಮಾರು 2 ಹೆಕ್ಟೇರ್ ಭೂಮಿಯನ್ನು ಹೊಂದಿರುತ್ತಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ