ವೀಸಾ ಅವಧಿ ಮುಗಿದ ಕಾರಣ ರಷ್ಯನ್ ಮಹಿಳೆ ನೈನಾ ತನ್ನಿಬ್ಬರು ಮಕ್ಕಳೊಂದಿಗೆ ಗೋಕರ್ಣ ಬಳಿ ಗುಹೆಯಲ್ಲಿ ವಾಸವಾಗಿದ್ದಳೇ?
ಸುಮಾರು 8-10 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದ ಮೇಲೆ ಭಾರತಕ್ಕೆ ಆಗಮಿಸಿರುವ ನೈನಾ ತಮ್ಮ ದಾಖಲಾತಿ ಪತ್ರಗಳನ್ನು ಕಳೆದುಕೊಂಡಿರುವರಂತೆ. ಪೊಲೀಸರಿಗೆ ಅವು ಅರಣ್ಯಪ್ರದೇಶದಲ್ಲಿ ಸಿಕ್ಕಿವೆ ಅಂತ ಹೇಳಲಾಗಿದ್ದು ಅವರ ವೀಸಾ ಅವಧಿ ಮುಗಿದಿದೆ. ಅದೇ ಕಾರಣಕ್ಕೆ ಅವರು ಗುಹೆಯಲ್ಲಿ ವಾಸವಾಗಿರಬಹುದು. ಭಾರತೀಯ ಪರಂಪರೆ, ಧಾರ್ಮಿಕತೆಯಿಂದ ತುಂಬಾ ಪ್ರಭಾವಿತರಾಗಿರುವ ಗುಹೆಯಲ್ಲಿ ನೈನಾ ಹಿಂದೂ ದೇವ-ದೇವತೆಗಳಿಗೆ ಪೂಜೆ ಮಾಡಿರುವುದನ್ನು ನೋಡಬಹುದು.
ಈ ರಷ್ಯನ್ ಮಹಿಳೆ ತನ್ನ ಇಬ್ಬರು ಚಿಕ್ಕ ಚಿಕ್ಕ ಹೆಣ್ಣುಮಕ್ಕಳೊಂದಿಗೆ ಗೋಕರ್ಣದ ಸಮುದ್ರದಂಚಿಗೆ (Gokarna Coast) ಇರುವ ರಾಮತೀರ್ಥ ಬೆಟ್ಟದ ನಡುವಿನ ಗುಹೆಯೊಂದರಲ್ಲಿ ಎರಡು ವಾರ ವಾಸವಾಗಿದ್ದಳು ಅಂದರೆ ನಂಬ್ತೀರಾ? ದಟ್ಟ ಅರಣ್ಯ ಪ್ರದೇಶ ಆವತ್ತಗೊಂಡಿರುವ ಮತ್ತು ಸಂಪೂರ್ಣವಾಗಿ ನಿರ್ಜನ ಪ್ರದೇಶವಾಗಿರುವ ಗುಹೆಯಲ್ಲಿ ಈಕೆ ವಾಸವಾಗಿದ್ದನ್ನು ಪ್ರವಾಸಿರರ ಸುರಕ್ಷತೆಗಾಗಿ ಬೆಟ್ಟ ಮತ್ತು ಅರಣ್ಯದ ಸುತ್ತಮುತ್ತ ಪೆಟ್ರೋಲಿಂಗ್ ಮಾಡುವ ಗೋಕರ್ಣ ಪೊಲೀಸರು ಪತ್ತೆ ಮಾಡಿದ್ದು ಆಕಸ್ಮಿಕ. ಪೊಲೀಸರು ಹೇಳುವ ಪ್ರಕಾರ ಪ್ರದೇಶದಲ್ಲಿ ವಿಷಸರ್ಪ ಮತ್ತು ವಿಷಜಂತುಗಳು ಹರಿದಾಡುತ್ತಿರುತ್ತವೆ. ಅದರೆ, 40-ವರ್ಷ ವಯಸ್ಸಿನ ನೈನಾ ಕುಟೀನಾ ಹೆಸರಿನ ಈ ಮಹಿಳೆ ಹೇಳೋದೇ ಬೇರೆ. ಗುಹೆಯ ಸುತ್ತಮುತ್ತ ವಿಷಸರ್ಪಗಳೇನೂ ಹರಿದಾಡೋದಿಲ್ಲ, ಅವು ಕಂಡರೂ ತಮ್ಮ ಪಾಡಿಗೆ ತಾವು ಹೋಗುತ್ತವೆ, ನಮಗೇನೂ ತೊಂದರೆ ಮಾಡಲ್ಲ, ಜನವಸತಿ ಪ್ರದೇಶದಲ್ಲಿ ಹಾವುಗಳು ಕಾಣೋದುಂಟಲ್ಲ, ಹಾಗೆಯೇ ಇಂಥ ಸ್ಥಳಗಳಲ್ಲೂ ಅವು ಕಾಣುತ್ತವೆ ಎಂದು ನೈನಾ ಹೇಳುತ್ತಾರೆ.
ಇದನ್ನೂ ಓದಿ: ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

