AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾಕಾಶಿ ಧಾರವಾಡದಲ್ಲಿ ಈಗ ಹಾಸ್ಟೆಲ್ ಸಮಸ್ಯೆ: ಬಾಡಿಗೆ ಕಟ್ಟಡಗಳ ಮೊರೆಹೋದ ಜಿಲ್ಲಾಡಳಿತ

ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಮತ್ತು ಬಿಸಿಎಂ ಅಡಿಯಲ್ಲಿ ಬರುವ ಎಲ್ಲ ಹಾಸ್ಟೆಲ್​ ಗಳು ಈಗ ಹೌಸ್ ಫುಲ್ ಆಗಿ ಹೋಗಿವೆ. ಇದೀಗ ಜಿಲ್ಲೆಯಲ್ಲಿ ಲಭ್ಯವಿರುವ ಹಾಸ್ಟೆಲ್​ಗಳು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಇದೀಗ ವಿದ್ಯಾರ್ಥಿಗಳು ಕಾಲೇಜು ಕ್ಲಾಸ್ ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

ವಿದ್ಯಾಕಾಶಿ ಧಾರವಾಡದಲ್ಲಿ ಈಗ ಹಾಸ್ಟೆಲ್ ಸಮಸ್ಯೆ: ಬಾಡಿಗೆ ಕಟ್ಟಡಗಳ ಮೊರೆಹೋದ ಜಿಲ್ಲಾಡಳಿತ
ಹಾಸ್ಟೆಲ್
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 12, 2023 | 12:43 PM

Share

ಧಾರವಾಡ, ನವೆಂಬರ್​​ 12: ಉನ್ನತ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅನುಕೂಲಕ್ಕಾಗಿ ಸರ್ಕಾರ ಪ್ರತಿ ಜಿಲ್ಲೆಗೂ ಹಾಸ್ಟೆಲ್‌ (Hostel) ಗಳನ್ನು ನೀಡಿದೆ. ಆದರೆ ಎಜ್ಯುಕೇಷನ್ ಹಬ್ ಆಗಿರುವ ಧಾರವಾಡ ಜಿಲ್ಲೆಯಲ್ಲಿ ಎಷ್ಟೇ ಹಾಸ್ಟೆಲ್​ಗಳನ್ನು ಸ್ಥಾಪಿಸಿದರೂ ಸಾಲುತ್ತಲೇ ಇಲ್ಲ. ಹಾಸ್ಟೆಲ್‌ಗಳ ಸಂಖ್ಯೆ ಬೆಳೆಯುತ್ತ ಹೋದರೂ, ಹಾಸ್ಟೆಲ್​ಗಾಗಿ ಕಾಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಯಾಗುತ್ತಿಲ್ಲ. ಇದೇ ಕಾರಣಕ್ಕೆ ಈಗ ಸರ್ಕಾರ ಧಾರವಾಡ ಜಿಲ್ಲೆಯನ್ನೂ ವಿಶೇಷವನ್ನಾಗಿ ಪರಿಗಣಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

ಹಾಸ್ಟೆಲ್ ಹಂಚಿಕೆ ಮಾಡೋವಾಗ ಸರ್ಕಾರ ಆಯಾ ಜಿಲ್ಲೆಗೆ ತಕ್ಕಂತೆಯೇ ಮಂಜೂರಿ ನೀಡುತ್ತೆ. ಆದರೆ ರಾಜ್ಯದಲ್ಲಿಯೇ ಧಾರವಾಡ ಜಿಲ್ಲೆ ಈಗ ವಿಶೇಷ ಜಿಲ್ಲೆಯಾಗಿ ಹೊರಹೊಮ್ಮಿದೆ. ಏಕೆಂದರೆ ಧಾರವಾಡ ನಗರವೊಂದರಲ್ಲೇ, ಮೆಟ್ರಿಕ್ ನಂತರದ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್​ಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸಂತೋಷ-ಸಮಾಧಾನದ ಸಂಗತಿ! ಮುಂಗಾರು ಹಿಂಗಾರು ಕೈಕೊಟ್ಟರೂ ಆ ರೈತ ಮಾಡಿದ ಸೂಪರ್​ ಐಡಿಯಾಗೆ ಬಂಪರ್​ ಬೆಳೆ- ಮಹಿಳಾ ಕೃಷಿ ಕಾರ್ಮಿಕರಿಗೆ ಕೈತುಂಬಾ ಕೆಲಸ

ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಮತ್ತು ಬಿಸಿಎಂ ಅಡಿಯಲ್ಲಿ ಬರುವ ಎಲ್ಲ ಹಾಸ್ಟೆಲ್​ ಗಳು ಈಗ ಹೌಸ್ ಫುಲ್ ಆಗಿ ಹೋಗಿವೆ. ಇದೀಗ ಜಿಲ್ಲೆಯಲ್ಲಿ ಲಭ್ಯವಿರುವ ಹಾಸ್ಟೆಲ್​ಗಳು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಇದೀಗ ವಿದ್ಯಾರ್ಥಿಗಳು ಕಾಲೇಜು ಕ್ಲಾಸ್ ಬಿಟ್ಟು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಸದ್ಯ ಮೂರು ಇಲಾಖೆ ಸೇರಿ ಲಭ್ಯ ಇರೋದು ಸುಮಾರು 10 ಸಾವಿರ ಪ್ರವೇಶಾವಕಾಶ ಮಾತ್ರ. ಆದರೆ ಅರ್ಜಿ ಸಲ್ಲಿಸಿರೋದು 30 ಸಾವಿರ ವಿದ್ಯಾರ್ಥಿಗಳು. ಹೀಗಾಗಿ ಹಾಸ್ಟೆಲ್​ಗಳ ಸಂಖ್ಯೆ ಬಾಡಿಗೆ ಕಟ್ಟಡಗಳಲ್ಲಿಯಾದರೂ ಸರಿಹೊಂದಿಸೋಕೆ ಈಗ ಜಿಲ್ಲಾಡಳಿತ ಪರದಾಡುತ್ತಿದೆ.

ಮೊದಲೆಲ್ಲ ಧಾರವಾಡ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳವರು ಮಾತ್ರವೇ ಧಾರವಾಡಕ್ಕೆ ಓದುವುದಕ್ಕೆ ಬರುತ್ತಿದ್ದರು. ಆದರೆ ಇತ್ತೀಚೆಗೆ ಉತ್ತರ ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳವರು ಇಲ್ಲಿ ಒಳ್ಳೆ ಶಿಕ್ಷಣ ಸಿಗುತ್ತೆ ಅಂತಾ ಧಾರವಾಡದ ಕಾಲೇಜ್‌ಗಳಿಗೆ ಮೊರೆ ಹೋಗತಾ ಇದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಧಾರವಾಡದಲ್ಲಿ ಕಾಲೇಜ್​ಗಳ ಸಂಖ್ಯೆಯೂ ಬೆಳೆಯುತ್ತ ಹೊರಟಿದೆ. ಆದರೆ ಅದಕ್ಕೆ ತಕ್ಕಂತೆ ಹಾಸ್ಟೆಲ್‌ಗಳ ವಿಷಯದಲ್ಲಿ ಮಾತ್ರ ಹೆಚ್ಚಳ ಆಗಿಯೇ ಇಲ್ಲ.

ಇದನ್ನೂ ಓದಿ: ಈರುಳ್ಳಿ ಬೆಲೆ ಹೆಚ್ಚಳ; ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮೂಲಕ ಈರುಳ್ಳಿ ವಿತರಣೆ; ಎಲ್ಲಿ ಗೊತ್ತಾ?

ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿ 4800 ರಷ್ಟು ಮಕ್ಕಳ ಇದಾರೆ. ಆದರೂ ಇನ್ನೂ 5000 ವಿದ್ಯಾರ್ಥಿಗಳು ಇನ್ನೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕಾಗಿಯೇ 6 ಕಟ್ಟಡ ಬಾಡಿಗೆ ಪಡೆದಿದ್ದಾರೆ.‌ ಅಲ್ಪಸಂಖ್ಯಾತರ ಇಲಾಖೆ ಅಡಿಯಲ್ಲಿ ಇನ್ನೂ 15000 ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇದರಿಂದಾಗಿ ಸ್ವ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆಯಂತೆ.‌ ಈ ಮಧ್ಯೆ ಸಮಸ್ಯೆಯ ಅರಿವು ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್. ಸಿ.‌ಮಹದೇವಪ್ಪ ಅವರಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಧಾರವಾಡದ ಗೌರಿಶಂಕರ ಹಾಸ್ಟೆಲ್‌ಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು.

ಹಾಸ್ಟೆಲ್​ಗೆ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಸೀಟನ್ನು ಕೊಡಲೇಬೇಕು ಅಂತಾ ಸರಕಾರ ಸ್ಪಷ್ಟವಾದ ಆದೇಶವನ್ನು ನೀಡಿದೆ. ಆದರೆ ಇದೀಗ ಅರ್ಜಿ ಹಾಕಿದ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಕ್ಕೇ ಇಲ್ಲ. ಇದೇ ಕಾರಣಕ್ಕೆ ಈಗ ಇರೋ ಹಾಸ್ಟೆಲ್​ಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಹಾಕುತ್ತಿದ್ದು, ಇದು ಶೈಕ್ಷಣಿಕ ಭವಿಷ್ಯದ ಮೇಲೂ‌ ಪರಿಣಾಮ ಬೀರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಸಾಲ ತಾನೇ ಭರಿಸೋದಾಗಿ ಹೇಳಿದ ಸಚಿವ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಹಿಳೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಲು ಶಕ್ತಿ ಯೋಜನೆ: ಸೌಮ್ಯ ರೆಡ್ಡಿ
ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವು, 11 ಜನರಿಗೆ ಗಾಯ
ಮಾವು ತುಂಬಿದ್ದ ಟ್ರಕ್ ಪಲ್ಟಿಯಾಗಿ 9 ಮಂದಿ ಸಾವು, 11 ಜನರಿಗೆ ಗಾಯ
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್